More

    ವರ್ಷಾಚರಣೆ ಪಾರ್ಟಿಗೆ ಪೂರೈಸಲು ಡ್ರಗ್ಸ್ ಸಂಗ್ರಹ; ವಿದೇಶಿ ಪೆಡ್ಲರ್ ಬಳಿ 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

    ಬೆಂಗಳೂರು: ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಸಜ್ಜಾಗಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿದ ಸಿಸಿಬಿ ಪೊಲೀಸರು, 21 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ.

    ನೈಜೀರಿಯಾ ಮೂಲದ ಲಿಯೊನಾರ್ಡ್ ಒಕ್ವುಡಿಲಿ (44) ಬಂಧಿತ. 21 ಕೋಟಿ ರೂ. ಮೌಲ್ಯದ 16 ಕೆಜಿ ಎಂಡಿಎಂಎ ಕ್ರಿಸ್ಟಲ್, 500 ಗ್ರಾಂ ಕೊಕೇನ್ ಮತ್ತು 1 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ತಿಳಿಸಿದ್ದಾರೆ.

    ನೈಜೀರಿಯಾ ಮೂಲದ ಲಿಯೊನಾರ್ಡ್, ಒಂದು ವರ್ಷದ ಹಿಂದೆ ಬಿಸಿನೆಸ್ ವೀಸಾದ ಮೇಲೆ ನಗರಕ್ಕೆ ಬಂದು ರಾಮಮೂರ್ತಿನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ. 2024ರ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುವ ಉದ್ದೇಶದಿಂದ ಪ್ಲ್ಯಾನ್ ಮಾಡಿದ್ದ. ದೆಹಲಿ, ಮುಂಬೈ ಮತ್ತು ಇತರ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಸಂಪರ್ಕ ಮಾಡಿ ಎಂಡಿಎಂಎ, ಕ್ರಿಸ್ಟಲ್ ಮತ್ತು ಕೊಕೇನ್‌ನ್ನು ಕಡಿಮೆ ಬೆಲೆಗೆ ಖರೀದಿಸಿ ಅಲ್ಲಿಂದ ಬಟ್ಟೆ, ಬೆಡ್‌ಶೀಟ್, ಸೂಪ್ ಬಾಕ್ಸ್ ಮತ್ತು ಚಾಕಲೇಟ್ ಬಾಕ್ಸ್‌ಗಳಲ್ಲಿ ಬಚ್ಚಿಟ್ಟು ಪಾರ್ಸೆಲ್ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಅದರಲ್ಲೂ ಪಾರ್ಸೆಲ್‌ಗಳು ಒಂದೇ ವಿಳಾಸಕ್ಕೆ ಬಂದರೇ ಅನುಮಾನ ಬರಲಿದೆ ಎಂದು ಬೇರೆ ಬೇರೆ ವಿಳಾಸಕ್ಕೆ ಬುಕ್ ಮಾಡಿಕೊಂಡು ಸ್ವೀಕರಿಸುತ್ತಿದ್ದ.

    ಆನಂತರ ತನ್ನ ಮನೆಯಲ್ಲಿ ಸಂಗ್ರಹಿಸಿದ್ದ. ಹೊಸ ವರ್ಷಾಚರಣೆ ಪಾರ್ಟಿಗಳಿಗೆ, ಕಾಲೇಜು ವಿದ್ಯಾರ್ಥಿಗಳು, ಐಟಿ/ಬಿಟಿ ನೌಕರರಿಗೆ ಮಾರಾಟ ಮಾಡಲು ಸಂಚುರೂಪಿಸಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೆಡ್ಲರ್ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ರಾಮಮೂರ್ತಿನಗರ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಮತ್ತು ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ. ಪೆಡ್ಲರ್ ಲಿಯೊನಾರ್ಡ್ ಯಾರ ಕಡೆಯಿಂದ ಡ್ರಗ್ಸ್ ಖರೀದಿ ಮಾಡುತ್ತಿದ್ದ. ಯಾರು ಈತನ ಗ್ರಾಹಕರು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts