More

    ಮೋದಿ ಜನ ಮೆಚ್ಚಿದ ಮಹಾನ್ ನಾಯಕ: ಸಿಎಂ ಬಿಎಸ್​ವೈ ಗುಣಗಾನ

    ಬೆಂಗಳೂರು: ನಿಸ್ವಾರ್ಥ ಸೇವೆ, ದಕ್ಷ, ಸಮರ್ಥ ಆಡಳಿತ, ಅಭಿವೃದ್ಧಿಯ ದೂರದೃಷ್ಟಿ, ಸ್ಪಷ್ಟ ವಿದೇಶಾಂಗ ನೀತಿ, ಅನ್ಯ ದೇಶಗಳೊಂದಿಗೆ ಸ್ನೇಹದ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಜಾಗತಿಕ ಮನ್ನಣೆ ತಂದು ಕೊಟ್ಟಿದ್ದು, ಜನ ಮೆಚ್ಚಿದ ಮಹಾನ್ ನಾಯಕ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಣಗಾನ ಮಾಡಿದರು.

    ಸೇವಾ ಸಪ್ತಾಹ ನಿಮಿತ್ತ ಭಾನುವಾರ ಹುಬ್ಬಳ್ಳಿಯಿಂದ ಹಮ್ಮಿಕೊಂಡಿದ್ದ ನರೇಂದ್ರ ಮೋದಿ ವ್ಯಕ್ತಿ, ವ್ಯಕ್ತಿತ್ವ, ಜೀವನ ಕುರಿತ ವರ್ಚುವಲ್ ರ್ಯಾಲಿ ಅಧ್ಯಕ್ಷತೆವಹಿಸಿದ್ದ ಅವರು ಬೆಂಗಳೂರಿನ ತಮ್ಮ ಕಾವೇರಿ ನಿವಾಸದಿಂದಲೇ ಮಾತನಾಡಿದರು.

    ಎಲ್ಲರನ್ನು ಒಳಗೊಂಡ ಏಳಿಗೆಯೇ ಮೋದಿ ಅನನ್ಯ ಕಾಳಜಿಯಾಗಿದ್ದು, ಆತ್ಮನಿರ್ಭರ್ ಭಾರತ ಯೋಜನೆಯ ಪರಿಕಲ್ಪನೆಯು ಅದರ ಭಾಗವಾಗಿದೆ. ದೇಶದ ಯುವಶಕ್ತಿ ಬಗ್ಗೆ ಅಪಾರ ವಿಶ್ವಾಸವಿರಿಸಿ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾದಂತಹ ಯೋಜನೆಗಳನ್ನು ರೂಪಿಸಿದರು ಎಂದರು.

    ಮತ್ತೊಮ್ಮೆ ಮೋದಿ
    ಮತ್ತೊಂದು ಅವಧಿಗೆ ಮೋದಿ ಪ್ರಧಾನಿಯಾದರೆ ಅಭಿವೃದ್ಧಿಯಲ್ಲಿ ಭಾರತ ಇಡೀ ವಿಶ್ವದಲ್ಲಿ ಅಗ್ರ ಸ್ಥಾನಿಯಾಗುವುದು ನಿಶ್ಚಿತವೆಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.

    ದೆಹಲಿಯಲ್ಲಿ ಭೇಟಿಯಾದ ವೇಳೆ ರಾಜ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಬಗ್ಗೆ ಅವರದ್ದೇ ಆದ ಕಲ್ಪನೆಗಳು ಇರುವುದನ್ನು ಕೇಳಿ ಅಚ್ಚರಿಯಾಯಿತು. ಮೋದಿ ಒಬ್ಬ ವ್ಯಕ್ತಿಯಲ್ಲ ರಾಜರ್ಷಿ, ದೇವಮಾನವ ಎಂದು ಬಿಎಸ್ ವೈ ಹೊಗಳಿ, ನೂರ್ಕಾಲ ಬಾಳಲೆಂದು ಹಾರೈಸಿದರು.

    ರಾಮ-ಕೃಷ್ಣನ ಸಮ್ಮಿಳನ
    ಹುಬ್ಬಳ್ಳಿಯಿಂದ ಈ ಕಾರ್ಯಕ್ರಮ ಉದ್ದೇಶಿಸಿ ಹೆಸರಾಂತ ವಾಗ್ಮಿ ಗಂಗಾವತಿ ಪ್ರಾಣೇಶ್ ಪ್ರಧಾನ ಭಾಷಣ ಮಾಡಿ, ಶ್ರೀ ರಾಮ- ಕೃಷ್ಣನ ವ್ಯಕ್ತಿತ್ವ ಪ್ರಧಾನಿ ಮೋದಿಯವರಲ್ಲಿ ಮಿಳಿತವಾಗಿವೆ. ತಲಸ್ಪರ್ಶಿ ಚಿಂತನೆ, ಪ್ರಾಮಾಣಿಕ, ಸರಳ ಜೀವನ ಮೈಗೂಡಿಸಿಕೊಂಡ ಅಪ್ರತಿಮ, ಆದರ್ಶಪ್ರಾಯರು ಎಂದು ಹೇಳಿದರು.

    ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts