More

    ಜಗಜೀವನ್ ರಾಮ್ ಜನ್ಮದಿನಾಚರಣೆ ಸಂದರ್ಭದಲ್ಲಿ ಸಿಎಂಗೆ ಪ್ರತಿಭಟನೆ ಬಿಸಿ

    ಬೆಂಗಳೂರು : ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್​ ರಾಮ್ ಅವರ 114ನೇ ಜನ್ಮದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮತ್ತು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಪ್ರತಿಭಟನೆಯ ಬಿಸಿ ಎದುರಿಸುವಂತಾಯಿತು.

    ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಜಗಜೀವನ್​ ರಾಮ್ ಅವರ ಪ್ರತಿಮೆಗೆ ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಿದರು. ಜೊತೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಎಸ್​​ಸಿಎಸ್‌ಟಿ ಸಂಘಟನೆಯವರು ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಇದನ್ನೂ ಓದಿ: ಸಿದ್ದರಾಮಯ್ಯಗೆ ಹುಚ್ಚು ಹಿಡಿದಿದೆ: ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯ

    “ಡಾ. ಜಗಜೀವನ್​ ರಾಮ್ ಭವನ ನಿರ್ಮಾಣ ಸರಿಯಾಗಿ ಆಗುತ್ತಿಲ್ಲ. ಕಾಡುಗೋಡಿಯ ಎಸ್‌ಸಿಎಸ್‌ಟಿ ದೌರ್ಜನ್ಯದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಪೊಲೀಸ್ ಯಾವುದೇ ಕ್ರಮ‌ಕೈಗೊಂಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಸಚಿವರು ಸಹ ಅವರ ಮನೆಗೆ ತೆರಳಿ ಸಾಂತ್ವನ ಹೇಳಿಲ್ಲ” ಎಂದು ಪ್ರತಿಭಟನಾಕಾರರು ಘೋಷಣೆ ಮೊಳಗಿಸಿದರು. ‘ಪರಿಶಿಷ್ಟರ ವಿರೋಧಿ ಸರ್ಕಾರ’ ಎಂದು ಸಿಎಂ ಎದುರೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಭ್ರಷ್ಟಾಚಾರ ಆರೋಪ : ಮಹಾ ಗೃಹ ಸಚಿವರ ವಿರುದ್ಧ ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್

    ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ

    ಟಿಎಂಸಿ ಪರ ನಟಿ-ಸಂಸದೆ ಜಯಾ ಬಚ್ಚನ್ ಪ್ರಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts