More

    ಕೊನೆಯ ಕ್ಷಣದಲ್ಲಿ ಮಾಜಿ ಸಿಎಂ ಶೆಟ್ಟರ್​ ಭೇಟಿ ಕೈಬಿಟ್ಟ ಸಿಎಂ ಬೊಮ್ಮಾಯಿ!

    ಹುಬ್ಬಳ್ಳಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ವಿಚಾರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿದ್ದು, ಇದೀಗ ಶೆಟ್ಟರ್ ಭೇಟಿಯನ್ನು ಸಿಎಂ ಬೊಮ್ಮಾಯಿ ಕೊನೆಯ ಕ್ಷಣದಲ್ಲಿ ಕೈಬಿಟ್ಟಿರುವುದು ಮತ್ತಷ್ಟು ಕೌತುಕವನ್ನು ಸೃಷ್ಟಿಸಿದೆ.

    ನೆರೆ ಪರಿಸ್ಥಿತಿ ವೀಕ್ಷಣೆ ಸಲುವಾಗಿ ಉತ್ತರ ಕನ್ನಡ ಜಿಲ್ಲೆಗೆ ಪರಿಶೀಲನೆಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರನ್ನು ಭೇಟಿ ಆಗುವ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ಸಿಎಂ ಆಗಮನದ ಹಿನ್ನೆಲೆಯಲ್ಲಿ ಶೆಟ್ಟರ್ ಮನೆಯ ಬಳಿ ಪೊಲೀಸರು ಬಂದೋಬಸ್ತ್ ಸಿದ್ಧತೆ ಮಾಡಿಕೊಂಡಿದ್ದರು.

    ಆದರೆ ಕೊನೆಯ ಕ್ಷಣದಲ್ಲಿ ಶೆಟ್ಟರ್ ಭೇಟಿಯನ್ನು ಕೈಬಿಟ್ಟ ಸಿಎಂ ನೇರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು. ತಮಗೆ ಸಿಎಂ ಕರೆ ಮಾಡಿ ಇನ್ನೊಮ್ಮೆ ಭೇಟಿ ಮಾಡುವುದಾಗಿ ಹೇಳಿದ್ದಾರೆ ಎಂದು ಶೆಟ್ಟರ್ ಅವರೇ ಮನೆ ಬಳಿ ಇದ್ದ ಪೊಲೀಸರಿಗೆ ಮಾಹಿತಿ ನೀಡಿದರು. ಎಂಟು ಗಂಟೆ ಬಳಿಕ ವಿಮಾನ ಹಾರಾಟಕ್ಕೆ ತಾಂತ್ರಿಕ ತೊಂದರೆ ಆಗುವುದರಿಂದ ಇನ್ನೊಮ್ಮೆ ಬರುವುದಾಗಿ ಸಿಎಂ ಹೇಳಿದ್ದಾರೆ ಎಂದು ಅವರು ತಿಳಿಸಿದರು. ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ತಾವು ಸೇರುವುದಿಲ್ಲ ಎಂದು ಶೆಟ್ಟರ್ ನಿನ್ನೆಯಷ್ಟೇ ಹೇಳಿದ್ದರು.

    ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ: ಶೆಟ್ಟರ್ ಭೇಟಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಈಗಾಗಲೇ ನಾನು ಶೆಟ್ಟರ್ ಜೊತೆ ಫೋನ್​ನಲ್ಲಿ ಮಾತನಾಡಿದ್ದೇನೆ. ಅವರ ಬಗ್ಗೆ ನನಗೆ ಗೌರವ ಇದೆ. ಅವರು ಎರಡು ದಿನಗಳ ನಂತರ ಬೆಂಗಳೂರಿಗೆ ಬರಲಿದ್ದಾರೆ, ಆಗ ಅಲ್ಲಿ ಮಾತನಾಡುತ್ತೇನೆ. ಅವರು ಹಿರಿಯರು, ಅಸಮಾಧಾನ ವ್ಯಕ್ತಪಡಿಸುವುದು ಸಹಜ, ಆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

    ಸಂಪುಟ ರಚನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದ ಬಿಎಸ್​​ವೈ ವಲಸಿಗರ ಬಗ್ಗೆ ಹೇಳಿದ್ದೇನು?

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts