'ನಾನೀಗ ಅಧಿಕೃತ ತೆಲಂಗಾಣ ಸೊಸೆ'ಯೆಂದ ರಶ್ಮಿಕಾ; ಪತಿ ವಿಜಯ್ ಜೊತೆ 'ಬತುಕಮ್ಮ' ಆಚರಣೆಯಲ್ಲಿ ಭಾಗಿ, ವಿಡಿಯೋ ವೈರಲ್..Bathukamma

ಬತುಕಮ್ಮ ಉತ್ದವದಲ್ಲಿ ರಶ್ಮಿಕಾ-ವಿಜಯ್ ದಂಪತಿ ಭಾಗಿ
ಬತುಕಮ್ಮ ಉತ್ದವದಲ್ಲಿ ರಶ್ಮಿಕಾ-ವಿಜಯ್ ದಂಪತಿ ಭಾಗಿ
Published on: 
  • ಮದುವೆಯಾದ ನಂತರ ಮೊದಲ ಬತುಕಮ್ಮ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ವಿಜಯ್​-ರಶ್ಮಿಕಾ ದಂಪತಿ

  • ನಾನು ತೆಲಂಗಾಣದ ಸೊಸೆ ನನಗೆ ಬತುಕಮ್ಮ ನೃತ್ಯ ಕಲಿಸಿಕೊಡಿ ಎಂದು ಕೇಳಿಕೊಂಡ ರಶ್ಮಿಕಾ

  • ತೆಲಂಗಾಣದ ವಿಶೇಷ ಆಚರಣೆ ಬತುಕಮ್ಮ, ಇದರ ಮಹತ್ವವೇನು?

ಹೈದರಾಬಾದ್: 'ನಾನು ತೆಲಂಗಾಣದ ಅಧಿಕೃತ ಸೊಸೆ. ನಾವು ಮದುವೆಯಾದ ನಂತರ ಮೊದಲ ಬಾರಿಗೆ ಬತುಕಮ್ಮ ಆಚರಿಸುತ್ತಿದ್ದೇವೆ. ನನ್ನ ಅತ್ತೆ ಮತ್ತು ನನ್ನ ಕುಟುಂಬಸ್ಥರಿಗೆ ಬತುಕಮ್ಮ ನೃತ್ಯ ಗೊತ್ತು. ನನಗೆ ಅಷ್ಟಾಗಿ ಬರೋದಿಲ್ಲ. ವಿಜಯ್​ ಇಲ್ಲಿಗೆ ಕರೆತರುತ್ತೇನೆ ಎಂದಿದ್ದರು. ಬತುಕಮ್ಮ ನೃತ್ಯ ಕಲಿಯಲು ನಿಮ್ಮ ಬಳಿಗೆ ಬಂದಿದ್ದೇನೆ. ದಯವಿಟ್ಟು ಕಲಿಸಿಕೊಡಿ' ಹೀಗೆಂದು ಹೈದರಾಬಾದ್​ನ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ 'ಸದ್ದುಲ ಬತುಕಮ್ಮ' ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿದ್ದು ನಟಿ ರಶ್ಮಿಕಾ ಮಂದಣ್ಣ

'ಬತುಕಮ್ಮ' ಹಬ್ಬವನ್ನು ಒಂಬತ್ತು ದಿನಗಳ ಕಾಲ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ತೆಲಂಗಾಣ ರಾಜ್ಯ ಸರ್ಕಾರ ಟ್ಯಾಂಕ್ ಬಂಡ್ ರಸ್ತೆಯಲ್ಲಿ 'ಸದ್ದುಲ ಬತುಕಮ್ಮ' ಕಾರ್ಯಕ್ರಮ ಆಯೋಜಿಸಿತ್ತು. ಸುಮಾರು 700 ಜಾನಪದ ಕಲಾವಿದರ ನೃತ್ಯಗಳು ಮತ್ತು ಸಾವಿರಾರು ಮಹಿಳೆಯರ ಉತ್ಸಾಹದ ನಡುವೆ ಟ್ಯಾಂಕ್ ಬಂಡ್ ಪ್ರದೇಶವು ಹಬ್ಬದ ಸಂಭ್ರಮದಿಂದ ಕೂಡಿತ್ತು. ತೆಲಂಗಾಣದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರು ಹಾಗೂ ಹಲವಾರು ರಾಜ್ಯ ಸಚಿವರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು. ನಟ ವಿಜಯ್​​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸೆಂಟರ್ ಆಫ್​ ಅಟ್ರಾಕ್ಷನ್​ ಆಗಿದ್ದರು.

