More

    ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಲಿ: ಈಶ್ವರಪ್ಪ ಆಗ್ರಹ

    ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ಭಾನುವಾರ ಮುಸ್ಲಿಂ ಸಮಾಜದ ಕೆಲವರು ಕಲ್ಲು ತೂರಾಟ ನಡೆಸಿರುವುದಕ್ಕೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು. ಮುಸ್ಲಿಮರನ್ನು ಅತಿಯಾಗಿ ಓಲೈಕೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

    ಈದ್ ಮೆರವಣಿಗೆಯಲ್ಲಿ ತಲ್ವಾರ್ ಪ್ರದರ್ಶನ ಮಾಡಿಲ್ಲ ಎಂದು ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಎಂ, ಗೃಹ ಸಚಿವರು ಹಾಗೂ ಎಸ್ಪಿ ಕೂಡ ಮುಸಲ್ಮಾನರು ಕಲ್ಲು ಹೊಡೆದಿದ್ದಾರೆ ಎನ್ನುವುದನ್ನು ಬಿಟ್ಟು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿರುವುದು ದೌರ್ಭಾಗ್ಯದ ಸಂಗತಿ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಸ್ಲಿಮರ ರಕ್ಷಣೆಗೆ ಮಾತ್ರ ಸೀಮಿತವೇ ಎಂದು ಈಶ್ವರಪ್ಪ ಪ್ರಶ್ನಿಸಿದರು.
    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಗಳ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ, ಗಲಾಟೆ ನಡೆಯಲ್ಲ. ಆದರೆ ಭಾನುವಾರದ ಈದ್ ಮೆರವಣಿಗೆಯಲ್ಲಿ ಕೆಲ ಮುಸಲ್ಮಾನರು ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಭಾಗವಹಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ನೇತುಹಾಕಿ ಯಾರನ್ನು ಹೆದರಿಸುತ್ತಾರೆ ಎಂದು ಪ್ರಶ್ನಿಸಿದರು.
    ಹಿಂದುಗಳಿಗೆ ಪ್ರಚೋದನೆ ನೀಡಲು ದೇಶದ್ರೋಹಿ ಟಿಪ್ಪು, ಔರಂಗಜೇಬನ ಫೋಟೋವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಜತೆಗೆ ಆಕ್ಷೇಪಾರ್ಹ ಘೋಷಣೆಗಳು ಬೇರೆ. ಹಬ್ಬದ ಹೆಸರಿನಲ್ಲಿ ಹಿಂದುಗಳನ್ನು ಹೆದರಿಸಲು ಮಾಡಿದ ತಂತ್ರವಿದು. ರಾಗಿಗುಡ್ಡದಲ್ಲಿ ಕೆಲವು ಹಿಂದುಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಪೊಲೀಸರಿಂದ ಅನುಮತಿ ಪಡೆಯದ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದು ದೂರಿದರು.
    ಕಲ್ಲೇಟಿನಿಂದ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾದ ಪೊಲೀಸರು ಜನಪ್ರತಿನಿಧಿಗಳ ಬಳಿ ಸತ್ಯಾಂಶ ಹೇಳುತ್ತಾರೆಂಬ ಕಾರಣಕ್ಕೆ ಬೆಳಗ್ಗೆಯೇ ಅವರನ್ನು ಮೆಗ್ಗಾನ್‌ನಿಂದ ಬಿಡುಗಡೆ ಮಾಡಲಾಗಿದೆ. ನೂರಾರು ಮಂದಿ ಕಲ್ಲು ತೂರಾಟ ನಡೆಸಿದ್ದಾರೆ. ಅವರೆಲ್ಲರನ್ನೂ ಬಂಧಿಸಬೇಕು. ಯಾವ ಹಿಂದುವೂ ಕಲ್ಲು ತೂರಾಟ ಮಾಡಿಲ್ಲ. ಹೀಗಾಗಿ ಯಾರೊಬ್ಬ ಹಿಂದುವನ್ನೂ ಬಂಧಿಸಬಾರದು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts