ಹಗರಿಬೊಮ್ಮನಹಳ್ಳಿ: ದುಂದು ವೆಚ್ಚದ ಅಡಂಬರಿಕದಿಂದ ಆರ್ಥಿಕ ಹೊರೆಯನ್ನು ಹೆಚ್ಚಿಸುವ ಮದುವೆಗಳಿಗಿಂತ ಅದ್ದೂರಿತನ ಪ್ರದರ್ಶನಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹಗಳೆ ಉತ್ತಮ ಎಂದು ನಗರಸಭೆಯ ನಂದಿಪುರ ಮಹೇಶ್ವರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಸಾಮೂಹಿಕ ವಿವಾಹ ಬಡವರ ಬಾಳಿನ ಬೆಳಕು
ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಪಾಕ್ಷಿಕ ಪತ್ರಿಕೆಯೊಂದರ 27ನೇ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಸಾಮೂಹಿಕ ವಿವಾಹಗಳಲ್ಲಿ ಹಸೆಮಣೆಗೇರುವ ದಂಪತಿಗಳು ಭಾಗ್ಯವಂತರು. ದುಬಾರಿ ದಿನಗಳಲ್ಲಿ ಒಂದು ಮದುವೆ ಮಾಡಲು ನಾಲ್ಕೈದು ಲಕ್ಷ ಖರ್ಚು ವ್ಯಯಿಸಬೇಕಾಗುತ್ತದೆ. ಬಡವರ ಮದುವೆ ದುಂದುವೆಚ್ಚ ನಿಯಂತ್ರಿಸಲು ಸಾಮೂಹಿಕ ಮದುವೆಗಳು ಮಾದರಿಯಾಗಿವೆ ಎಂದರು.
ಪತ್ರಕರ್ತ ಬುಡ್ಡಿ ಬಸವರಾಜ್ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಬಡವರು ಎಂದು ತಿಳಿದುಕೊಳ್ಳಬೇಡಿ ಪೂಜ್ಯರ ಸಮ್ಮುಖದಲ್ಲಿ ಸಾವಿರಾರು ಜನರ ಅರ್ಶಿವಾದದಿಂದ ಮದುವೆ ಆಗುವ ನೀವು ಭಾಗ್ಯವಂತರು. ಜಾತ್ಯಾತೀಯವಾಗಿ ಎಲ್ಲ ವರ್ಗದ ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಇದ್ದಾರೆ. ಸಮಾಜಮುಖಿ ಚಿಂತನೆಗಳಿಂದ ಇಂತಹ ಸತ್ಕಾರ್ಯಗಳು ಸಾಧ್ಯವಾಗಲಿವೆ ಎಂದರು.
ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ, ಬೆಣ್ಣಿಹಳ್ಳಿಯ ಪಂಚಾಕ್ಷರಿ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಹಿರಿಯ ಪತ್ರಕರ್ತ ಸಿ.ಮಂಜುನಾಥ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ಕುರಿ ಶಿವಮೂರ್ತಿ, ಪ್ರಮುಖರಾದ ಎಲ್.ಪಿ.ಟಿಕ್ಯಾ ನಾಯ್ಕ,
ಉಪ್ಪಾರ್ ಕಾಳಪ್ಪ, ಹೆಗ್ಡಾಳ್ ರಾಮಣ್ಣ, ಅನಿಲ್ ಕುಮಾರ್ ಜಾಣ, ಗುರುಬಸವರಾಜ, ಪತ್ರೇಶ್ ಹಿರೇಮಠ್, ಕನ್ನಿಹಳ್ಳಿ ಚಂದ್ರಶೇಖರ್, ಜಳಕಿ ಗುರುಸಿದ್ದಪ್ಪ, ಹಂಪಾಪಟ್ಟಣ ಗ್ರಾಪಂ ಅಧ್ಯಕ್ಷ ಬಿ.ನಾಗರಾಜ್, ಲಿಂಗರಾಜ್, ಶಿವಪ್ರಕಾಶ್, ಯೋಗಾನಂದ ವಕೀಲರು, ಉಮಾಶಂಕರ್, ಭೋವಿ ರಮೇಶ, ಅಂಬಳಿ ಕೇಶವಮೂರ್ತಿ ಇತರರಿದ್ದರು.