

ಬೆಂಗಳೂರು: ‘ನೀಲಕಂಠ’ನ ‘ಹೂ’ ಹುಡುಗಿ ತನ್ನನ್ನು ಛೇಡಿಸಿದವನ ಪಾಲಿಗೆ ‘ಬೆಂಕಿ ಬಿರುಗಾಳಿ’ ಆಗಿದ್ದರಿಂದ ಆತ ಸದ್ಯ ತನ್ನ ಇನ್ಸ್ಟಾಗ್ರಾಮ್ ನಿಂದಲೇ ಕಾಣೆಯಾಗಿದ್ದಾನೆ.
ನಿಜ, ರವಿಚಂದ್ರನ್ ಅವರ ‘ನೀಲಕಂಠ’ ಸಿನಿಮಾಗೆ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿ, ಅವರ ‘ಹೂ’ ಚಿತ್ರಕ್ಕೂ ನಾಯಕಿ ಆಗಿದ್ದ ನಟಿ ನಮಿತಾ ಅವರದ್ದೇ ವಿಷಯವಿದು. ಸೋಷಿಯಲ್ ಮೀಡಿಯಾ ಮೂಲಕ ತನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಯುವಕನಿಗೆ ಕೇರೇ ಮಾಡದೆ, ಆತನ ಬ್ಲ್ಯಾಕ್ವೆುೕಲ್ ತಂತ್ರವನ್ನು ವಿಫಲಗೊಳಿಸಿದ್ದಾರೆ ನಮಿತಾ. ಮಾತ್ರವಲ್ಲ, ಅದರ ವಿವರ ಸಹಿತ ಆತನ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ಅವರು ಹಂಚಿಕೊಂಡ ಪರಿಣಾಮ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
‘ನೋಡಿ ಈತ ನನಗೆ ಖಾಸಗಿಯಾಗಿ ಸಂದೇಶ ರವಾನಿಸಿ ಅಸಭ್ಯವಾಗಿ ಮಾತನಾಡಿದ್ದಾನೆ. ನನ್ನ ಬಗ್ಗೆ ಅಶ್ಲೀಲವಾದ ವಿಡಿಯೋ ಇದೆ, ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅದಕ್ಕೆ ದಯವಿಟ್ಟು ಹಾಕು ಎಂದು ಹೇಳಿದ್ದೆ. ಇವನೇ ಆ ನೀಚ ಮನುಷ್ಯ ...’ ಎಂದು ಆತನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ನಮಿತಾ ಹಂಚಿಕೊಂಡಿದ್ದರು. ಅದಾದ ಕೆಲವೇ ಹೊತ್ತಲ್ಲಿ ಆತನ ಅಕೌಂಟ್ ಇನ್ಸ್ಟಾಗ್ರಾಮ್ ನಲ್ಲಿ ಲಭ್ಯವಿಲ್ಲದಂತಾಗಿದೆ.
‘ಮಹಿಳೆಗೆ ಗೌರವ ಕೊಡುವವನೇ ನಿಜವಾದ ಪುರುಷ. ನನ್ನ ಮೌನವನ್ನು ದೌರ್ಬಲ್ಯ ಎಂದು ತಿಳಿಯಬಾರದು. ನಿತ್ಯಜೀವನದಲ್ಲಿ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಬೇಕು’ ಎಂದು ನಮಿತಾ ಆ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಬಹುಭಾಷಾ ನಟಿಯಾಗಿರುವ ನಮಿತಾ 2013ರಲ್ಲಿ ತೆರೆಕಂಡ ‘ಬೆಂಕಿ ಬಿರುಗಾಳಿ’ ಸಿನಿಮಾ ಬಳಿಕ ಕನ್ನಡದಲ್ಲಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ತನ್ನನ್ನು ಬ್ಲಾಕ್ ವೆುೕಲ್ ಮಾಡಲೆತ್ನಿಸಿದವನ ಪಾಲಿಗೆ ಅವರು ‘ಬೆಂಕಿ ಬಿರುಗಾಳಿ’ಯಂತೆ ಗರಂ ಆಗಿದ್ದಾರೆ.