ಹೇಗಿದ್ರು ತಾರಾ ದಂಪತಿ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾದ ನಂತರ ಆಚರಿಸುತ್ತಿರುವ ಮೊದಲ ಬತುಕಮ್ಮ ಹಬ್ಬ ಇದು. ಇಬ್ಬರು ಸಾಂಪ್ರಾದಾಯಿಕವಾಗಿ ತೊಟ್ಟ ಉಡುಗೆಯಲ್ಲಿ ಕಾಣಿಸಿಕೊಂಡರು. ನೀಲಿ ಬಣ್ಣದ ರೇಷ್ಮೆ ಸೀರೆ, ಅದಕ್ಕೊಪ್ಪುವ ಆಭರಣ, ತುರುಬು ಕಟ್ಟಿದ ಕೂದಲು ಅವರ ಅಂದವನ್ನು ಹೆಚ್ಚಿಸಿತ್ತು. ಇನ್ನೂ ವಿಜಯ್​ ದೇವರಕೊಂಡ ಅವರು ಹಳದಿ ಬಣ್ಣದ ಕಸೂತಿ ಮಿಶ್ರಿತ ಕುರ್ತಾ ಧರಿಸಿ ಮಿಂಚುತ್ತಿದ್ದರು.

ಹೂಗಳಿಂದ ತುಂಬಿದ ದೊಡ್ಡ ಗೋಪುರವನ್ನಿಡಿದು ವೇದಿಕೆ ಇಳಿದ ರಶ್ಮಿಕಾ ಅವರು ಜನಪದ ನೃತ್ಯದಲ್ಲಿ ಭಾಗಿಯಾದರೂ. ಮೊದಲ ಬಾರಿ ತೆಲಂಗಾಣದ ಸಂಸ್ಕೃತಿ, ಸಂಪ್ರದಾಯ ಪಾಲನೆ ಮಾಡುತ್ತಿದ್ದ ಅವರು ನೃತ್ಯಕ್ಕೆ ಹೆಜ್ಜೆ ಹಾಕಲು ತಡಕಾಡಿದರು. ಈ ವೇಳೆ ಸ್ಟೇಜ್​ನಿಂದ ನೋಡುತ್ತಿದ್ದ ವಿಜಯ್​​​​...ಕೆಳಕ್ಕಿಳಿದು ರಶ್ಮಿಕಾಗೆ ಜೊತೆಯಾದರು.

'ನಾನು ಈಗ ತೆಲಂಗಾಣದ ಅಧಿಕೃತ ಸೊಸೆ. ಮದುವೆಯಾದ ನಂತರ ಆಚರಿಸುತ್ತಿರುವ ಮೊದಲ ಆಚರಣೆ. ನನಗೆ ಬತುಕಮ್ಮ ಆಚರಣೆ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನಮ್ಮ ಅತ್ತೆ, ಮನೆಯ ಕುಟುಂಬಸ್ಥರು ನೃತ್ಯ ಮಾಡುತ್ತಾರೆ..ಹೀಗಾಗಿ ನೃತ್ಯದ ಬಗ್ಗೆ ಸ್ವಲ್ಪಗೊತ್ತಿದೆ. ವಿಜಯ್​ಗೆ ಈ ಬಗ್ಗೆ ಹೇಳಿದ್ದಾಗ ಎಲ್ಲಿ ದೊಡ್ಡದಾಗಿ ಸೆಲಬ್ರೇಟ್ ಮಾಡಲಾಗುತ್ತದೆಯೋ ಅಲ್ಲಿ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದರು. ಅದರಂತೆ ಬಂದಿದ್ದೇನೆ. ನನಗೆ ದಯವಿಟ್ಟು ಬತುಕಮ್ಮ ಜನಪದ ನೃತ್ಯ ಕಲಿಸಿಕೊಡಿ' ಎಂದರು. ನೆರೆದಿದ್ದ ಮಹಿಳೆಯರು ನಟಿಗೆ ಲಯಬದ್ಧವಾಗಿ ಹೆಜ್ಜೆ ಹಾಕಲು, ಸಮಯಕ್ಕೆ ತಕ್ಕಂತೆ ಚಪ್ಪಾಳೆ ತಟ್ಟಲು, ಹೆಜ್ಜೆ ಇಡಲು ಸಹಾಯ ಮಾಡಿದರು.

