More

    ಶೌಚಗೃಹವಿಲ್ಲದೆ ನಾಗರಿಕರ ಪರದಾಟ

    ಸೋಮವಾರಪೇಟೆ: ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಂಡಿರುವ ತಾಲೂಕು ಆಡಳಿತ ಸೌಧದಲ್ಲಿ ಸಾರ್ವಜನಿಕರು ಶೌಚಕ್ಕಾಗಿ ಪರದಾಡುವಂತಾಗಿದೆ.

    ಕಟ್ಟಡದಲ್ಲಿ 4 ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಎರಡು ಶೌಚಗೃಹಗಳನ್ನು ಸಾರ್ವಜನಿಕರಿಗಾಗಿ ಮೀಸಲಿಡಲಾಗಿದೆ. ಆದರೆ ಇದುವರೆಗೂ ಬೀಗ ತೆಗೆದಿಲ್ಲ. ಎರಡು ಶೌಚಗೃಹಗಳನ್ನು ಇಲಾಖೆಯ ಸಿಬ್ಬಂದಿ ಉಪಯೋಗಿಸಿಕೊಂಡು ಬೀಗ ಜಡಿಯುತ್ತಾರೆ.

    ಪ್ರತಿದಿನ ಕೆಲಸಕ್ಕಾಗಿ ನೂರಾರು ಸಾರ್ವಜನಿಕರು ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಅದರಲ್ಲೂ ಮಹಿಳೆಯರು, ವೃದ್ಧರು ನಾನಾ ಕೆಲಸಕ್ಕಾಗಿ ಸಂಜೆವರೆಗೂ ಕಾಯುತ್ತಿರುತ್ತಾರೆ. ಆದರೆ ಅವರ ಸಮಸ್ಯೆಯನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ.

    ಬುಧವಾರ ವೃದ್ಧೆಯೊಬ್ಬರು ತಾಲೂಕು ಕಚೇರಿ ಆವರಣದಲ್ಲೇ ಮೂತ್ರವಿಸರ್ಜನೆ ಮಾಡಿಕೊಂಡ ಪ್ರಸಂಗ ನಡೆದಿದ್ದು, ಶೌಚಗೃಹ ವ್ಯವಸ್ಥೆ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ಗುತ್ತಿಗೆದಾರರು ಬಿಲ್ ಪಡೆದಿದ್ದಾರೆ. ಕಾಮಗಾರಿ ಮುಗಿಸಿಲ್ಲ. ಪಿಟ್ ನೀರಿನ ವ್ಯವಸ್ಥೆ ಆಗಿದೆ. ಇನ್ನೊಂದಿಷ್ಟು ಕೆಲಸ ಬಾಕಿಯಿದೆ. ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಕಾಮಗಾರಿ ಮುಗಿಸಿದ ತಕ್ಷಣ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.
    ಎಸ್.ಎನ್.ನರಗುಂದ, ತಹಸೀಲ್ದಾರ್, ಸೋಮವಾರಪೇಟೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts