More

    ಕಲ್ಲಿದ್ದಲು ಕಳ್ಳಸಾಗಾಣಿಕೆ : ಅಭಿಷೇಕ್ ಬ್ಯಾನರ್ಜಿ ಹೆಂಡತಿಗೆ ಸಿಬಿಐ ನೋಟೀಸು

    ಕೊಲ್ಕತಾ: ಕಲ್ಲಿದ್ದಲು ಕಳ್ಳಸಾಗಾಣಿಕೆ ಪ್ರಕರಣದ ತನಿಖೆಗೆ ಸಂಬಂಧಪಟ್ಟಂತೆ, ಸಿಬಿಐ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಹೆಂಡತಿ ರುಜಿರಾ ನರುಲಾ ಅವರಿಗೆ ನೋಟೀಸ್ ನೀಡಿದೆ. ಭಾನುವಾರ ಅವರ ಕೊಲ್ಕತಾ ನಿವಾಸ ತಲುಪಿದ ಸಿಬಿಐ ತಂಡವೊಂದು, ರುಜಿರಾ ಅವರೊಂದಿಗೆ ಮನೆಯಲ್ಲೇ ಪ್ರಶ್ನೋತ್ತರ ನಡೆಸಲು ಇಚ್ಛಿಸಿದೆ ಎನ್ನಲಾಗಿದೆ.

    ಬಂಗಾಳದ ಕುನುಸ್ತೊರಿಯಾ ಮತ್ತು ಕಜೋರಿಯದಲ್ಲಿರುವ ಈಸ್ಟರ್ನ್ ಕೋಲ್​ಫೀಲ್ಡ್​ ಲಿಮಿಟೆಡ್​ಗೆ ಸೇರಿದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಳವಿನ ಬಗೆಗೆ ಕಳೆದ ವರ್ಷ ನವೆಂಬರ್​ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಮಾಫಿಯಾದವರು ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರಿಗೆ ನಿಯಮಿತವಾಗಿ ಲಂಚ ನೀಡುತ್ತಿರುವ ಆರೋಪ ಈ ಪ್ರಕರಣದಲ್ಲಿದೆ. ಈ ಹಣವನ್ನು ಪಕ್ಷದ ಯುವ ನಾಯಕ ವಿನಯ್ ಮಿಶ್ರಾ ಮೂಲಕ ಚಾನಲ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಮಿಶ್ರ ವಿರುದ್ಧ ಸಿಬಿಐ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ್ದು, ಸದ್ಯಕ್ಕೆ ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: “ಚುನಾವಣೆ ಮುಗಿಯೋ ಮುನ್ನ ಮಮತಾ ಬ್ಯಾನರ್ಜಿ ಜೈ ಶ್ರೀ ರಾಮ್ ಅಂತಾರೆ”

    ಡೈಮಂಡ್ ಹಾರ್ಬರ್​ನ ಸಂಸದರಾಗಿರುವ ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ. ಫೆಬ್ರವರಿ 19 ರಂದು, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಷಾ ಮೇಲೆ ಬ್ಯಾನರ್ಜಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಬಂಗಾಳದ ಸ್ಪೆಷಲ್ ಕೋರ್ಟ್ ಷಾಗೆ ಸಮನ್ಸ್ ಜಾರಿ ಮಾಡಿತ್ತು.

    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರೀ ಹಣಾಹಣಿ ನಡೆಯುವ ಅಪೇಕ್ಷೆ ಇದೆ. ಚುನಾವಣಾ ರಾಲಿಗಳಲ್ಲಿ ಅಮಿತ್ ಷಾ ಮತ್ತು ಮಮತಾ ಬ್ಯಾನರ್ಜಿ ನಡುವೆ ಅಭಿಷೇಕ್​ ಬ್ಯಾನರ್ಜಿ ಅವರನ್ನು ಕುರಿತು ಸಹ ಮಾತಿನ ಚಕಮಕಿ ನಡೆದಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಾನನಷ್ಟ ಮೊಕದ್ದಮೆ : ಅಮಿತ್​ ಷಾಗೆ ಬಂಗಾಳ ಕೋರ್ಟ್ ಸಮನ್ಸ್

    ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts