ಡ್ರಗ್ಸ್​ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್​​ಗೆ ತಿಳಿಸಿ, ಮೇಘನಾ ರಾಜ್​ ನೋವಿನ ಮಾತು!

Chiru
Published on

ಬೆಂಗಳೂರು: ಮಾದಕವಸ್ತು ಜಾಲದ ಬಗ್ಗೆ ನಟ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಸಾಕಷ್ಟು ಮಾಹಿತಿಗಳನ್ನು ನೀಡಿದ್ದು, ಅವರ ಒಂದು ನಿರ್ಧಿಷ್ಟ ಹೇಳಿಕೆ ಇದೀಗ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.

ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿದೆ. ಸರ್ಕಾರ ರಕ್ಷಣೆ ಕೊಟ್ಟರೆ ಎಲ್ಲವನ್ನು ಬಹಿರಂಗಪಡಿಸುತ್ತೇನೆಂದು ಹೇಳಿ, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡಲಿಲ್ಲ? ಎಂದು ಇಂದ್ರಜಿತ್​ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇಂದ್ರಜಿತ್​ ಹೇಳಿಕೆ ಬಹು ದೊಡ್ಡ ಚರ್ಚೆಯಾಗಿತು. ಇತ್ತೀಚೆಗೆ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಕುರಿತೇ ಇಂದ್ರಜಿತ್​ ಹೇಳಿದ್ದಾರೆಂದು ಚರ್ಚೆಯಾಗಿತ್ತು.

ಇದರ ಬೆನ್ನಲ್ಲೇ ಚಿರು ಮಾವ ಹಾಗೂ ಮೇಘನಾ ರಾಜ್​ ತಂದೆ ಸುಂದರ್​ ರಾಜ್​ ಚಿರು ಹೆಸರನ್ನು ಪ್ರಸ್ತಾಪಿಸಬೇಡಿ. ಕರೊನಾ ಇದ್ದಿದ್ದರಿಂದ ಶವಪರೀಕ್ಷೆ ಮಾಡಿಸಲಿಲ್ಲ ಎಂದಿದ್ದರು. ಅಲ್ಲದೆ, ಸರ್ಜಾ ಕುಟುಂಬದ ಆಪ್ತರಾದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಕಿಡಿಕಾರಿ ಚಿರು ಸತ್ತ ಬಳಿಕ ತೇಜೋವಧೆ ಮಾಡುವುದು ಮಾನವೀಯತೆಯಲ್ಲ ಎಂದು ಇಂದ್ರಜಿತ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಇದೀಗ ಚಿರು ಮೃತಪಟ್ಟು ಮೂರು ತಿಂಗಳಾದರೂ ಚಿರು ಹೆಸರು ಡ್ರಗ್ಸ್​ ಜಾಲದಲ್ಲಿ ಕೇಳಿಬರುತ್ತಿರುವುದು ಸರ್ಜಾ ಕುಟುಂಬಕ್ಕೆ ನೋವಾಗಿದೆ. ಅದರಲ್ಲೂ ಪತ್ನಿ ಮೇಘನಾಗೆ ತುಂಬಾ ಬೇಸರವಾಗಿದ್ದು, ಪ್ರಶಾಂತ್​ ಸಂಬರಗಿ ಜತೆ ನಡೆಸಿರುವ ವಾಟ್ಸ್​ಆ್ಯಪ್​ ಚಾಟ್​ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಯಾರದೇ ಹೆಸರನ್ನು ಹಾಳು ಮಾಡಬೇಡಿ ಎಂದು ಇಂದ್ರಜಿತ್​ ಅವರಿಗೆ ತಿಳಿಸಿ, ಅವರು ಪರಿಸ್ಥಿತಿಯನ್ನು ಕದಡುತ್ತಿದ್ದಾರೆ. ಅವರೇಕೆ ಚಿರು ಹೆಸರನ್ನು ಬಳಸುತ್ತಿದ್ದಾರೆಂದು ಮೇಘನಾ ಅಸಮಾಧಾನ ಹೊರಹಾಕಿದ್ದಾರೆ. ಧ್ರುವ ಸರ್ಜಾ ಸಹ ಚಾಟ್​ ಮಾಡಿದ್ದು, ನಮ್ಮ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net