ಏನಿದು ಬತುಕಮ್ಮ ಆಚರಣೆ?

ಬತುಕಮ್ಮ ಹಬ್ಬವು ಶರದ್ ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಬತುಕಮ್ಮ ಎಂದರೆ ಅಮ್ಮನು ನವಶಕ್ತಿಯಾಗಿ ಜೀವಂತವಾಗಿ ಬಂದವಳು ಎಂದರ್ಥ. ಪ್ರಕೃತಿಯೇ ದೇವರು ಎಂದು ನಂಬುವ ಜನ ಪ್ರಕೃತಿಯ ಭಾಗವಾಗಿರುವ ಹೂವುಗಳನ್ನು ದೇವತೆಯರೆಂದು ಭಾವಿಸಿ, ಅತ್ಯಂತ ಸಂಭ್ರಮ ಹಾಗೂ ಹೆಮ್ಮೆಯಿಂದ ಆಚರಿಸುತ್ತಾರೆ.

ಈ ಹಬ್ಬದ ಪ್ರಮುಖ ಆಕರ್ಷಣೆ ಎಂದರೆ, ಪುರುಷರು ಬತುಕಮ್ಮನನ್ನು ತಯಾರಿಸಲು ಕಾಡಿನಿಂದ ತಂಗೇಡು, ಗುಣುಕಾ, ಚಂಡುಹೂವುಶಾಮಂತಿ ಮುಂತಾದ ವಿವಿಧ ಬಗೆಯ ಔಷಧೀಯ ಗುಣವುಳ್ಳ ವರ್ಣರಂಜಿತ ಋತುಮಾನದ ಹೂವುಗಳನ್ನು ತರುತ್ತಾರೆ. ಇದನ್ನು ಮಹಿಳೆಯರು ತಾಮ್ರ ಅಥವಾ ಹಿತ್ತಾಳೆಯ ತಟ್ಟೆಯಲ್ಲಿ ಏಳು ಅಥವಾ ಒಂಬತ್ತು ವೃತ್ತಾಕಾರದ ಪದರಗಳಲ್ಲಿ ಗೋಪುರದ ಆಕಾರದಲ್ಲಿ ಜೋಡಿಸುತ್ತಾರೆ. . ಇದರ ತುದಿಯಲ್ಲಿ ಜೇಡಿಮಣ್ಣಿನಿಂದ ಮಾಡಿದ ಗೌರಿ ದೇವಿಯ ಪ್ರತಿಕೃತಿಯನ್ನು ಇಡಲಾಗುತ್ತದೆ.

ಇದನ್ನು ಸಂಜೆ ಸಮಯದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಬತುಕಮ್ಮಗಳನ್ನು ಮೈದಾನ ಅಥವಾ ರಸ್ತೆಯ ಮಧ್ಯದಲ್ಲಿ ಇಡುತ್ತಾರೆ. ಆ ನಂತರ ಅದರ ಸುತ್ತಾ ಸುತ್ತುತ್ತಾ, ಚಪ್ಪಾಳೆ ತಟ್ಟುತ್ತಾ ಹೆಜ್ಜೆ ಹಾಕುತ್ತಾರೆ. ಅಮ್ಮನ ಬಗ್ಗೆ ಹಾಡು ಹಾಡುತ್ತಾರೆ.(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net