ಹೈದರಾಬಾದ್: ಸಮಂತಾ, ನಾಗ ಚೈತನ್ಯ ಎಂಬ ಎರಡು ಸೆಲೆಬ್ರಿಟಿ ಹೆಸರುಗಳು ಈ ವರ್ಷ ಮಾಡಿರುವ ಸದ್ದು, ಸುದ್ದಿ ಅಷ್ಟಿಷ್ಟಲ್ಲ. 11 ವರ್ಷದ ಪ್ರೇಮಾಯಣಕ್ಕೆ ಪೂರ್ಣ ವಿರಾಮ ಇಟ್ಟ ಈ ಜೋಡಿ ಅವರ ಅಭಿಮಾನಿಗಳಿಗೆ ನೋವು ಉಳಿಸಿ, ಉಳಿದವರ ಟೀಕೆಗಳಿಗೆ ತುತ್ತಾದರು. ಹೀಗಾಗಿ, ಹಲವಾರು ವಿಚಾರಗಳಿಂದ ನಟಿ ಸಮಂತಾ ಮತ್ತು ಅವರ ಮಾಜಿ ಪತಿ ನಟ ನಾಗಚೈತನ್ಯ ದಿನನಿತ್ಯ ಸುದ್ದಿಯಾಗುತ್ತಿದ್ದಾರೆ. ಅವರಿಬ್ಬರು ಏನು ಮಾಡಿದರೂ, ಏನು ಮಾತಾಡಿದರು ಎಲ್ಲವೂ ಸುದ್ದಿಯಾಗಿ, ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತೆ. ಇದೀಗ, ನಟ ನಾಗಚೈತನ್ಯ ಅವರ ಒಂದು ಹೇಳಿಕೆ ಎಲ್ಲರ ಮನಸ್ಸು ಗೆದ್ದಿದೆ. ಹೌದು, ನಟ ನಾಗಚೈತನ್ಯ ಸದ್ಯ ಅವರ 'ಬಂಗಾರ್ರಾಜು' ಸಿನಿಮಾದ ರಿಲೀಸ್ಗೆ ರೆಡಿಯಾಗುತ್ತಿದ್ದಾರೆ. ಇದೇ ಕಾರಣಕ್ಕೆ, ನಟ ಹಲವಾರು ಸಂದರ್ಶನಗಳಲ್ಲಿ ಚಿತ್ರದ ಪ್ರಚಾರಕ್ಕೆಂದು ಭಾಗವಹಿಸುತ್ತಿದ್ದಾರೆ.