More

    ಎಲ್ಲರೂ ಸರಳ ಜೀವನ ರೂಢಿಸಿಕೊಳ್ಳಿ

    ಹುಲಸೂರು: ಮನುಷ್ಯ ಆಡಂಬರದ ಜೀವನಕ್ಕೆ ಮಾರು ಹೋಗಿ ತಪ್ಪು ಹೆಜ್ಜೆ ಇಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಸರಳ ಜೀವನ ರೂಢಿಸಿಕೊಳ್ಳಬೇಕೆಂದು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಜೆಬಿಕೆ ಪ್ರೌಢ ಶಾಲೆಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಹಾಗೂ ಲಿಂ.ಬಸವಕುಮಾರ ಶಿವಯೋಗಿಗಳವರ ೪೮ನೇ ಪುಣ್ಯಸ್ಮಣೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ತಮ್ಮೆಲ್ಲರ ಸಹಕಾರಿಂದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.

    ಶಾಸಕ ಶರಣು ಸಲಗರ ಮಾತನಾಡಿ, ಶರಣರು ನಡೆದಾಡಿದ ಪಾವನ ಭೂಮಿಯಲ್ಲಿ ನಾವೆಲ್ಲರೂ ಜೀವಿಸುತ್ತಿರುವುದು ಸಂತಸ ಉಂಟು ಮಾಡುತ್ತಿದೆ ಎಂದು ಹೇಳಿದರು.

    ಭಾತಂಬ್ರಾದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ಅಲ್ಲಮ್‌ಪ್ರಭುಲಿಂಗ ಸ್ವಾಮೀಜಿ, ಭರತನೂರಿನ ಶ್ರೀ ಚಿಕ್ಕಗುರು ನಂಜುಂಡೇಶ್ವರ ಸ್ವಾಮೀಜಿ, ಕವಳಾಸದ ಶ್ರೀ ಬಸವಲಿಂಗ ಶಿವಾಚಾರ್ಯರು, ಬಸವರಾಜ ಬುಳ್ಳಾ, ಡಾ.ಬಸವರಾಜ ಬಲ್ಲೂರು ಮಾತನಾಡಿದರು.

    ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಲತಾ ಹಾರಕೂಡೆ, ಸುಧೀರ ಕಾಡಾದಿ, ಸೂರ್ಯಕಾಂತ ಚಿಲ್ಲಾಬಟ್ಟೆ , ಶಶಿಕಾಂತ ದುರ್ಗೆ ಇತರರಿದ್ದರು. ಬಾಲಾಜಿ ಆದೆಪ್ಪ ಸ್ವಾಗತಿಸಿದರು. ರಾಜಕುಮಾರ ಹೊನ್ನಡೆ ನಿರೂಪಣೆ ಮಾಡಿದರು. ಭಕ್ತರಿಂದ ರುದ್ರಾಕ್ಷಿಯಲ್ಲಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಅವರ ತುಲಾಭಾರ ನೆರವೇರಿತು. ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಬಸವರಾಜ ಹಾರಕೂಡೆ, ಶಿವರಾಜ ಕಮಲಾಪುರೆ, ಶಿವಕುಮಾರ ಕಟ್ಟೆ, ಬಾಬುಗೌಡ ಪಾಟೀಲ್, ಬಾಲಚಂದ್ರ ಮೋರೆ, ಸಂತೋಷ ಮಾಕಾನೆ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts