

ಟಾಲಿವುಡ್ನ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸ್ಪಿರಿಟ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ.
2027 ಮಾ.5ರಂದು ರಿಲೀಸ್ ಆಗೋದು ಡೌಟು ಎನ್ನುವ ಚರ್ಚೆ ಮುನ್ನೆಲೆಗೆ.
ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾ.
Spirit release date postponed: ಟಾಲಿವುಡ್ನ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಸ್ಪಿರಿಟ್ ರಿಲೀಸ್ಗಾಗಿ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿರುವ ಹೊತ್ತಿನಲ್ಲಿಯೇ ಚಿತ್ರತಂಡ ಬ್ಯಾಡ್ನ್ಯೂಸ್ವೊಂದನ್ನು ಕೊಟ್ಟಿದೆ. ಅನಿಮಲ್ ಖ್ಯಾತಿಯ ನಿರ್ದೇಶಕ 'ಅನಿಮಲ್' ಸುದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾ 2027 ಮಾರ್ಚ್ 5ರಂದು ಸಹ ರಿಲೀಸ್ ಆಗೋದು ಡೌಟು ಎಂದು ಹೇಳಲಾಗುತ್ತಿದೆ. ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ.
ಪೌರ್ಣಮಿ, ಮಿಸ್ಟರ್ ಪರ್ಫೆಕ್ಟ್, ಡಾರ್ಲಿಂಗ್, ಮಿರ್ಚಿ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಟಾಲಿವುಡ್ ಪ್ರಭಾಸ್ ಕೊಟ್ಟಿದ್ದಾರೆ. ಆದರೆ, ಇತ್ತೀಚೆಗೆ ರಾಜಾ ಸಾಬ್, ಸಾಹೋ, ಆದಿಪುರುಷ್ ಮಾತ್ರ ಅವರಿಗೆ ಅಷ್ಟಾಗಿ ಹೆಸರು ತಂದುಕೊಟ್ಟಿಲ್ಲ. ಈ ಮಧ್ಯೆ ಮಾರ್ಚ್ನಲ್ಲಿ ರಿಲೀಸ್ ಆಗಬೇಕಿದ್ದ ಸ್ಪಿರಿಟ್ ಸಿನಿಮಾ ನೋಡಬೇಕು ಎಂದು ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಸದ್ಯ ನಿರಾಸೆಯುಂಟಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಸ್ಪಿರಿಟ್ ಚಿತ್ರತಂಡವು ಸಿನಿಮಾವನ್ನು ತಡವಾಗಿ ರಿಲೀಸ್ ಮಾಡಲು ಚಿಂತನೆ ನಡೆಸುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಡಿಸೆಂಬರ್ 2026 ರಲ್ಲಿ ತೆರೆಕಾಣಬೇಕಿದ್ದ ಅವರ ಪೀರಿಯಡ್ ಆಕ್ಷನ್ ಸಿನಿಮಾ 'ಫೌಜಿ' ಸಹ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಹಿನ್ನೆಲೆ ಮಾರ್ಚ್ 5, 2027ನ್ನು ಬಿಡುಗಡೆ ದಿನಾಂಕವೆಂದು ಖಚಿತಪಡಿಸಲಾಗಿತ್ತು. ಆದರೆ ಎರಡು ಸಿನಿಮಾ ಬೇಗ ರಿಲೀಸ್ ಆಗುವುದು ಸಂದೇಹ ಎನ್ನಲಾಗುತ್ತಿದೆ.
ಆಗಸ್ಟ್ನಲ್ಲಿ ಸ್ಪಿರಿಟ್ ಬಗ್ಗೆ ಮಾತನಾಡಿದ್ದ ಸಂದೀಪ್ ರೆಡ್ಡಿ ವಂಗಾ, 'ನಾವು ಈಗಾಗಲೇ ಪ್ರಕಟಿಸಿರುವ ದಿನದಂದೇ ಪಕ್ಕ ಸಿನಿಮಾ ರಿಲೀಸ್ ಆಗುತ್ತದೆ. ಆ ಸಮಯದಲ್ಲಿ 40 ದಿನಗಳ ಶೂಟಿಂಗ್ ಮುಕ್ತಾಯಗೊಂಡಿದ್ದು, ಇನ್ನೂ 65 ದಿನಗಳ ಚಿತ್ರೀಕರಣ ಬಾಕಿ ಇದೆ' ಎಂದಿದ್ದರು.
ಇದನ್ನೂ ಓದಿ: ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರನಡೆದಿದ್ದೇಕೆ?: ಕೊನೆಗೂ ಮೌನ ಮುರಿದ ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ! Deepika Padukone
ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಭೂಷಣ್ ಕುಮಾರ್ ಅವರ ಟಿ-ಸೀರಿಸ್ ಹಾಗೂ ಭದ್ರಕಾಳಿ ಪಿಕ್ಚರ್ಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಒಟ್ಟು ಎಂಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಪ್ರಭಾಸ್ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ತೃಪ್ತಿ ಡಿಮ್ರಿ, ವಿವೇಕ್ ಒಬೆರಾಯ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಕೊನೆಯಲ್ಲಿ ಬಿಡುಗಡೆಯಾದ ಚಿತ್ರದ ಮೊದಲ ನೋಟದಲ್ಲಿ ಪ್ರಭಾಸ್ ಒರಟಾದ ಹಾಗೂ ಗಾಯಗೊಂಡ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅವರ ಜೊತೆ ತೃಪ್ತಿ ಡಿಮ್ರಿ ಕೂಡ ಇದ್ದರು. ಚಿತ್ರವು ಮಾರ್ಚ್ 5, 2027ರಂದೇ ಬಿಡುಗಡೆಯಾಗುತ್ತದೋ ಅಥವಾ ಮುಂದಕ್ಕೆ ಹೋಗುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).