More

    ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ, ಶುದ್ದವಾದ ನೀರಿನ ವ್ಯವಸ್ಥೆ

    ಚಿಕ್ಕಬಳ್ಳಾಪುರ: ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಶುದ್ದವಾದ ನೀರಿನ ವ್ಯವಸ್ಥೆಗೆ ಗ್ರಾ.ಪಂ.ವಾರು ಟ್ಯಾಂಕರ್ ಗಳು, ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ.
    ಕಳೆದ ಹಲವು ವರ್ಷಗಳಿಂದಲೂ ಕಡೆಗಣಿಸಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಪಾಚಿ, ಹುಳು ಹುಪ್ಪಟೆಗಳು ಓವರ್ ಹೆಡ್ ಟ್ಯಾಂಕ್ ಗಳಲ್ಲಿ ಕಂಡು ಬಂದಿದ್ದು ಇದಕ್ಕೆ ಕೊಳವೆಬಾವಿ, ಕೆರೆಗಳು, ಜಲಾಶಯಗಳಿಂದ ಪೈಪ್ ಲೈನ್ ಮೂಲಕ ನೀರು ಹರಿಸಲಾಗುತ್ತಿತ್ತು. ಹಾಗೆಯೇ ಆಯಾ ಗ್ರಾಮಗಳಿಗೆ, ವಾರ್ಡ್ ಗಳಲ್ಲಿ ಜನರಿಗೆ ಪೂರೈಸಲಾಗುತ್ತಿತ್ತು. ಇದನ್ನು ಸೇವಿಸಿದವರಲ್ಲಿ ಹಲವರಲ್ಲಿ ಕೆಮ್ಮು, ನೆಗಡಿ, ವಾಂತಿ, ಭೇದಿ ಸೇರಿದಂತೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು ಅಶುದ್ದವಾದ ನೀರಿನ ಪೂರೈಕೆಗೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ಬಾರಿ ಹೆಚ್ಚಿನ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.

    *ನಿರಂತರ ನಿರ್ವಹಣೆ ಅಗತ್ಯ
    ಜಾನುವಾರುಗಳ ದಾಹವನ್ನು ನೀಗಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ನಿರ್ಮಿಸಿರುವ ನೀರಿನ ತೊಟ್ಟಿಗಳ ಅಸಮರ್ಪಕ ನಿರ್ವಹಣೆಯು ನಾನಾ ಕಿರಿಕಿರಿಗಳಿಗೆ ಕಾರಣವಾಗಿದೆ.
    ತುಂಬಾ ಕಟ್ಟಿರುವ ಪಾಚಿ, ಬಿದ್ದಿರುವ ಹುಳು ಹುಪ್ಪಟಗಳು, ಕಸದ ತ್ಯಾಜ್ಯ, ಅಶುದ್ಧವಾದ ಕೊಳಕು ನೀರು, ತೊಟ್ಟಿ ಸುತ್ತಲು ತ್ಯಾಜ್ಯ ಗಿಡಗಳು. ಇವು ಸಾಮಾನ್ಯ ದಿನಗಳಲ್ಲಿ ಕಂಡು ಬರುವ ಕಂಡು ಬರುವಂತಹುದು. ಜಾನುವಾರುಗಳಿಗೆ ನೀರು ಪೂರೈಸುವ ಸಲುವಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ಬಹುತೇಕ ಕಡೆ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ, ತಿಂಗಳಾನುಗಟ್ಟಲೇ ಸೂಕ್ತ ನಿರ್ವಹಣೆ ಇಲ್ಲದೇ ಜಾನುವಾರುಗಳು ಅಶುದ್ಧ ನೀರನ್ನೇ ಕುಡಿಯಬೇಕಾಗಿದೆ.
    ಬೇಸಿಗೆ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಗದಿರಲು ಕಾಲ ಕಾಲಕ್ಕೆ ನೀರಿನ ಬದಲಾವಣೆ, ಶುಚಿತ್ವ ನಿರ್ವಹಣೆಗೆ ಆದ್ಯತೆ ನೀಡಬೇಕು.

    *ಆಯಾ ಗ್ರಾ.ಪಂ.ಗಳಿಗೆ ಹೊಣೆ
    ಜಾನುವಾರು ಕುಡಿಯುವ ನೀರಿನ ತೊಟ್ಟಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಗ್ರಾ.ಪಂ.ಗೆ ವಹಿಸಲಾಗಿದೆ. ತೊಟ್ಟಿಗಳಲ್ಲಿ ಪಾಚಿ ಕಟ್ಟದಂತೆ ಆಗಾಗ ಶುಚಿಗೊಳಿಸಿ, ಉತ್ತಮ ನೀರು ಪೂರೈಸಲು ಸೂಚಿಸಲಾಗಿದೆ. ಇನ್ನೂ ಜಾನುವಾರಿಗೆ ಕುಡಿಯಲು ಮಾತ್ರ ಈ ನೀರನ್ನು ಬಳಸಬೇಕೆಂಬ ಬರಹವನ್ನು ತೊಟ್ಟಿಗಳ ಮೇಲೆ ಬರೆಸಲಾಗಿದೆ. ಇದರ ನಡುವೆ ಕೆಲವು ಕಡೆ ನಾಮಫಲಕಗಳೇ ನಾಪತ್ತೆಯಾಗಿವೆ. ಇನ್ನು ನಿರ್ಮಾಣಕ್ಕೆ ಜವಾಬ್ದಾರಿ ಮುಗಿದು ಹೋದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಕೆಲವು ಕಡೆ ತೊಟ್ಟಿಗಳಿಗೆ ಸಮರ್ಪಕವಾಗಿ ನೀರು ಒದಗಿಸುತ್ತಿಲ್ಲ. ತೊಟ್ಟಿಗಳ ಸುತ್ತಲು ತ್ಯಾಜ್ಯ ಗಿಡಗಳನ್ನು ತೆರವುಗೊಳಿಸಿ, ಸ್ವಚ್ಛತೆ ನಿರ್ವಹಣೆಗೆ ಮುಂದಾಗಿಲ್ಲ.
    ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    *ಸ್ಥಳೀಯ ಆಡಳಿತ ಸಂಸ್ಥೆಗಳು ಸಮರ್ಪಕವಾಗಿ ಶುದ್ದವಾದ ನೀರನ್ನು ಪೂರೈಸಲು ಗಮನಹರಿಸಬೇಕು. ಆದರೆ, ಕೆಲ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕನಿಷ್ಠ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯ ತೊಟ್ಟಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.

    ಮುನಿರಾಜು, ವಕೀಲ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts