More

    ಕರ್ನಾಟಕಕ್ಕೆ ಕಲ್ಲಿದ್ದಲು ಕೊರತೆ: ಸಿಎಂ ಬೊಮ್ಮಾಯಿ ಹೇಳಿದ್ದೇನು?

    ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್​ ಉತ್ಪಾದನೆಯಲ್ಲಿ ಭಾರೀ ವ್ಯತ್ಯಯಗಳುಂಟಾಗಬಹುದೆಂಬ ಭಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಏರಿಸುವಂತೆ ಕೇಂದ್ರ ಗಣಿ ಸಚಿವರನ್ನು ಭೇಟಿ ಮಾಡಿದ್ದು, ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದಿದ್ದಾರೆ.

    “ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗ್ತಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲ್ಲು ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಕೇಂದ್ರ ಗಣಿ ಸಚಿವರನ್ನ ಭೇಟಿ ಮಾಡಿದೆ. ನಮ್ಮ ಬೇಡಿಕೆ ಏನಿದೆ ಎಂದು ಅವರ ಬಳಿ ಹೇಳಿದ್ದೇವೆ. ಒಟ್ಟು ನಮಗೆ 10 ರೇಕ್​ ಕಲ್ಲಿದ್ದಲು ಬರ್ತಿದೆ. ಅದನ್ನ 14 ರೇಕ್​ಗೆ ಏರಿಕೆ ಮಾಡಿದ್ರೆ ಸರಿ ಹೋಗುತ್ತೆ. ಇದಕ್ಕೆ ಸಂಬಂಧಿಸಿದಂತೆ ಮೈನಿಂಗ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಚನೆ ಕೊಟ್ಟಿದ್ದಾರೆ. ಒಟ್ಟಾರೆ ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ” ಎಂದು ಬೊಮ್ಮಾಯಿ ಹೇಳಿದ್ದಾರೆ.

    ಇದನ್ನೂ ಓದಿ: ಇನ್ಮುಂದೆ ನಮ್ಮ ಜಾಹೀರಾತಿಗೆ ನೀವು ಬೇಡ ಎಂದ ಕಂಪೆನಿ: 5 ಕೋಟಿ ರೂ. ಆದಾಯ ಕಳೆದುಕೊಂಡ ಶಾರುಖ್‌

    3-4 ದಿನಗಳಲ್ಲಿ ಪರಿಹಾರ: ಇದೇ ವಿಚಾರವಾಗಿ ಈ ಮುನ್ನ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಇಂಧನ ಸಚಿವ ವಿ.ಸುನಿಲ್​ ಕುಮಾರ್​, ಸಿಎಂ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿದ್ದೇನೆ. ರಾಜ್ಯದ ಗಣಿ ಪ್ರದೇಶದಲ್ಲಿ ಮಳೆ‌ ಹೆಚ್ಚಾದ ಕಾರಣ ಉತ್ಪಾದನೆ ಕೊರತೆ ಆಗಿದೆ. 12 ರೇಕ್​​ಗಳಲ್ಲಿ ಕೇಂದ್ರ ಸರ್ಕಾರ ಸರಬರಾಜು ಮಾಡಬೇಕಿತ್ತು. ಒಂದು ರೇಕ್ ಅಂದರೆ 60‌ ಸಾವಿರ ಟನ್. ಸದ್ಯ 8 ರೇಕ್​​ಗಳಲ್ಲಿ ಸರಬರಾಜು ಮಾಡುತ್ತಿದೆ. ಮುಂದಿನ ವಾರದಲ್ಲಿ 2 ರೇಕ್ ಕಲ್ಲಿದ್ದಲು ಬರಲಿದೆ ಎಂದರು.

    ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕೊರತೆಯಾಗಿಲ್ಲ. ಕಲ್ಲಿದ್ದಲು ಕೊರತೆಯಿಂದ ಸ್ಥಾವರಗಳು ಬಂದ್ ಆಗಿಲ್ಲ. ಎರಡು ಸ್ಥಾವರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಇದೆ. 3-4 ದಿನಗಳಲ್ಲಿ ಈ ಸಮಸ್ಯೆ‌ ಬಗೆಹರಿಯಲಿದೆ ಎಂದು ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಲಖೀಂಪುರ್ ಖೇರಿ ಹಿಂಸಾಚಾರ ವಿರೋಧಿಸಿ ರೈತರ ಕಲಶ ಯಾತ್ರೆ; ಅ.18 ರಂದು ‘ರೈಲ್​ ರೋಕೋ’

    VIDEO| ವರುಣನ ವರಸೆಗೆ ನಲುಗಿದ ನಗರ: ರೆಸ್ಟೊರೆಂಟಿಗೆ ನುಗ್ಗಿದ ನೀರು; ಕೊಚ್ಚಿಹೋದ ಮಿನಿಟ್ರಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts