ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟಿನ ವಿಚಾರ ಸ್ಫೋಟಕ ಹೇಳಿಕೆ ನೀಡಿದ ನಟ ಆದಿ ಲೋಕೇಶ್​...!

Aadi Lokesh
Published on

ಬೆಂಗಳೂರು: ಚಿತ್ರೀಕರಣ ಸಮಯದಲ್ಲಿ ನನ್ನ ಸಹಕಲಾವಿದರು ಡ್ರಗ್ಸ್​ ತೆಗೆದುಕೊಂಡಿರುವುದನ್ನು ನಾನು ನೋಡಿದ್ದೀನಿ ಎಂದು ನಟ ಆದಿ ಲೋಕೇಶ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ ನಂಟಿನ ಕುರಿತು ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿ, ಡ್ರಗ್ಸ್ ಎಲ್ಲಿಂದ ಬರುತ್ತಿದೆ ಹಾಗೂ ಯಾರು ತರುತ್ತಿದ್ದಾರೆ ಅವರನ್ನು ಬಂಧಿಸಬೇಕು. ಇದು ಕೇವಲ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲ, ಎಲ್ಲ ಕರೆ ಇದೆ. ಹೀಗಾಗಿ ಚಿತ್ರರಂಗವನ್ನು ಗುರಿಯಾಗಿಸೋದು ತಪ್ಪಾಗುತ್ತದೆ ಎಂದು ಆದಿ ಲೋಕೇಶ್​ ಹೇಳಿದರು.

ಕೆಲವರು ಸಣ್ಣಗಾಗಲು ಹಾಗೂ ದಪ್ಪಗಾಗಲು ಸ್ಟೀರಾಯ್ಡ್ ತಗೋತಾರೆ. ನಾನು ಚಿತ್ರರಂಗಕ್ಕೆ ಬಂದಿದ್ದು 2001ರಲ್ಲಿ, ಇವತ್ತಿನವರೆಗೂ ಯಾವ ರೇವ್ ಪಾರ್ಟಿಗೂ ಹೋಗಿಲ್ಲ ಎಂದರು.

ಕೆಲ ಯುವನಟರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಶೂಟಿಂಗ್ ಸಮಯದಲ್ಲಿ ಸಹಕಲಾವಿದರು ತೆಗೆದುಕೊಂಡಿರುವುದನ್ನು ನೋಡಿದೀನಿ. ಎಲ್ಲಾ ಕಡೆ ಎಲ್ಲ ಬಗೆಯ ವ್ಯವಹಾರಗಳೂ ನೆಡೆಯುತ್ತವೆ. ಅದಕ್ಕಂತಲೇ ಕೆಲ ಜನರಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net