More

    ‘ಸಿಲಿಕಾನ್​​ ಸಿಟಿಯಲ್ಲಿ ಫುಡ್​​​ ಟ್ರಕ್​ ನೋಡಿದ್ವಿ, ಬಟ್ಟೆ ಟ್ರಕ್​ ಅಚ್ಚರಿ ಮೂಡಿಸಿದೆ ಎಂದ ನೆಟ್ಟಿಗರು..! ಕ್ಲೋತ್​​ ಆನ್​ ವೀಹ್ಲ್ಸ್​​​’ ಹೊಸ ಥೀಮ್​​​, ಟ್ರಾನ್ಸ್​​​​ಪರೆಂಟ್​​​ ಟ್ರಕ್​​ನಲ್ಲಿ ಬಟ್ಟೆ ಮಾರಾಟ..!

    ಸ್ಟಾರ್ಟಪ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಜನರು ಹೊಸ ಉದ್ಯಮಗಳನ್ನ ಕಂಡುಕೊಳ್ಳುತ್ತಿರುತ್ತಾರೆ. ಅದರಲ್ಲಿ ಬಟ್ಟೆಗಳ ವಿಚಾರಕ್ಕೆ ಬಂದ್ರೆ ಸಾಕು, ನಿಮಗೆ ಕೊಂಡುಕೊಳ್ಳಲು ಬೇಕಾದಷ್ಟು ಆಯ್ಕೆಗಳಿವೆ. ಯಾಕಂದ್ರೆ ಬೆಂಗಳೂರಿನಲ್ಲಿ ನೀವು ಯಾವುದೇ ಸ್ಟ್ರೀಟ್​​​ಗಳಿಗೆ ಕಾಲಿಟ್ರೂ ಸಹ ಬಟ್ಟೆ ಅಂಗಡಿಗಳು ಇರೋದಂತೂ ಫಿಕ್ಸ್.

    ಈ ನಡುವೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಮಾಲ್​, ಸ್ಟ್ರೀಟ್​​ ಎಲ್ಲಿ ಹೋದರೂ ಎಲ್ಲಾ ವರ್ಗದ ಜನರು ಕೊಳ್ಳುವಂತಹ ಬಟ್ಟೆಗಳು ನಿಮಗೆ ಬೇಕಾದ ದರದಲ್ಲಿ ಸಿಗುತ್ತಿದೆ. ಬಟ್ಟೆ ಅಂಗಡಿ ಮಾಲೀಕರು ವ್ಯಾಪಾರವಿಲ್ಲದೆ ಕೆಲವೊಮ್ಮೆ ಚಿಂತೆ ಮಾಡುತ್ತಾರೆ. ಇನ್ನು ಆನ್ಲೈನ್​​​ನಲ್ಲಿ ಆರ್ಡರ್​​ ಮಾಡಿದ್ರಂತೂ ನಿಮ್ಮ ಮನೆ ಬಾಗಿಲಿಗೆಯೇ ಬಟ್ಟೆಗಳು ಬಂದು ಬೀಳುತ್ತೆ.

    ಬೆಂಗಳೂರಿನಲ್ಲೊಂದು ಮೊಬೈಲ್​ ಬಟ್ಟೆ ಶಾಪ್..!
    ಇದೀಗ ತಳ್ಳುವ ತರಕಾರಿ ಗಾಡಿ , ಮೊಬೈಲ್​ ಕ್ಯಾಂಟೀನ್​​ ರೀತಿಯಲ್ಲಿ ಜನರು ಬಟ್ಟೆ ಮಾರೋಕೆ ಪ್ರಾರಂಭಿಸಿದ್ದಾರೆ. ಟ್ರಾನ್ಸ್​​ಪರೆಂಟ್​​ ಗ್ಲಾಸ್​​ ಫಿನಿಶಿಂಗ್​​ ಇರುವ ಟ್ರಕ್​​ ಒಂದರಲ್ಲಿ ಬಟ್ಟೆ ಮಾರುತ್ತಿರುವ ದೃಶ್ಯವೊಂದು ಬೆಂಗಳೂರಿನಲ್ಲಿ ಕಂಡು ಬಂದಿದೆ. @HaramiParindey ಎಂಬ ಎಕ್ಸ್​ ಖಾತೆಯಲ್ಲಿ ಟ್ರಕ್​ನಲ್ಲಿ ಬಟ್ಟೆ ಮಾರಾಟ ಮಾಡುತ್ತಿರುವ ಫೋಟೋವೊಂದನ್ನ ಹಂಚಿಕೊಳ್ಳಲಾಗಿದೆ. ಸದ್ಯ ಈ ಫುಡ್​​​ ಟ್ರಕ್​ ನೋಡಿದ್ವಿ, ಆದ್ರೆ ಬಟ್ಟೆ ಟ್ರಕ್​ ಕಂಡು ಅಚ್ಚರಿಯಾಯ್ತು ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

    ದೊಡ್ಡ ಮಾಲ್‌ಗಳಲ್ಲಿ ಶೋರೂಮ್‌ಗಳು ಏನೇ ಮಾಡಿದ್ರು, ಈ ರೀತಿ ಟ್ರಕ್​ನಲ್ಲಿ ಬಟ್ಟೆ ಮಾರಾಟ ಮಾಡುತ್ತಿರುವ ವ್ಯಕ್ತಿಯ ಪ್ರಯತ್ನ ಶ್ಲಾಘನೀಯ ಅನ್ನೋದು ಖುಷಿಯ ವಿಚಾರ ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಬಟ್ಟೆ ಮಾರಾಟ ಮಾಡುವ ಟ್ರಕ್​​​ ಹೌದಾ ಅಲ್ವಾ?… ಇಸ್ತ್ರಿ ಅಂಗಡಿಯಂತೆ ಕಾಣಿಸುತ್ತಿದೆ ಎಂದೂ ಹೇಳಿದ್ದಾರೆ.

    ಸದ್ಯ ಈ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್​ ಆಗಿದ್ದು, ಸೆಲೆಬ್ರಿಟಿಗಳು ತಮ್ಮ ವ್ಯಾನಿಟಿ ವ್ಯಾನ್‌ಗಳಂತೆ ಪರಿಗಣಿಸುತ್ತಾರೆ. ಆದ್ರೆ ಈ ದೃಶ್ಯವಂತೂ ಒಂದು ಬಾರಿ ನೋಡುಗರ ಹುಬ್ಬೇರಿಸಿದೆ.

    @HaramiPrindey ಎಂಬ ಎಕ್ಸ್​ ಖಾತೆಯಲ್ಲಿ ಈ ಪೋಟೋವನ್ನ ಹಂಚಿಕೊಳ್ಳಲಾಗಿದ್ದು, ನನ್ನ ಹೆಂಡತಿಯೊಂದಿಗೆ ಮಂದಿರಕ್ಕೆ ಹೋಗುತ್ತಿರುವಾಗ ಈ ಟ್ರಕ್ ದಾರಿ ಬದಿಯಲ್ಲಿ ಕಾಣ ಸಿಕ್ಕಿದೆ ಎಂದು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts