

ಬೆಂಗಳೂರು: 'ಗೋಲ್ಡನ್ ಸ್ಟಾರ್' ಗಣೇಶ್ಗೆ ಮಾರ್ಷಲ್ ಆರ್ಟ್ಸ್ನಲ್ಲಿ ವಿಶೇಷ ಆಸಕ್ತಿ. ಮುವಾಯ್ ಥಾಯ್ ಎಂಬ ಕಲೆಗೆ ಅವರು ಭಾರತದಲ್ಲಿ ರಾಯಭಾರಿ ಆಗಿದ್ದು ನೆನಪಿರಬಹುದು. ಈಗ ಅವರ ಮಗ ವಿಹಾನ್ ಸಹ ಅದೇ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾನೆ.
ಇತ್ತೀಚೆಗೆ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಜ್ಯೂನಿಯರ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಹಾನ್ ವಿನ್ನರ್ ಆಗಿದ್ದಾನೆ. ಈ ವಿಷಯವನ್ನು ಸ್ವತಃ ಗಣೇಶ್ ಹೆಮ್ಮೆಯಿಂದ ಬಹಿರಂಗಪಡಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿರುವ ಗಣೇಶ್, 'ಮೊದಲ ಜ್ಯೂನಿಯರ್ ಕರಾಟೆ ಚಾಂಪಿಯನ್ಶಿಪ್ ಗೆದ್ದ ಮಗನಿಗೆ ಅಭಿನಂದನೆಗಳು' ಎಂದು ವಿಶ್ ಮಾಡಿದ್ದಾರೆ.
ಪ್ರೀತಂ ಗುಬ್ಬಿ ನಿರ್ದೇಶನದ 'ಬಾನದಾರಿಯಲ್ಲಿ' ಚಿತ್ರದಲ್ಲಿ ಗಣೇಶ್ ಅಭಿನಯಿಸಿದ್ದು, ಈ ಚಿತ್ರ ಮಾರ್ಚ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.