More

    ಸುಬ್ಬಕ್ಕನ ಕೋಳಿಯ ಕಥೆಯಲ್ಲ ಇದು ಇಟಲಿ ಅಜ್ಜನ ಕೋಳಿಯ ಕಥೆ-ವ್ಯಥೆ!

    ರೋಮ್​: ನನ್ನ ಕೋಳಿ ಕೂಗುವುದರಿಂದಲೇ ಊರಿಗೆ ಬೆಳಗಾಗೋದು ಅಂತ ಅಂದ್ಕೊಂಡಿದ್ದ ಸುಬ್ಬಕ್ಕನ ಕೋಳಿಯ ಕಥೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಅದನ್ನು ನೆನಪಿಸುವ ಈ ಕಥೆ ಇಟಲಿಯ ಅಜ್ಜನ ಕೋಳಿಯದ್ದು! ಮುಂಜಾನೆ ಎದ್ದು ಸೂರ್ಯೋದಕ್ಕೆ ಮುನ್ನ ಕೋಳಿ ಕೂಗುತ್ತದೆ ಎಂಬುದೇ ಇಲ್ಲಿ ಕಥೆ ಮತ್ತು ವ್ಯಥೆ!

    ಇಟಲಿಯ ಲೊಂಬಾರ್ಡಿಯ ಕ್ಯಾಸ್ಟಿರಗಾ ವಿಡರ್ಡೊ ಎಂಬ ಪಟ್ಟಣದಲ್ಲಿ ನಡೆದ ಘಟನೆ ಇದು. ಆಂಗೆಲೋ ಬೊಲೆಟ್ಟಿ ಎಂಬ 83 ವರ್ಷ ವಯಸ್ಸಿನ ಅಜ್ಜ ಮತ್ತು ಕಾರ್ಲಿನೊ ಎಂಬ ಹೆಸರಿನ ಆತನ ಹುಂಜ ಇಲ್ಲಿ ಕೇಂದ್ರ ಬಿಂದು. ಈ ಅಜ್ಜನ ಬದುಕು ಸಾಗುವುದು ಪಿಂಚಣಿಯ ದುಡ್ಡಿನಿಂದ. ಕಾರ್ಲಿನೊ ನಸುಕಿನ 4.30ಕ್ಕೆಲ್ಲ ಎದ್ದು ಜೋರಾಗಿ ಕೂಗತೊಡಗುತ್ತದೆ. ಆ ಮೂಲಕ ನೆರೆಹೊರೆಯವರನ್ನೆಲ್ಲ ನಿದ್ದೆಯಿಂದ ಎಬ್ಬಿಸಿಬಿಡುತ್ತದೆ.

    ಅವರೆಲ್ಲ ಆಂಗಲೋ ಬೊಲೆಟ್ಟಿ ಬಳಿ ಬಂದು ಕಾರ್ಲಿನೊ ವಿರುದ್ಧ ದೂರು ಹೇಳಿದರು. ಬೆಳ್ಳಂಬೆಳಗ್ಗೆ ಸಿಹಿ ನಿದ್ದೆಯನ್ನು ಹಾಳುಮಾಡುತ್ತಿದೆ. ಅದನ್ನು ಕೂಗದಂತೆ ಮಾಡಿ ಎಂದು ಕೇಳಿಕೊಂಡರು. ಪಾಪ ! ಅಜ್ಜ ಆಂಗಲೋ ಏನು ಮಾಡಿಯಾರು. ಆಯಿತು ಎಂದರೂ ಕಾರ್ಲಿನೊ ಮಾರನೇಯ ದಿನವೂ ನಸುಕಿನಲ್ಲೇ ಎದ್ದು ಮರದ ಕೊಂಬೆಯನ್ನೇರಿ ಕೂಗ ತೊಡಗಿತು. ಈ ಕೋಳಿಯ ಕೂಗು ಕೇಳಿ ಕಿರಿಕಿರಿಯಾದ ನೆರೆಹೊರೆಯವರೆಲ್ಲ ಸ್ಥಳೀಯಾಡಳಿತಕ್ಕೆ ದೂರು ನೀಡಿದರು.

    ಇದನ್ನೂ ಓದಿ: ‘ಜಮೀರ್​ ಅಹ್ಮದ್​ ಬೆಂಗಳೂರು ಗಲಭೆಯ ಡೈರೆಕ್ಟರ್​, ಪ್ರೊಡ್ಯೂಸರ್​…’

    ಅಲ್ಲಿನ ಕಾನೂನು ಪ್ರಕಾರ, ಯಾವ ಮನೆಯವರೇ ಆದರೂ ಸಾಕು ಪ್ರಾಣಿಗಳನ್ನು ಸಾಕವುದಾದರೆ ಅದು ನೆರೆ ಮನೆಯಿಂದ 10 ಮೀಟರ್​ ದೂರದಲ್ಲಿರಬೇಕು. ಈ ನಿಯಮ ಉಲ್ಲಂಘನೆಯಾದುದು ಮೇಲ್ನೋಟಕ್ಕೆ ಕಂಡುಬಂತು. ಈ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅಜ್ಜನಿಗೆ 15,000 ರೂಪಾಯಿ ದಂಡ ಪಾವತಿಸುವಂತೆ ಸ್ಥಳೀಯಾಡಳಿತ ಆದೇಶಿಸಿತು. ಆದರೆ ಕೋಳಿ ಕೂಗುವುದನ್ನು ತಡೆಯುವುದಕ್ಕೆ ಅಲ್ಲಿ ಕಾನೂನು ಇರಲ್ಲಿಲ್ಲ!

    ಇದನ್ನೂ ಓದಿ: ‘ನಂಗೆ ಕಾಲಲ್ಲೆಲ್ಲ ಏನೋ ಒಂಥರಾ ಫೀಲಿಂಗ್​…’ ಎಂದು ಆ ಮಹಿಳೆ ಹೇಳ್ತಾ ಇದ್ದುದು ಯಾಕೆ!?

    ಕೋಳಿ ಸಾಕಿದ ತಪ್ಪಿಗೆ 15,000 ರೂಪಾಯಿ ದಂಡ ಪಾವತಿಸಬೇಕಾಗಿ ಬಂದುದಕ್ಕೆ ಅಜ್ಜ ದುಃಖಿತರಾಗಿದ್ದಾರೆ. ಅದೂ ಅಲ್ಲದೆ, ಈ ಬಗ್ಗೆ ಮೇಲ್ಮನವಿ ಸಲ್ಲಿಸಿ ದಂಡದಿಂದ ಬಚಾವ್ ಆಗುವುದು ಹೇಗೆ ಎಂಬ ಬಗ್ಗೆ ಆಲೋಚಿಸತೊಡಗಿದ್ದಾರಂತೆ. (ಏಜೆನ್ಸೀಸ್)

    VIDEO|ಥಾರ್ ಹೊಸ ಅವತಾರ:​ ಅಕ್ಟೋಬರ್ 2ರಂದು ಮಾರುಕಟ್ಟೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts