More

    ಕೊರಗಜ್ಜ ದೈವ ಕನ್ನಡದಲ್ಲಿ ಮಾತನಾಡಲು ಹೇಗೆ ಸಾಧ್ಯ? ದೈವಾರಾಧಕರಿಂದ ಪ್ರಶ್ನೆ…

    ಮಂಗಳೂರು: ಆದಿ ಸ್ಥಳ ಮತ್ತು ತುಳುನಾಡು ಹೊರತುಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಬೇರೆಲ್ಲಿಯೂ ಅವಕಾಶವಿಲ್ಲ. ಆದರೂ ಇದೀಗ ಹೊರ ಜಿಲ್ಲೆಗಳಲ್ಲಿ ತುಳುನಾಡ ದೈವ ಕೊರಜ್ಜಗನ ಕೋಲ ನಡೆಸುತ್ತಾ ಹಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕರಾವಳಿ ಮತ್ತು ಕೊಡಗು ಭಾಗದ ದೈವಾರಾಧಕರು ಮತ್ತು ದೈವ ನರ್ತಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ಮೈಸೂರಿನಲ್ಲಿ ದೈವದ ಕೋಲ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ಲೂಟಿ ಮಾಡುತ್ತಿದ್ದಾರೆ. ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಕೊರಗಜ್ಜನ ಹೆಸರಿನಲ್ಲಿ ಕನ್ನಡದಲ್ಲಿ ದೈವ ಮಾತನಾಡುವ ವಿಚಾರ ತಿಳಿದು ಬಂದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಕೊಡಗು ಭಾಗದ ದೈವಾರಾಧಕರು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಗಜ್ಜ ತುಳುನಾಡ ದೈವ. ಕೊರಗಜ್ಜನ ಭಾಷೆ ತುಳು. ಅದು ಹೇಗೆ ಕರಾವಳಿಯ ದೈವ ಕನ್ನಡದಲ್ಲಿ ಮಾತನಾಡಲು ಸಾಧ್ಯ ಎಂದು ದೈವನರ್ತಕರು ಪ್ರಶ್ನಿಸಿದ್ದಾರೆ.

    ಈ ರೀತಿಯ ಕೃತ್ಯಗಳು ಕರಾವಳಿ ಭಾಗದ ಜನರ ನಂಬಿಕೆ ಹಾಗೂ ಕೊರಗಜ್ಜನ ಹೆಸರಿಗೆ ಧಕ್ಕೆ ತರುವಂತದ್ದು. ಈ ಬಗ್ಗೆ ಕೊಡಗಿನ ದೈವಾರಾಧಕರು, ದೈವ ನರ್ತಕರು ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎಂದು ತುಳು ಅಕಾಡೆಮಿಯ ಮಾಜಿ ಸದಸ್ಯ ಎಂ.ರವಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts