More

    ಅಪಘಾತಗಳನ್ನು ಕಡಿಮೆಗೊಳಿಸಲು ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುವ ನಾಗರಿಕರ ಗುಂಪು: ಕೇಂದ್ರ ಸಚಿವ ನಿತಿನ್​ ಗಡ್ಕರಿ ಶ್ಲಾಘಿಸಿ ಟ್ವೀಟ್​

    ಪಣಜಿ: ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಇಲ್ಲಿನ ನಾಗರಿಕರ ಗುಂಪೊಂದು 130 ರಸ್ತೆ ಉಬ್ಬುಗಳಿಗೆ ಬಿಳಿ ಬಣ್ಣ ಬಳಿದು ಅವು ವಾಹನ ಚಾಲಕರಿಗೆ ಕಾಣುವಂತೆ ಮಾಡಿವೆ.

    ನಾಗರಿಕರ ಈ ಕೆಲಸವನ್ನು ಕೇಂದ್ರ ಸಚಿವ ನಿತಿನ್​ ಗಡ್ಕರಿ ಶ್ಲಾಘಿಸಿ ಟ್ವೀಟ್​ ಮಾಡಿದ್ದಾರೆ. ನಾಗರಿಕರ ಈ ಗುಂಪು ಈ ಕೆಲಸಕ್ಕಾಗಿ #RostoGoa ಎಂಬ ಅಭಿಯಾನವನ್ನು ಆರಂಭಿಸಿದೆ.

    ಅಭಿಯಾನದ ಸಂಚಾಲಕಿ ಸೆಸಿಲ್ ರೊಡ್ರಿಗಸ್, “ಇಲ್ಲಿನ ರಸ್ತೆ ಉಬ್ಬುಗಳು ಕಪ್ಪಾಗಿ, ಕಾಣದಂತಾಗಿದ್ದವು. ಇದರಿಂದ ಅಪಘಾತಗಳಾಗುತ್ತಿದ್ದವು. ಈ ಅಭಿಯಾನವನ್ನು ನಾವು ತಾಲಿಗಾವೊ ಕ್ಷೇತ್ರದಿಂದ ಆರಂಭಿಸಿದ್ದೆವು. ಈಗ ಅಭಿಯಾನವನ್ನು ಸಾವಿರಾರು ಪ್ರವಾಸಿಗರು ಬರುವ ಕಲ್ಲಂಗೂಟ್ ಮತ್ತು ಬಾಗಾ ಪ್ರದೇಶಗಳಲ್ಲೂ ನಡೆಸಲಾಗಿದೆ” ಎಂದರು.

    ಮೊದಲು ಕೆಲವೇ ಮಂದಿಗಳಿಂದ ಆರಂಭಿಸಿದ ಈ ಅಭಿಯಾನಕ್ಕೆ ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಸಮಾನ ಮನಸ್ಕರು ಬಂದು ಸೇರಿಕೊಂಡಿದ್ದಾರೆ. ಈ ಮೊದಲು ನಾನು ರಸ್ತೆ ಉಬ್ಬು ಕಾಣದಂತಾಗಿ ಅಪಘಾತಕ್ಕೆ ಈಡಾಗಿದ್ದೆ ಆಗಿನಿಂದ ಈ ಅಭಿಯಾನ ಆರಂಭಿಸಿದ್ದೇನೆ ಎಂದು ಮಾಹಿತಿ ನೀಡಿದರು.

    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಅಭಿಯಾನದ ಬಗ್ಗೆ ಟ್ವೀಟ್​ ಮಾಡಿದ್ದು, ತಂಡದ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

    ಸೆಸಿಲ್ ರೊಡ್ರಿಗಸ್, ಸೀಮಾ ಚಿಮುಲ್ಕರ್​ ಮತ್ತು ಪ್ರಕಾಶ್​ ಮಳನಿ ಅವರ ಗುಂಪಿನ ಈ ಕಾರ್ಯವು ಉತ್ತಮವಾಗಿದೆ. ಇದರಿಂದ ವಾಹನ ಚಾಲಕರಿಗೆ ರಸ್ತೆ ಉಬ್ಬುಗಳು ಗೋಚರಿಸುತ್ತಲಿದ್ದು, ಅಪಘಾತಗಳು ಕಡಿಮೆಯಾಗಿವೆ ಎಂದು ಸಚಿವ ಗಡ್ಕರಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts