ಶೆಹಜಾದ್​ ಆಂಜನೇಯನ ಜಪ ಮಾಡುತ್ತಾನೆ, ಹಾಗೆಯೇ ಮಟನ್ ತಿನ್ನುತ್ತಾನೆ: "ರೈಸ್​ ಎಂಡ್​ ಫಾಲ್​" ಹಲ್ಲೆ ಬಳಿಕ ಸಿವೆತ್​​ ಫಸ್ಟ್​ ರಿಯಾಕ್ಷನ್​! Siwet Tomar

ಶೆಹಜಾದ್​ ಆಂಜನೇಯನ ಜಪ ಮಾಡುತ್ತಾ ಮಟನ್ ತಿನ್ನುತ್ತಾರೆ! 'ರೈಸ್ ಎಂಡ್ ಫಾಲ್' ಹಲ್ಲೆ ವಿವಾದದ ಬಳಿಕ ಸಿವೆತ್ ನೀಡಿರುವ ಮೊದಲ ಪ್ರತಿಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ.
Siveth's first reaction after the 'Rise and Fall' controversy
'ರೈಸ್ ಎಂಡ್ ಫಾಲ್' ವಿವಾದದ ನಂತರ ಸಿವೆತ್ ಮೊದಲ ಪ್ರತಿಕ್ರಿಯೆ
Published on: 

ನವದೆಹಲಿ: ಹಿಂದಿ ಭಾಷೆಯಲ್ಲಿ ಪ್ರವಾಸವಾಗುವ ರೈಸ್​ ಎಂಡ್​ ಫಾಲ್​ ಸೀಸನ್​ 2 ಎಂಬ ರಿಯಾಲಟಿ ಶೋನಲ್ಲಿ ಸಿವೆತ್​ ತೋಮರ್​ ಎಂಬ ಸ್ಪರ್ಧಿ, ಮಾಜಿ ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ ಮೇಲೆ ದೈಹಿಕ ಹಲ್ಲೆ ನಡೆಸಿದ ಪರಿಣಾಮ ಕಾರ್ಯಕ್ರಮದಲ್ಲಿ ಅವರನ್ನು ಆಚೆ ಕಳುಹಿಸಿದ ಘಟನೆ ಸಂಭವಿಸಿದೆ.

ಬಿಜೆಪಿ ಮಾಜಿ ವಕ್ತಾರ, ಶೆಹಜಾದ್​ ಪೂನಾವಾಲಾ ಹಾಗೂ ನಟಿ ಸ್ವರಾ ಭಾಸ್ಕರ್​ ನಡುವೆ ವಾಕ್ಸಮರ ನಡೆಯುತ್ತಿದ್ದ ವೇಳೆ, ಇನ್ನೊಬ್ಬ ಪ್ರತಿಸ್ಪರ್ಧಿ ಸಿವೆತ್​​ ತೋಮರ್​, ಶೆಹಜಾದ್​ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Also Read
‘ಜಾತಿ ಇಲ್ಲದಿದ್ದರೆ ರಾಜಕಾರಣಕ್ಕೆ ಅಸ್ತಿತ್ವವೇ ಇಲ್ಲ’! ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಶಾಕಿಂಗ್ ಹೇಳಿಕೆ! Maithili Thakur
Siveth's first reaction after the 'Rise and Fall' controversy

ಏನಿದು ಘಟನೆ?

ರೈಸ್​ ಎಂಡ್​ ಫಾಲ್​ ಎಂಬ ರಿಯಾಲಿಟಿ ಶೋನಲ್ಲಿ ಒಟ್ಟು 15 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ವೇಳೆ ಸ್ವರಾ ಭಾಸ್ಕರ್ ಹಾಗೂ ಶೆಹಜಾದ್​ ಪೂನಾವಾಲಾ ನಡುವೆ ಜನಗಳ ಪ್ರಾರಂಭವಾಗಿದೆ. ಶೆಹಜಾದ್​, ಸಿವತ್​ನ ಹೆಸರನ್ನು ಉಲ್ಲೇಖಿಸಿ, ಹೋಗು ಸಹೋದರ ಮೈತ್ರಿ ಮಾಡಿಕೋ, ಟ್ಯಾಟೂ ಹಾಕಿಸಿಕೊಂಡು ಓಡಾಡುವ ಶಿವೆತ್​ ಈಗ ಸ್ವರಾ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾನೆಂದು ಹೇಳುತ್ತಾರೆ.

ಇದನ್ನು ಕೇಳಿಸಿಕೊಂಡು, ಕೋಪಗೊಂಡ ಶಿವೆತ್​ ಹಿಂದಿನಿಂದ ಬಂದು, ಶೆಹಜಾದ್​ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಇತರ ಸ್ಪರ್ಧಿಗಳು ಇದನ್ನು ತಡೆಯಲು ಮುಂದಾದರೂ ಕೂಡ, ಶಿವೆತ್, ಶೆಹಜಾದ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಶಿವೆತ್​ನನ್ನು ಸ್ಪಾಟ್​ ಎಲಿಮಿನೇಷನ್​ ಮಾಡಿ ಕಾರ್ಯಕ್ರಮದಿಂದ ಹೊರಹಾಕಲಾಗಿದೆ.

ಶೆಹಜಾದ್​ ಆಂಜನೇಯನ ಹೆಸರೇಳಿ; ಮಟನ್​ ತಿನ್ನುತ್ತಾನೆ!

ಇನ್ನು, ಕಾರ್ಯಕ್ರಮದಿಂದ ಹೊರಬಂದಿರುವ ಶಿವೆತ್​ ತೋಮರ್​, ಶೆಹಜಾದ್​ ಪೂನಾವಾಲಾ ವಿರುದ್ಧ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ವಿಡಿಯೋನಲ್ಲಿ ಆಕ್ರೋಶ ಭರಿತನಾಗಿ ಮಾತನಾಡಿರುವ ಶಿವೆತ್​, ನಾನು ಶೆಹಜಾದ್​ ರೀತಿಯ ವ್ಯಕ್ತಿಯನ್ನು ಹೇಗೆ ನಂಬಬೇಕು? ಅವನು ಬೆಳಿಗ್ಗೆ ಈಡೀ ದಿನ ಆಜಂನೇಯನ ಜಪ ಮಾಡುತ್ತಾನೆ ಹಾಗೆಯೇ ದಿನಕ್ಕೆ ನಾಲ್ಕು ಸಲ ಚಿಕನ್​-ಮಟನ್​ ತಿನ್ನುತ್ತಾನೆ. ಅಷ್ಟೇ ಅಲ್ಲದೇ, ರುದ್ರಾಕ್ಷದ ಮಾಲೆ ಧರಿಸಿಯೇ ಮಾಂಸಾಹಾರವನ್ನು ಸೇವಿಸುತ್ತಾನೆಂದು ಆರೋಪಿಸಿದ್ದಾರೆ.

ಇದು ಕೇವಲ ನಾನೊಬ್ಬನೇ ಹೇಳಿದಲ್ಲ, ಇನ್ನೊಬ್ಬ ಪ್ರತಿಸ್ಪರ್ಧಿ, ಲಾಲೂ ಪ್ರಸಾದ್​ ಯಾದವ್​ ಪುತ್ರ ತೇಜ್​ ಪ್ರತಾಪ್​ ಯಾದವ್​ ಕೂಡ, ಶೆಹಜಾದ್​ ನೀವು ಆಂಜನೇಯನ ಜಪ ಮಾಡುತ್ತೀಯಾ, ಆದರೆ ನಿನ್ನ ಪ್ಲೇಟ್​ನಲ್ಲಿ ಯಾವಾಗಲೂ ಮಾಂಸಾಹಾರವಿತ್ತದೆ ಅಲ್ಲ! ಎಂದು ಪ್ರಶ್ನಿಸಿದ್ದರು ಎಂದಿದ್ದಾರೆ.

Also Read
ಅಂದು ಸಚಿನ್ ಜೊತೆ ವಿಶ್ವ ದಾಖಲೆ, ಇಂದು ವೃದ್ಧಾಶ್ರಮದಲ್ಲಿ ಒಂಟಿ ಬದುಕು: ಕಣ್ಣೀರಿಟ್ಟ ವಿನೋದ್ ಕಾಂಬ್ಳಿ ವೈರಲ್ ವಿಡಿಯೋ! Vinod Kambli
Siveth's first reaction after the 'Rise and Fall' controversy

ನಾನು ಹೊಡೆದಿಲ್ಲ; ಕಾಲರ್​ ಹಿಡಿದಿದ್ದೆ!

ನಾನು ಶೆಹಜಾದ್ ಮೇಲೆ ಕೈ ಮಾಡಿಯೇ ಇಲ್ಲ, ನನ್ನ ಉದ್ದೇಶ ಅವನ ಮೇಲೆ ಹಲ್ಲೆ ಮಾಡುವುದೇ ಆಗಿದ್ದರೆ, ಅವನನ್ನು ಅಲ್ಲೇ ಹೊಡೆದು ಹಾಕುತ್ತಿದ್ದೆ, ನನಗೆ ಯಾರ ಮೇಲೆ ಕೈ ಮಾಡಲು ಭಯವಿಲ್ಲ. ನಾನು ಕೇವಲ ಅವನ ಕಾಲರ್​ ಹಿಡಿದಿದ್ದೆ. ಅವನ ಮೇಲೆ ಕೈ ಮಾಡುವ ಉದ್ದೇಶವಿದ್ದರೆ, ನಾನು ಮಾಡುತ್ತಿದ್ದೆ, ಅವನು ಯಾರೇ ಆಗಿರಲಿ, ಏನೇ ಇರಲಿ ನನಗೆ ಅವೆಲ್ಲಾ ನಗಣ್ಯ ಎಂದು ಕಿಡಿಕಾರಿದ್ದಾರೆ.

ನನಗೆ ನನ್ನ ಟ್ಯಾಟೂ ಬಗ್ಗೆ ಅಪಾರವಾದ ಅಭಿಮಾನ ಹಾಗೂ ಗೌರವವಿದೆ. ಅದು ಕೇವಲ ಒಂದು ಶಾಹಿಯಲ್ಲ, ನನ್ನ ದೇಹವನ್ನು ಹಂಚಿಕೊಂಡಿದೆ, ಅದು ನನ್ನ ಪರಂಪರೆಯ ಸಂಕೇತವಾಗಿದೆ. ಇದರ ಬಗ್ಗೆ ಯಾರಾದರೂ ಅಪಹಾಸ್ಯ ಮಾಡಿದರೆ, ಅದನ್ನು ನಾನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿವೆತ್​ ತೋಮರ್​ ವಿಡಿಯೋನಲ್ಲಿ ಹೇಳಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net