More

    ದೆಹಲಿಯತ್ತ ಟ್ರಂಪ್​ ದಂಪತಿ: ತಾಜ್​ ಮಹಲ್​ ಫೋಟೋ ಗಿಫ್ಟ್​ ನೀಡಿ ಆತ್ಮೀಯವಾಗೇ ಬೀಳ್ಕೊಟ್ಟ ಸಿಎಂ ಯೋಗಿ

    ಆಗ್ರಾ: ಪ್ರೇಮಸೌಧ ತಾಜ್​ ಮಹಲ್​ ಭೇಟಿ ಮುಗಿಸಿ ದೆಹಲಿಗೆ ತೆರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಉಡುಗೊರೆಯೊಂದನ್ನು ನೀಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆತ್ಮೀಯವಾಗೇ ಬೀಳ್ಕೊಟ್ಟರು.

    ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್​, ಕುಟುಂಬ ಸಮೇತ ಇಂದು ಬೆಳಗ್ಗೆ ಅಹಮದಾಬಾದ್​ಗೆ ಬಂದಿಳಿದರು. ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ತಾಜ್​ ಮಹಲ್​ ವೀಕ್ಷಣೆ ಮಾಡಲು ಆಗ್ರಾಗೆ ತೆರಳಿದರು.

    ಸಂಜೆ ನಾಲ್ಕೂವರೆಗೆ ಆಗ್ರಾಗೆ ಬಂದಿಳಿದ ಟ್ರಂಪ್​ ದಂಪತಿಯನ್ನು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್​ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿ ಕಾರು ಹತ್ತಿ ತಾಜ್​ ಮಹಲ್​ಗೆ ತೆರಳಿದ ಟ್ರಂಪ್​ ದಂಪತಿ ವಿಶ್ವದ ಅದ್ಭುತಗಳಲ್ಲಿ ಒಂದಾದ ಪ್ರೇಮಸೌಧವನ್ನು ಕಣ್ತುಂಬಿಕೊಂಡರು. ಅಲ್ಲದೆ, ತಾಜ್​ ಮಹಲ್​ ಮುಂದೆ ನಿಂತು ಕ್ಯಾಮರಾಗೆ ಪೋಸ್​​ ನೀಡುವ ಮೂಲಕ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿದರು. ಅಂದಾಜು ಎರಡು ತಾಸು ತಾಜ್​ ಮಹಲ್​ ವೀಕ್ಷಿಸಿದ ಟ್ರಂಪ್​ ದಂಪತಿ ಆಗ್ರಾದಿಂದ ಸಂಜೆ 7 ಗಂಟೆ ಸುಮಾರಿಗೆ ದೆಹಲಿಯತ್ತ ಪ್ರಯಾಣ ಬೆಳೆಸಿದರು.

    ಟ್ರಂಪ್​ ದೆಹಲಿಗೆ ತೆರಳುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್​ ಅವರು ತಾಜ್​ ಮಹಲಿನ ಸುಂದರ ಫೋಟೋವನ್ನು ಉಡುಗೊರೆಯಾಗಿ ನೀಡಿ, ಆತ್ಮೀಯವಾಗೇ ಬೀಳ್ಕೊಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts