‘ಫಸ್ಟ್ ಡೇ ಫಸ್ಟ್ ಶೋ ಮಿಸ್ ಆಯ್ತು ಅದಿಕ್ಕೆ...‘ಜೈಲರ್ 2’ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಸಂಜು ಸ್ಯಾಮ್ಸನ್! Sanju Samson

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ವೀಕ್ಷಿಸಲು ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇಡೀ ಥಿಯೇಟರ್ ಅನ್ನೇ ಬುಕ್ ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 500 ಕೋಟಿ ಕ್ಲಬ್‌ಗೆ ಎಂಟ್ರಿ.
Sanju Samson booked an entire theatre to watch Rajinikanth's film 'Jailer 2'.
ರಜನಿಕಾಂತ್ ಅವರ ಜೈಲರ್ 2 ಚಿತ್ರ ವೀಕ್ಷಣೆಗೆ ಇಡೀ ಥಿಯೇಟರ್ ಬುಕ್ ಮಾಡಿದ ಸಂಜು ಸ್ಯಾಮ್ಸನ್
Published on: 

ಚೆನ್ನೈ: ಕೆಲ ದಿನಗಳ ಹಿಂದೆ ಬಿಡುಗಡೆ ಕಂಡಿರುವ ಸೂಪರ್​ ಸ್ಟಾರ್ ರಜನಿಕಾಂತ್​ ಅಭಿನಯದ ಜೈಲರ್​ 2 ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕೊಳ್ಳೆ ಹೊಡೆಯುತ್ತಿದ್ದು, ಮಾಹಿತಿ ಪ್ರಕಾರ ಈ ಸಿನಿಮಾ ಈಗಾಗಲೇ 500 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗುತ್ತಿದೆ.

ಭಾರತ ಕ್ರಿಕೆಟ್​ ತಂಡದ ವೀಕೆಟ್​ ಕೀಪರ್​ ಬ್ಯಾಟರ್ ಸಂಜು ಸ್ಯಾಮ್ಸನ್, ಸೂಪರ್​ ಸ್ಟಾರ್​ ರಜನಿ ಅವರ ದೊಡ್ಡ ಅಭಿಮಾನಿ ಎಂಬ ಸಂಗತಿ ಎಲ್ಲರಿಗೆ ತಿಳಿದೇ ಇದೆ. ಅನೇಕ ವೇದಿಕೆಗಳಲ್ಲಿ ಸಂಜು ಈ ಬಗ್ಗೆ ಮಾತನಾಡಿದ್ದು, ನಾನು ಚಿಕ್ಕ ವಯಸ್ಸಿನಿಂದ ರಜನಿ ಸರ್​ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ನನಗೆ ಅವರ ಸಿನಿಮಾಗಳನ್ನು ನೋಡುವುದು ಬಹಳ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಇಡೀ ಥಿಯೇಟರ್​ ಬುಕ್​ ಮಾಡಿದ ಸಂಜು!

ಆದರೆ, ಈ ಬಾರಿ ಸಂಜು ಸ್ಯಾಮ್ಸನ್, ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಜೈಲರ್​ 2 ಸಿನಿಮಾವನ್ನು ವೀಕ್ಷಿಸಲು ಈಡೀ ಥಿಯೇಟರ್​​ಅನ್ನೇ ಬುಕ್​ ಮಾಡಿದ್ದಾರೆ. ಹಾಗೆಯೇ ಈ ಸಿನಿಮಾ ನೋಡಲು ತಮ್ಮ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬ ವರ್ಗದವರೊಂದಿಗೆ ಥಿಯೇಟರ್​ಗೆ ತೆರಳಲಿದ್ದು, ತಮಿಳು ಭಾಷೆ ಅರ್ಥವಾಗುವ ತಮ್ಮ ಕ್ರಿಕೆಟ್​ ಸಹಪಾಠಿಗಳಿಗೆ ಸಹ ಆಮಂತ್ರಣ ನೀಡಿದ್ದಾರೆಂದು ತಿಳಿದುಬಂದಿದೆ.

ನಾನು ರಜನಿ ಸರ್​ ಅವರ ಸಿನಿಮಾಗಳನ್ನು ಆದಷ್ಟು ಮೊದಲ ದಿನ ಮೊದಲ ಶೋ ವೀಕ್ಷಿಸುತ್ತೇನೆ. ಆದರೆ ಈ ಬಾರಿ ಜೈಲರ್​ 2 ಬಿಡುಗಡೆಯಾದ ದಿನ ನನಗೆ ದೆಹಲಿಯಲ್ಲಿ ಕಾರ್ಯಕ್ರಮವೊಂದಿತ್ತು. ಹೀಗಾಗಿ ಫಸ್ಟ್​ ಡೇ ಫಸ್ಟ್​ ಶೋ ಮಿಸ್ ಆಗಿತ್ತು. ಹೀಗಾಗಿ ಇಡೀ ಥಿಯೇಟರ್​​ಅನ್ನೇ ಬುಕ್​ ಮಾಡಿದ್ದೇನೆ. ಕುಟುಂಬ ಹಾಗೂ ಸಹಪಾಠಿಗಳ ಜೊತೆ ರಜನಿ ಸರ್​ ಅನ್ನು ನೋಡಲು ಕಾತರನಾಗಿದ್ದೇನೆಂದು ಸಂಜು ತಿಳಿಸಿದ್ದಾರೆ.

Also Read
‘ಹಠ ಬಿಡು, ಬಿಷ್ಣೋಯ್ ಸಮುದಾಯದ ಕ್ಷಮೆ ಕೇಳು!’ ಸಲ್ಮಾನ್ ಖಾನ್‌ಗೆ ಹಿರಿಯ ಗಾಯಕ ಅನೂಪ್ ಜಲೋಟಾ ಕಿವಿಮಾತು! Anoop Jalota
Sanju Samson booked an entire theatre to watch Rajinikanth's film 'Jailer 2'.

ಜೈಲರ್​ 2 ಅಬ್ಬರ!

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿರುವ ಹಾಗೂ ಸೂಪರ್​ಸ್ಟಾರ್​ ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಜೈಲರ್​ 2 , ಸಿನಿಮಾ ಮಂದಿರಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. 2023 ರಲ್ಲಿ ತೆರೆಕಂಡಿದ್ದ ಜೈಲರ್​ ಸಿನಿಮಾದ ಮುಂದುವರಿದ ಭಾಗವೇ ಈ ಜೈಲರ್​ 2 ಸಿನಿಮಾವಾಗಿದೆ.

ಈ ಸಿನಿಮಾದಲ್ಲಿ ರಜನಿಕಾಂತ್​ ಜೊತೆಗೆ, ಕನ್ನಡದ ಡಾ. ಶಿವರಾಜ್​ಕುಮಾರ್​, ಮಳಿಯಾಳಂನ ಮೋಹನ್​ಲಾಲ್​, ಬಾಲಿವುಡ್​ನ ಹೃತಿಕ್​ ರೋಶನ್​, ಮಿಥುನ್​ ಚಕ್ರವರ್ತಿ ಹಾಗೂ ವಿಜಯ್​ ಸೇತುಪತಿ ಕೂಡ ಕಾಣಿಸಿಕೊಂಡಿದ್ದಾರೆ. ಅಂತಯೇ ವಿನಾಯಕನ್​, ರಮ್ಯಾ ಕೃಷ್ಣನ್​, ವಿದ್ಯಾಬಾಲನ್​ ಕೂಡ ಈ ಸಿನಿಮಾದಲ್ಲಿ ಪ್ರಮಯಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ಸಂಸ್ಥೆ ಸುಮಾರು 300-350 ಕೋಟಿ ಹೂಡಿಕೆ ಮಾಡಿ ನಿರ್ಮಿಸಿದೆ. ಬಿಡುಗಡೆಯಾದ ಐದನೇ ದಿನ (ಸೋಮವಾರ, ಅ.19) ಕ್ಕೆ ಈ ಸಿನಿಮಾ ಸುಮಾರು 477 ಕೋಟಿ ವಿಶ್ವದಾದ್ಯಂತ ಗಳಿಕೆ ಮಾಡಿದ್ದು, ಮಂಗಳವಾರ (ಅ.20) ಸಂಜೆಯೊಳಗೆ 500 ಕೋಟಿ ಗಡಿದಾಟಲಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net