More

    ಮೀಸಲಾತಿ ಹೋರಾಟ ಕೈಬಿಡಲು ಸಿಎಂ ಮನವಿ; ಇಂದು ಚರ್ಚೆ ನಂತರ ನಿರ್ಣಯ ಎಂದ ಸ್ವಾಮೀಜಿ

    ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಕೆಟಗರಿಗೆ‌ ಸೇರಿಸಲು ಒತ್ತಾಯಿಸಿ ನಡೆಸಲು ಉದ್ದೇಶಿಸಿರುವ ಹೋರಾಟ ಕೈಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮನವಿ ಮಾಡಿದ್ದಾರೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ‌ ಅವರನ್ನು ಶುಕ್ರವಾರ ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಸಿಎಂ ಮನವಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಘಟನೆ ಮುಖಂಡರ ಜತೆಗೆ ಇಂದು ಸಭೆ ಸೇರಿ ಚರ್ಚಿಸಿದ‌ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು, ಈ ಸಭೆಗೆ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸಿ.ಸಿ.ಪಾಟೀಲ್ ಆಗಮಿಸುವರು ಎಂದು ಸ್ವಾಮೀಜಿ ತಿಳಿಸಿದರು. ಈ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಮತ್ತು ಇತರರು ಉಪಸ್ಥಿತರಿದ್ದರು.

    ಇದನ್ನೂ ಓದಿ: ಐಸ್‌ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಿನ್ಬೋದಾ? ಬೆಂಗಳೂರಿನ ಹೋಟೆಲ್‌ನಲ್ಲಿ ಇನ್ಮುಂದೆ ಅದೂ ಸಾಧ್ಯ!

    ಗಡುವು ಇಂದು ಅಂತ್ಯ: ಪಂಚಮಸಾಲಿ ಸಮುದಾಯವನ್ನು 2ಎಗೆ‌ ಸೇರಿಸಲು ಒತ್ತಾಯಿಸಿ, ಮಲೆಮಹದೇಶ್ವರ ಬೆಟ್ಟದಿಂದ ಎರಡನೇ ಸುತ್ತಿನ ಅಭಿಯಾನವನ್ನು ಸ್ವಾಮೀಜಿ ಆರಂಭಿಸಿ ಬೆಂಗಳೂರಿನಲ್ಲಿ ಸಂಪನ್ನಗೊಳಿಸಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ವಿಧಿಸಿದ್ದ ಗಡುವು ಇಂದು ಸಂಜೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಭೇಟಿ ಮತ್ತು ಮಾತುಕತೆ ಮಹತ್ವ ಪಡೆದುಕೊಂಡಿದೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಸಿಎಂ ಸಭೆಯಲ್ಲಿ ಸತ್ಯಾಗ್ರಹ‌ ಮಾಡುವುದು ಬೇಡ ಎಂದು ಮನವಿ ಮಾಡಲಾಗಿದೆ. ಈ ಬಗೆಗಿನ ಸರ್ಕಾರದ ನಿರ್ಧಾರವನ್ನು ನಾನು ಮಧ್ಯಾಹ್ನ 1 ಗಂಟೆಗೆ ಪಂಚಮಸಾಲಿಗಳ‌ ಜಂಟಿ ಅಧಿವೇಶನದಲ್ಲಿ ಹೇಳುತ್ತೇನೆ ಎಂದರು.

    ಇದನ್ನೂ ಓದಿ: ಪತ್ನಿಯನ್ನು “ಅಶ್ಲೀಲ ಆಂಟಿ” ಎಂದವನಿಗೆ ನಟ ರಿತೇಶ್​ ದೇಶ್​ಮುಖ್​ ಕೊಟ್ಟ ತಿರುಗೇಟು ಹೀಗಿದೆ..!

    ಬೊಮ್ಮಾಯಿ‌ ಭರವಸೆ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಿದ ನಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದು ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ‌ ಭರವಸೆ ನೀಡಿದ್ದಾರೆ.

    ಸಮುದಾಯದ ಶಿಕ್ಷಣ, ಉದ್ಯೋಗದ ವಸ್ತುಸ್ಥಿತಿ ಕುರಿತು ಆಯೋಗವು, ದತ್ತಾಂಶ ಸಂಗ್ರಹಿಸುವ ಕಾರ್ಯ ಕೈಗೆತ್ತಿಕೊಂಡಿದ್ದು, ಇದರ ಆಧಾರದ ಮೇಲೆ ವರದಿ ಸಲ್ಲಿಸಲಿದೆ.‌ ವಾಸ್ತವಿಕ ದತ್ತಾಂಶಗಳನ್ನು ಆಧರಿಸಿ ವಸ್ತುನಿಷ್ಠ‌ ವರದಿ ಸಲ್ಲಿಸುವುದು ಆಯೋಗದ ಉದ್ದೇಶವಾಗಿದೆ. ಇದೇ ಕ್ರಮ ಅನುಸರಿಸುವಂತೆ ಸರ್ಕಾರ ಸೂಚಿಸಿದೆ.

    ಈ ರೀತಿಯ ವರದಿಯಿಲ್ಲದೆ, ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿದ್ದ ಮೀಸಲು ಸೌಲಭ್ಯವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ಇದೇ ಪರಿಸ್ಥಿತಿ ಪಂಚಮಸಾಲಿ ಸೇರಿದಂತೆ ಬೇಡಿಕೆಯಿಟ್ಟಿರುವ ಬೇರೆ ಯಾವುದೇ ಸಮುದಾಯಕ್ಕೆ ಬರಬಾರದು ಎನ್ನುವುದೇ ಸರ್ಕಾರದ ದೃಢ ನಿಲುವು ಎಂದು ಬೊಮ್ಮಾಯಿ‌ ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು.

    ಭಾರತದ ಕೋವಿಶೀಲ್ಡ್​ಗೆ ಆಸ್ಟ್ರೇಲಿಯಾ ಮಾನ್ಯತೆ; ಲಸಿಕೆ ಪಡೆದ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ

    ಬೇಕಂತಲೇ ಡಿಕ್ಕಿ ಹೊಡೆದು ಬೈಕ್​ಗೆ ಬೆಂಕಿ ಹಚ್ಚಿದ ಪುಂಡರು; ಬ್ಯಾಗ್ನಲ್ಲಿತ್ತು ಗಾಂಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts