More

    ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಂದ ಹಿಂದೆ ಸರಿದ ರಾಹುಲ್​ ಗಾಂಧಿಯನ್ನು ಅಣಕಿಸಿದ ಬಿಜೆಪಿ

    ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸಲು ಹಿಂದೆ ಸರಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಬಿಜೆಪಿ ಅಣುಕಿಸಿದೆ.

    ಹಲವು ಮಾಧ್ಯಮ ವರದಿಗಳು ದೃಢಪಡಿಸಿದಂತೆ ರಾಹುಲ್​ ಗಾಂಧಿ ಇಂದು ಬಹಿರಂಗ ಚರ್ಚೆ ನಡೆಸುವ ಸಾಧ್ಯತೆ ಇತ್ತು. ಆದರೆ, ಅವರ ಹಠಾತ್ ನಡೆಯಿಂದಾಗಿ ಗೌರವ್ ಗೊಗೊಯ್ ಅವರು ಚರ್ಚೆ ಆರಂಭಿಸುವ ಅಧಿಕಾರ ವಹಿಸಿಕೊಂಡು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಚಾಲನೆ ನೀಡಿದರು.

    ಗೊಗೊಯ್ ಅವರು ಚರ್ಚೆಯನ್ನು ಪ್ರಾರಂಭಿಸುತ್ತಿದ್ದಂತೆ ಬಿಜೆಪಿಯು ರಾಹುಲ್ ಗಾಂಧಿಯ ಹಠಾತ್ ಹಿನ್ನಡೆಯನ್ನು ಲೇವಡಿ ಮಾಡಿದೆ. ರಾಹುಲ್​ ಅವರು ಹೆದರಿ ಹಿಂದೆ ಸರಿದಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

    ಇದನ್ನೂ ಓದಿ: ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ :ಕಾಂಗ್ರೆಸ್ -ಜೆಡಿಎಸ್‌ಗೆ ತಲಾ ಎರಡು ಅಧ್ಯಕ್ಷಗಿರಿ ಸಂಭವ

    ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವ ವಿಪಕ್ಷಗಳ ಒಕ್ಕೂಟದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು, 2024ರ ಲೋಕಸಭಾ ಚುನಾವಣೆಗೂ ಮುನ್ನ ಇಂಡಿಯಾ ವಿಪಕ್ಷ ಒಕ್ಕೂಟವೂ ಸೆಮಿಫೈನಲ್​ ಆಡಲು ಬಯಸಿವೆ. ಆದರೆ, ಅದರ ಫಲಿತಾಂಶಗಳು ನೋಡಲು ಹೊರಗಿವೆ ಮತ್ತು ಕೊನೆಯ ಬಾಲ್​ನಲ್ಲಿ ಸಿಕ್ಸರ್​ ಬಾರಿಸಲು ಬಯಸುತ್ತಿವೆ ಎಂದರು.

    ಇದು ವಿಪಕ್ಷಗಳ ಸ್ವಂತ ಆಂತರಿಕ ನಂಬಿಕೆಯ ಪರೀಕ್ಷೆಯಾಗಿದೆ. ಅವಿಶ್ವಾಸ ಮತವನ್ನು ನಡೆಸುವುದರಿಂದ ಯಾರು ಒಗ್ಗಟ್ಟಾಗಿದ್ದಾರೆ ಮತ್ತು ಯಾರು ಒಗ್ಗಟ್ಟಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 2018ರಲ್ಲಿಯೇ ನಾವು ಅವರಿಗೆ ಅವಿಶ್ವಾಸ ನೀಡಿದ್ದೇವೆ ಎಂದು ಪ್ರಧಾನಿ ಟೀಕಿಸಿದರು.

    ಇಂಡಿಯಾ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇಕೆ?

    ಮಣಿಪುರದಲ್ಲಿನ ಹಿಂಸಾತ್ಮಕ ಪರಿಸ್ಥಿತಿಯ ಕುರಿತಂತೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕೆಂದು ಮುಂಗಾರು ಅಧಿವೇಶನದ ಆರಂಭದಿಂದಲೂ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಹಲವು ದಿನಗಳ ಪ್ರತಿಭಟನೆಗಳು ಮತ್ತು ಸಭಾತ್ಯಾಗಗಳ ನಂತರ ಪ್ರತಿಪಕ್ಷಗಳು ಜುಲೈ 26ರಂದು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಎರಡು ಪ್ರತ್ಯೇಕ ನೋಟಿಸ್​ಗಳನ್ನು ನೀಡಿದವು. (ಏಜೆನ್ಸೀಸ್​)

    ವಿಪಕ್ಷಗಳು ಕೊನೆಯ ಬಾಲ್​ನಲ್ಲಿ ಸಿಕ್ಸರ್​ ಬಾರಿಸಲು ಬಯಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ

    ರಾಹುಲ್​ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ ಆದ್ರೆ ಒಂದು ಕಂಡೀಷನ್​ ಎಂದ ನಟಿ ಶೆರ್ಲಿನ್​ ಚೋಪ್ರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts