ಸದ್ಯ, ದಕ್ಷಿಣ ಭಾರತದಲ್ಲಿ ಕೇವಲ ಮೂರು ನಟಿಯರ ಹೆಸರುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಜೊತೆಗೆ, ಆ ಮೂರು ನಟಿಯರು ಕನ್ನಡಿಗರು ಎಂಬುದು ಬಹುಮುಖ್ಯ. ಅಂದಹಾಗೆ, ಬ್ಯೂಸಿಯಸ್ಟ್ ನಟಿಯರ ಪಟ್ಟಿಯಲ್ಲಿ ನಮ್ಮ ಕರುನಾಡ ಕುವರಿಯರು ಮೂರು ಮಂದಿ. ಅವರೆ ನಟಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ. ಈ ಮೂರು ನಟಿಯರ ಹೆಸರುಗಳು ಕೇಳಿದರೆ ಸಾಕು ಅವರು ಮಾಡುತ್ತಿರುವ ಸಾಲು ಸಾಲು ಸಿನಿಮಾಗಳು, ಅವರು ಪಡೆದಿರುವ ಖ್ಯಾತಿ, ಅಭಿಮಾನಿಗಳ ಸಂಖ್ಯೆ ಎಲ್ಲರಿಗೂ ನೆನಪಾಗುತ್ತೆ. ಹೀಗಿದ್ದರೂ, ಈ ಮೂವ್ವರು ನಟಿಯರ ಪೈಕಿ ಬುಟ್ಟ ಬೊಮ್ಮಾ ಎಂದೇ ಫೇಮಸ್ ಆಗಿರುವ ನಟಿ ಪೂಜಾ ಹೆಗ್ಡೆ ಮಾತ್ರ ಬೇರೆ ಇಬ್ಬರೂ ನಟಿಯರಿಗಿಂತ ಸಿಕ್ಕಾಪಟ್ಟೆ ಬ್ಯೂಸಿ ಎಂದೇ ಹೇಳಬೇಕು.