ಬೆಳಗಾವಿ: ಬಿಜೆಪಿ ಶಾಸಕ ಅನಿಲ್ ಬೆನಕೆಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿಚಾರವಾಗಿ ಶಾಸಕ ಸೇರಿದಂತೆ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಮಹಾನಗರ ಪಾಲಿಕೆ ಸದಸ್ಯ ಶ್ರೇಯಸ್, ಇಬ್ಬರು ಕಾರ್ಯಕರ್ತರು ಸೇರಿ ನಾಲ್ಕು ಜನರ ಮೇಲೆ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪರಿಷತ್ ಚುನಾವಣೆಯ, ವಿಶ್ವೇಶ್ವರಯ್ಯ ನಗರದ ಮತದಾನ ಮಾಡುವ ಕೊಠಡಿಗೆ ತೆರಳಿ ಶಾಸಕ ಅನಿಲ್ ಬೆನಕೆ ಪೋನ್ ನಲ್ಲಿ ಮಾತನಾಡಿದ್ದರು. ಈ ಸಂಬಂಧ ಪ್ರಜಾಪ್ರತಿನಿಧಿ ಕಾಯ್ದೆಯಡಿಯಲ್ಲಿ ಚುನಾವಣಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ನಿಯಮ ಉಲ್ಲಂಘಿಸಿ ಶಾಸಕ ಬೆನಕೆ ಓಡಾಟ! ಮತದಾರರು ಆಕ್ರೋಶ
ಕಾಂಗ್ರೆಸ್ ಅಭ್ಯರ್ಥಿಯಿಂದ ಹಣದ ಹೊಳೆ: ಸಾಕ್ಷಿ ಸಹಿತ ಸಿಕ್ಕಿಬಿದ್ದಿದ್ದು, ಕ್ರಮ ಕೈಗೊಳ್ಳಿ ಎಂದ ಬಿಜೆಪಿ ಶಾಸಕ