ರಾಮಾಯಣ ಚಿತ್ರದಲ್ಲಿ ಆ ಪಾತ್ರಕ್ಕೆ... ಬಾಲಿವುಡ್​ ಬೆಡಗಿ ತನಿಷಾ ಶಾಕಿಂಗ್ ಹೇಳಿಕೆ ವೈರಲ್​ | Ramayana

 Ramayana
ರಾಮಾಯಣ ಚಿತ್ರತಂಡ ಮಾಡಿದ ಬಿಗ್ ಮಿಸ್ಟೇಕ್​ ಇದು! ಬಾಲಿವುಡ್​ ಬೆಡಗಿಯ ಶಾಕಿಂಗ್ ಹೇಳಿಕೆ ವೈರಲ್​ | Ramayana
Published on: 

Ramayana: ನಿತೇಶ್ ತಿವಾರಿ ನಿರ್ದೇಶನದ ಹಾಗೂ ರಣಬೀರ್ ಕಪೂರ್​, ಯಶ್​, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ಅಭಿನಯದ ರಾಮಾಯಣ ಭಾಗ 2ರ ಚಿತ್ರವು ಇದೀಗ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸುವುದರ ಜತೆಗೆ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಈಗಾಗಲೇ 1,750 ಕೋಟಿ ರೂ. ಗಳಿಕೆಯನ್ನೂ ದಾಟಿ ಹೋಗಿರುವ ಸಿನಿಮಾ, ಕೇವಲ ಬಾಲಿವುಡ್​ನಲ್ಲಿ ಮಾತ್ರವಲ್ಲದೇ, ಭಾರತೀಯ ಚಿತ್ರೋದ್ಯಮದಲ್ಲಿ ಹಲವಾರು ದಾಖಲೆಗಳನ್ನು ಉಡೀಸ್​ ಮಾಡಿದೆ. ಹೀಗಿರುವಾಗಲೇ, ನಟಿ ತನಿಷಾ ಮುಖರ್ಜಿ ನೀಡಿರುವ ಹೇಳಿಕೆಯೊಂದು ಸದ್ಯ ಟೀಕೆಗೆ ಗುರಿಯಾಗಿದೆ.

ರಾಮಾಯಣದ ಚಿತ್ರದಲ್ಲಿ ತೋರಿಸಿರುವ ಭವ್ಯವಾದ ದೃಶ್ಯಗಳು ಮತ್ತು ಅದರ ಪಾತ್ರವರ್ಗಕ್ಕೆ ವ್ಯಾಪಕ ಪ್ರಶಂಸೆ, ಟೀಕೆಗಳು ಹರಿದುಬಂದಿವೆ. ಇದರೊಟ್ಟಿಗೆ ಜಾಲತಾಣಗಳಲ್ಲಿ ನೆಟ್ಟಿಗರು ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಯಶ್​ ನಟನೆಯನ್ನು ಮೆಚ್ಚಿ ಕೊಂಡಾಡಿದರೆ, ಇನ್ನೂ ಕೆಲವರು ರಾಮನ ಪಾತ್ರವನ್ನು ಕಡೆಗಣಿಸಿ, ರಾವಣನನ್ನೇ ಹೈಲೈಟ್​ ಮಾಡಿ ತೋರಿಸಿದ್ದಾರೆ ಎಂದು ಚಿತ್ರತಂಡದ ವಿರುದ್ಧ ಗುಡುಗಿದ್ದಾರೆ. ಇದನ್ನೂ ಮೀರಿ, ಅನೇಕರು ಸೀತಾ ಪಾತ್ರಕ್ಕೆ ಸಾಯಿ ಪಲ್ಲವಿಗಿಂತ ಬೇರೆಯವರನ್ನು ಹಾಕಿಕೊಂಡಿದ್ದರೇ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ಇದನ್ನೇ ಈಗ ಹಿಂದಿ ನಟಿ ತನಿಷಾ ಕೂಡ ಒತ್ತಿ ಹೇಳಿದ್ದಾರೆ.

ರಾಮಾಯಣದಲ್ಲಿ ಭಗವಾನ್ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ. ರಣಬೀರ್‌ನನ್ನು ರಾಮನ ಪಾತ್ರದಲ್ಲಿ ಒಪ್ಪಿಕೊಳ್ಳಬಹುದೇ ಎಂಬುದು ನನಗೆ ಆರಂಭದಲ್ಲಿ ಅನುಮಾನವಿತ್ತು. ಇದಕ್ಕೆ ಕಾರಣ, ಅನಿಮಲ್‌ ಚಿತ್ರದಲ್ಲಿನ ಅವರ ನಟನೆ. ಆದರೆ, ನಂತರದಲ್ಲಿ ನೋಡಿದಾಗ ರಣಬೀರ್​ ಈ ಪಾತ್ರಕ್ಕೆ ಸಂಪೂರ್ಣವಾಗಿ ಸೂಕ್ತವೆನಿಸಿತು. ಚಿತ್ರದ ದೃಶ್ಯಗಳು, ಕಥಾಹಂದರ ಮತ್ತು ಪಾತ್ರದಾರಿಗಳು ಓಕೆ. ಆದರೆ, ಸೀತಾ ಮಾತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಒಪ್ಪುವುದಿಲ್ಲ ಎಂದಿದ್ದಾರೆ.

Also Read
ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಸಾವು ಗೆದ್ದು ವಿಧಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ ಈಕೆ | Violet Jessop
 Ramayana

ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಅನಿಸಿಲ್ಲ. ಪಲ್ಲವಿ ಓರ್ವ ಪ್ರತಿಭಾವಂತ ನಟಿಯಾಗಿದ್ದರೂ ಸೀತಾ ಪಾತ್ರಕ್ಕೆ ಸರಿಹೊಂದಿಲ್ಲ. ಸಾಯಿ ಪಲ್ಲವಿಯನ್ನು ತೆರೆಯ ಮೇಲೆ ನೋಡಿದಾಗ ನನಗೆ ಸಿನಿಮಾದ ಕನೆಕ್ಷನ್​ ಎಲ್ಲೋ ಮಿಸ್​ ಆಯಿತು ಎಂಬ ಭಾವನೆ ಬಂದಿತು ಎಂದು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್​ ಬೆಡಗಿಯ ಹೇಳಿಕೆಗೆ ಕೆಲವರು ಹೌದು ಎಂದರೆ, ಇನ್ನೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ, ಸೀತಾ ದೇವಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಅರುಣ್ ಗೋವಿಲ್, ಲಾರಾ ದತ್ತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).