5 ಗ್ಯಾರಂಟಿಗಳನ್ನು ಈಡೇರಿಸಲು ಸಮಸ್ಯೆಯಾಗದಂತೆ ಉತ್ತಮ ಬಜೆಟ್ ಮಂಡಿಸಿದ್ದಾರೆ: ಸಚಿವ ಚೆಲುವರಾಯಸ್ವಾಮಿ

siddaramaiah
Published on

ಬೆಂಗಳೂರು: 5 ಗ್ಯಾರಂಟಿ ಭರವಸೆಯನ್ನು ಈಡೇರಿಸಲು ಸಮಸ್ಯೆಯಾಗದಂತೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ ಎಂದು ಕೃಷಿ ಸಚಿವ ಎನ್​. ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಐದು ಭರವಸೆ ಈಡೇರಿಸಲು ಸಮಸ್ಯೆಯಾಗದಂತೆ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ರೀತಿಯಲ್ಲೂ ಉತ್ತಮದ ಬಜೆಟ್ ಇದಾಗಿದೆ. ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಣೆ ಮಾಡುವುದರ ಜತೆಗೆ 100 ಕೋಟಿ ಅನುದಾನ ಮೀಸಲಿಟ್ಟಿರುವುದು ಖುಷಿ ಸಂಗತಿ ಎಂದು ಹೇಳಿದರು.

ಇನ್ನು ಮಾಜಿ ಮುಖ್ಯಮಂತ್ರಿ ಎಚ್​​.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚೆಲುವರಾಯಸ್ವಾಮಿ, "ಕಿವಿಗೆ ಚೆಂಡೂವು ಮುಡಿಸುವ ಬಜೆಟ್ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆ ಸರಿಯಿಲ್ಲ! ಬಜೆಟ್​ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಒಂದು ಪಕ್ಷದ ಸಭಾ ನಾಯಕರು ಬಜೆಟ್​​ನಲ್ಲಿ ಕೂರದೇ ಇರುವವರು ಬಜೆಟ್ ಬಗ್ಗೆ ಹೇಳಿಕೆ ಕೊಡುತ್ತಾರೆ. ಸದನದಲ್ಲಿ ಕೂತು ಬಳಿಕ ಮಾತನಾಡಬೇಕಿತ್ತು" ಎಂದು ಹೇಳಿದರು.

"ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಕ್ರಿಯೆಯನ್ನು ಪರಿಗಣಿಸಲೇಬಾರದು. ಬಜೆಟ್​​ಗೆ ಹಾಜರಾಗದವರ ಬಗ್ಗೆ ನಗುವುದೋ, ಅಳುವುದೋ" ಎಂದು ಹೇಳುವ ಮುಖೇನ ಎಚ್​​ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net