More

    ಕೇಂದ್ರದಿಂದ ಕಾಫಿ ಬೆಳೆಗಾರರ ನಿರ್ಲಕ್ಷ್ಯ ಕಾಫಿ ಮಂಡಳಿ ಅಧ್ಯಕ್ಷರ ರಾಜೀನಾಮೆಗೆ ಆಗ್ರಹ

    ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಲು ವಿಫಲವಾಗಿದ್ದು, ಕಾಫಿ ಮಂಡಳಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಒತ್ತಾಯಿಸಿದ್ದಾರೆ.

    ವಿವಿಧ ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರು ಬೀದಿಗೆ ಬೀಳುವ ದಯನೀಯ ಪರಿಸ್ಥಿತಿ ಬಂದಿದ್ದರೂ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಫಿ ಬೆಳೆಗಾರರಿಗೆ ನಯಾಪೈಸೆ ಅನುಕೂಲವಾಗಿಲ್ಲ. ಬೆಳೆಗಾರರ ಪಾಲಿಗೆ ಪ್ರಕೃತಿ ಸಹ ವಿರುದ್ಧವಾಗಿದೆ. ಕಾಡುಪ್ರಾಣಿಗಳು ಅದರಲ್ಲೂ ಮಂಗಗಳು ಕಾಫಿ ಫಸಲು ನಾಶಪಡಿಸುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲದಂತಾಗಿದೆ. ಹೀಗೆ ಅನೇಕ ಕಾರಣಗಳಿಂದ ಕಾಫಿ ಉದ್ಯಮ ವಿನಾಶದ ಅಂಚಿಗೆ ತಲುಪಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೇಂದ್ರ ವಿತ್ತ ಸಚಿವರು ಕೆಲವು ದಿನಗಳ ಹಿಂದೆ ಕಾಫಿ ಬೆಳೆಗಾರರ ಜತೆ ವೆಬಿನಾರ್ ಮೂಲಕ ಸಮಾಲೋಚನೆ ಮಾಡಿದ್ದರು. ಕಾಫಿ ಮಂಡಳಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

    ಮನಮೋಹನ್​ಸಿಂಗ್ ಪ್ರಧಾನಿಯಾಗಿದ್ದಾಗ ವಿದರ್ಭ ಪ್ಯಾಕೇಜ್​ನಡಿ ಕಾಫಿ ಉದ್ಯಮಕ್ಕೆ ಸಾಕಷ್ಟು ನೆರವು ನೀಡಿ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಬಿಜೆಪಿ ಸರ್ಕಾರ ಬಂದ ಬಳಿಕ ಎಲ್ಲ ರೀತಿಯ ಸಹಾಯಧನ ಯೋಜನೆಗಳು ಸ್ಥಗಿತಗೊಂಡಿವೆ. ಕಾಫಿ ಸಂಶೋಧನಾ ವಿಭಾಗ ತಟಸ್ಥವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts