More

    ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾರ್ಯಕ್ಕೆ ಸಹಕರಿಸಿ


    ಕಲಘಟಗಿ: ಸರ್ಕಾರದ ಮಹತ್ವಪೂರ್ಣ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾರ್ಯವನ್ನು ಉಳಿಸಿ-ಬೆಳೆಸಲು ಸಾರ್ವಜನಿಕರು ಸಹಕಾರ ನೀಡುವ ಅವಶ್ಯಕತೆಯಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
    ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಿರುವ ವಲಯ ಅರಣ್ಯ ಇಲಾಖೆಯ ಕಲ್ಲಾಪೂರ ಸಸ್ಯಪಾಲನಾ ಕೇಂದ್ರದಲ್ಲಿ ಸುಮಾರು ಹತ್ತು ಎಕರೆ ಜಮೀನಿನಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಗೊಳ್ಳುತ್ತಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಕರೋನಾ ಸೋಂಕು ಭೀತಿ ಸಂದರ್ಭದಲ್ಲಿ ಇಂತಹ ಉದ್ಯಾನಗಳು ಜನರ ಆರೋಗ್ಯದ ವೃದ್ಧಿಯೊಂದಿಗೆ ಪ್ರವಾಸಿ ತಾಣವಾಗಲಿದೆ. ಐದು ವರ್ಷಗಳ ಅವಧಿಯ ಈ ಕಾಮಗಾರಿಗೆ ಮೊದಲ ಹಂತವಾಗಿ 19.50 ಲಕ್ಷ ರೂಪಾಯಿ ಮಂಜೂರಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇನ್ನೂ ಹೆಚ್ಚಿನ ಅನುದಾನ ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದರು.
    ಸುಮಾರು 150 ಕಿ.ಮೀ. ವಿಸ್ತಾರದ ತಾಲೂಕಿನ ಅರಣ್ಯ ಪ್ರದೇಶ ಸಂರಕ್ಷಣೆಗೆ ಇಲಾಖೆಯ ವಿವಿಧ ವಿಭಾಗಗಳಲ್ಲಿ ನೌಕರರ ಕೊರತೆಯಿದ್ದು, ನೇಮಕ ಪ್ರಕ್ರಿಯೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
    ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ, ಜಿ.ಆರ್. ಕಡೆಮನಿ, ಪಪಂ ಸದಸ್ಯರಾದ ಗಂಗಾಧರ ಗೌಳಿ, ಕೃಷ್ಣಾ ತಹಸೀಲ್ದಾರ್ ಸುನೀಲ ಗಬ್ಬೂರ, ಲಕ್ಷ್ಮಣ ಬೆಟಗೇರಿ, ಬಸವರಾಜ ಕಡ್ಲಾಸ್ಕರ, ಅರಣ್ಯ ಇಲಾಖೆಯ ಮೌನೇಶ ಲಿಂಗಶೆಟ್ಟಿ, ರಾಜೇಸಾಬ್ ಗಂಜಿಗಟ್ಟಿ, ಇತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts