ನಾನು ನನ್ನ ಬಗೆಗೆ ಸುಮಾರು ಸುದ್ದಿ, ಆರ್ಟಿಕಲ್ಗಳನ್ನು ಓದಿದ್ದೇನೆ. ಆದರೆ, ನೀವು ಬರೆದ ಈ ವಿಚಾರ ಓದುವಾಗ ನಾನು ನಿಜವಾಗಿಯೂ ಭಾವುಕಳಾದೆ. ನಾನು ಇಷ್ಟೊಂದು ಭಾವುಕಳಾಗಿದ್ದು ಇದೇ ಮೊದಲ ಬಾರಿ. ಹೇಳೋದು ಬಹಳಷ್ಟಿದೆ. ಆದರೆ, ಸಣ್ಣದಾಗಿ ಬರೆಯುತ್ತೇನೆ. ನಾನು ನನ್ನದೇ ಸಾಧನೆಯ ಪ್ರತ್ಯೇಕ ಜಾಗವನ್ನು ಕಂಡುಕೊಳ್ಳುತ್ತಿದ್ದೇನೆ. ಅದನ್ನು ಗುರುತಿಸಿಕೊಳ್ಳುವುದಕ್ಕೆ ನಾನು ಆಭಾರಿ. ಮತ್ತೊಂದು ವಿಚಾರ, ನಾನು ಪ್ರೀತಿ ಎಂಬುದರ ಬಗ್ಗೆ ಏನನ್ನು ಹೇಳಲು ಬಯಸುತ್ತೇನೆ ಎಂದರೆ, ನಿಮ್ಮನ್ನು ಸ್ವತಂತ್ರ್ಯವಾಗಿ ಪಯಣಿಸಲು ಬಿಡುವ ಪ್ರೀತಿಯನ್ನು, ಸಂಗಾತಿಯನ್ನು ಹುಡುಕಿಕೊಳ್ಳಿ ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಆ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರರನ್ನು ಹುಡುಕಿಕೊಳ್ಳಲು ಸಲಹೆ ನೀಡಿದ್ದಾರೆ.