ಸಂಗೀತ ದಿಗ್ಗಜನ ಕುಟುಂಬಕ್ಕೆ ಮತ್ತೊಂದು ಆಘಾತ: ಚಿಕ್ಕಪ್ಪ ದೇವಾ ಅಗಲಿದ ಮೂರೇ ದಿನಗಳಲ್ಲಿ ನಟ ಕಾರ್ತಿಕ್ ಸಬೇಶ್ ನಿಧನ! | Karthik Sabesh

ಚೆನ್ನೈ: ಇದೇ ವಾರದಲ್ಲಿ ತಮಿಳು ಚಿತ್ರರಂಗದಿಂದ ಮತ್ತೊಂದು ದುಃಖಕರ ಸುದ್ದಿ ಹೊರಬಿದ್ದಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಾರ್ತಿಕ್ ಸಬೇಶ್ (37) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರ ಚಿಕ್ಕಪ್ಪ, ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನರಾದ ಕೇವಲ ಮೂರೇ ದಿನಗಳಲ್ಲಿ ಕಾರ್ತಿಕ್ ಕೂಡ ಇಹಲೋಕ ತ್ಯಜಿಸಿರುವುದು ಇಡೀ ಚಲನಚಿತ್ರ ರಂಗವನ್ನು ದಿಗ್ಭ್ರಮೆಗೊಳಿಸಿದೆ.
ಸಂಗೀತ ದಿಗ್ಗಜನ ಕುಟುಂಬಕ್ಕೆ ಮತ್ತೊಂದು ಆಘಾತ: ಚಿಕ್ಕಪ್ಪ ದೇವಾ ಅಗಲಿದ ಮೂರೇ ದಿನಗಳಲ್ಲಿ ನಟ ಕಾರ್ತಿಕ್ ಸಬೇಶ್ ನಿಧನ! | Karthik Sabesh
Published on: 

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ತಿಕ್ ಸಬೇಶ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ತಡರಾತ್ರಿ ಸುಮಾರು 11:15 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಾರ್ತಿಕ್ ಅವರ ಕಾಯಿಲೆಯ ಬಗ್ಗೆ ನಿಖರ ವಿವರಗಳು ಇನ್ನು ಬಹಿರಂಗವಾಗಿಲ್ಲ.

ಇದನ್ನೂ ಓದಿ:ದಶಕಗಳ ಹೋರಾಟ ಅಂತ್ಯ: ಎನ್‌ಡಿಎ ಪಾಳಯ ಸೇರಿದ ಬೆನ್ನಲ್ಲೇ ಯೂಸುಫ್ ಪಠಾಣ್‌ಗೆ ಗುಜರಾತ್ ಸರ್ಕಾರದಿಂದ ದೊಡ್ಡ ಉಡುಗೊರೆ! | Yusuf Pathan

ನಟ ಕಾರ್ತಿಕ್ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದರು. ಚೆನ್ನೈನ ವಲಸರವಾಕ್ಕಮ್‌ನಲ್ಲಿರುವ ಸ್ಮಶಾನದಲ್ಲಿ ಮಂಗಳವಾರ ಸಂಜೆ ಅಂತ್ಯಸಂಸ್ಕಾರವನ್ನು ನಡೆಯುವ ಸಾಧ್ಯತೆ ಇದೆ.

ತಮಿಳು ಚಿತ್ರರಂಗಕ್ಕೆ ಕಾರ್ತಿಕ್ ಸಬೇಶ್ ಕುಟುಂಬದ ಕೊಡುಗೆ ಸಾಕಷ್ಟಿದ್ದು, ಇವರ ತಂದೆ ಸಬೇಶ್ ಪ್ರಸಿದ್ಧ ಸಂಗೀತ ಸಂಯೋಜಕರು ಮತ್ತು ಇವರ ಚಿಕ್ಕಪ್ಪ ದೇವಾ ತಮಿಳು ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕರು. ಕಾರ್ತಿಕ್ ತಮಿಳಿನ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದರು. ಪ್ರಮುಖವಾಗಿ ಡಮ್ (Dum), ವಲ್ಲವನ್ (Vallavan), ಪಟ್ಟತ್ತು ಯಾನೈ (Pattathu Yaanai) ಹಾಗೂ ಕುಳಿರ್ 100 (Kulir 100) ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.

Also Read
ಕನ್ನಡದ ಅಂಗಳದಲ್ಲೂ ಮಾರ್ದನಿಸಿದ 'ತೆನಿಸೈ ತೆಂಡ್ರಲ್' ಗಾನಸುಧೆ: ವಿಷ್ಣುದಾದರ ಚಿತ್ರಗಳಿಗೆ ಜೀವತುಂಬಿದ್ರು ದೇವ್! | Deva
ಸಂಗೀತ ದಿಗ್ಗಜನ ಕುಟುಂಬಕ್ಕೆ ಮತ್ತೊಂದು ಆಘಾತ: ಚಿಕ್ಕಪ್ಪ ದೇವಾ ಅಗಲಿದ ಮೂರೇ ದಿನಗಳಲ್ಲಿ ನಟ ಕಾರ್ತಿಕ್ ಸಬೇಶ್ ನಿಧನ! | Karthik Sabesh

ಮೂರು ದಿನಗಳ ಅಂತರದಲ್ಲಿ ಎರಡು ಸಾವು

ಸಬೇಶ್ ಕುಟುಂಬಕ್ಕೆ ಇದು ಅತ್ಯಂತ ನೋವಿನ ಸಮಯವಾಗಿದ್ದು, ಕೇವಲ ಮೂರು ದಿನಗಳ ಹಿಂದೆ (ಶನಿವಾರ) ಕಾರ್ತಿಕ್ ಅವರ ಚಿಕ್ಕಪ್ಪ, ತೆನಿಸೈ ತೇಂದ್ರಲ್ ಎಂದೇ ಖ್ಯಾತರಾಗಿದ್ದ ದೇವಾ ನಿಧನರಾಗಿದ್ದರು. ಈಗ ಕಾರ್ತಿಕ್ ಅವರೂ ಅಗಲಿರುವುದು ಕುಟುಂಬಕ್ಕೆ ಹಾಗೂ ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದೆ.

ದೇವಾ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಷೆಗಳಲ್ಲಿ ಒಟ್ಟು 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ದಕ್ಷಿಣ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾಮಲೈ, ಅರುಣಾಚಲಂ ಮತ್ತು ಬಾಷಾ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದರು. ದೇವಾ ಅವರ ನಿಧನಕ್ಕೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಸೇರಿದಂತೆ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದರು. ಈಗ ಅದೇ ಕುಟುಂಬದಿಂದ ಮತ್ತೊಬ್ಬ ಯುವ ಪ್ರತಿಭೆ ಅಗಲಿರುವುದು ತಮಿಳು ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net