‘ಹಠ ಬಿಡು, ಬಿಷ್ಣೋಯ್ ಸಮುದಾಯದ ಕ್ಷಮೆ ಕೇಳು!’ ಸಲ್ಮಾನ್ ಖಾನ್‌ಗೆ ಹಿರಿಯ ಗಾಯಕ ಅನೂಪ್ ಜಲೋಟಾ ಕಿವಿಮಾತು! Anoop Jalota

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ಗಾಯಕ ಅನೂಪ್ ಜಲೋಟಾ ಕಿವಿಮಾತು; ಹಠ ಬಿಟ್ಟು ಬಿಷ್ಣೋಯ್ ಸಮುದಾಯದ ಕ್ಷಮೆ ಕೇಳಿ ಜೀವ ಉಳಿಸಲು ಸಲಹೆ.
Singer Anup Jalota advises Salman Khan to apologize to the Bishnoi community.
ಸಲ್ಮಾನ್ ಖಾನ್‌ಗೆ ಬಿಷ್ಣೋಯ್ ಸಮುದಾಯದ ಕ್ಷಮೆ ಕೇಳುವಂತೆ ಸಲಹೆ ನೀಡಿದ ಗಾಯಕ ಅನೂಪ್ ಜಲೋಟಾ
Published on: 

ಮುಂಬೈ: ಬಾಲಿವುಡ್​ ನಟ, ಆಕ್ಷನ್​ ಹೀರೋ ಟೈಗರ್​​ ಶ್ರಾಫ್​ ಮೇಲೆ ನಡೆದಿರುವ ಗುಂಡಿನ ದಾಳಿ ಘಟನೆ ಈಗ ಇಡೀ ಬಾಲಿವುಡ್​ ಗಡಗಡ ನಡಗುವಂತೆ ಮಾಡಿದೆ. ನಟನ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ಕುಖ್ಯಾತ ಲಾರೆನ್ಸ್​​ ಬಿಷ್ಣೋಯ್​ ಗ್ಯಾಂಗ್​ ಹೊತ್ತಿಕೊಂಡಿದ್ದು, ನಟ ಸಲ್ಮಾನ್​ ಖಾನ್​ ಜತೆ ಸ್ನೇಹ ಬೆಳೆಸುವವರಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ಈಗ, ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಗಾಯಕ ಅನುಪ್​ ಜಲೋಟಾ, ನಟ ಸಲ್ಮಾನ್​ ಖಾನ್​ ಬಿಷ್ಣೋಯ್​ ಸಮುದಾಯಕ್ಕೆ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

ಸಲ್ಮಾನ್​ ಹಠ ಬೇಡ!

ಕೃಷ್ಣಮೃಗ ಇದು, ಬಿಷ್ಣೋಯ್​ ಸಮುದಾಯಕ್ಕೆ ಬಹಳ ಪ್ರೀತಿಯ ಅಷ್ಟೇ ಗೌರವಿಸುವ ಪ್ರಾಣಿಯಾಗಿದೆ. ಇದನ್ನು ಅವರು ಅವರ ಮಕ್ಕಳಂತೆ ಭಾವಿಸುತ್ತಾರೆ. ನಟ ಸಲ್ಮಾನ್​ ಖಾನ್​ ಈ ಪ್ರಾಣಿಯನ್ನು ಕೊಂದಿದ್ದಾರೆಂಬ ಆರೋಪವಿದೆ. ಅದು ನ್ಯಾಯಾಲಯದಲ್ಲಿದೆ.

ಆದರೆ, ಈ ಘಟನೆ ಬಿಷ್ಣೋಯ್​ ಸಮುದಾಯಕ್ಕೆ ನೋವುಂಟು ಮಾಡಿದ್ದು, ನಟ ಸಲ್ಮಾನ್ ಮೇಲೆ ಕೋಪಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ, ಸಲ್ಮಾನ್​ ಮಾತ್ರವಲ್ಲ, ಅವನ ಜೊತೆ ಕೆಲಸ ಮಾಡುವವರ ಮೇಲೆ ಸಹ ದಾಳಿ ನಡೆಯುತ್ತಿದೆ. ಹೀಗಾಗಿ ಸಲ್ಮಾನ್​ ಖಾನ್​ ಬಿಷ್ಣೋಯ್​ ಸಮುದಾಯದವರಲ್ಲಿ ಕ್ಷಮೆ ಕೇಳುವುದು ಸೂಕ್ತವೆಂದು ಅನುಪ್​ ಜಲೋಟಾ ಹೇಳಿದ್ದಾರೆ.

ನೋಡು, ಸಲ್ಮಾನ್​ ಹಠ ಬೇಡ, ನಿನ್ನ ತಪ್ಪಿರಲಿ, ಇಲ್ಲದಿರಲಿ ಕ್ಷಮೆ ಕೇಳುವುದರಲ್ಲಿ ಏನೂ ಹೋಗಲ್ಲ. ನ್ಯಾಯಿಕವಾಗಿ ನೀನು ಕೊಂದಿಲ್ಲ ಎಂದರೆ, ನ್ಯಾಯಾಲಯ ಅದನ್ನು ತೀರ್ಮಾನ ಮಾಡುತ್ತದೆ. ಆದರೆ ನಿನ್ನ ಒಂದು ಕ್ಷಮೆ ಸಿನಿಮಾ ರಂಗದಲ್ಲಿರುವ ಇತರರ ಜೀವ ಉಳಿಸುತ್ತದೆ ಎಂದರೆ ಕ್ಷಮೆ ಕೇಳಿಬಿಡು ಎಂದು ಹಿರಿಯ ಗಾಯಕ ನಟನಲ್ಲಿ ವಿನಂತಿಸಿಕೊಂಡಿದ್ದಾರೆ.

ನೀನು ಕ್ಷಮೆ ಕೇಳದೆ ಹೋದರೆ, ಈ ದ್ವೇಷ ಹೀಗೆ ಮುಂದುವರಿಯುತ್ತದೆ. ಕೇವಲ ನಿನ್ನ ಕುಟುಂಬ ಮಾತ್ರವಲ್ಲ, ಸಿನಿಮಾರಂಗದಲ್ಲಿರುವ ಇತರ ನಟ, ನಟಿ, ಕಲಾವಿದರ ಕುಟುಂಬ ಕೂಡ ಇದರ ನೋವನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದು ಕ್ಷಮೆ ಕೇಳಿಬಿಡು ಎಂದು ಅನುಪ್​ ಜಲೋಟಾ ತಿಳಿಸಿದ್ದಾರೆ.

Also Read
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: 34 ಸಾವಿರಕ್ಕೆ ಸುಪಾರಿ, ವಿದೇಶದಲ್ಲಿ ಕೆಲಸದ ಆಮಿಷ; ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ! Tiger Shroff
Singer Anup Jalota advises Salman Khan to apologize to the Bishnoi community.

ವಿದೇಶದಲ್ಲಿ ಕೆಲಸ ಕೊಡಿಸುವ ಭರವಸೆ!

ಭಾನುವಾರ, ಜುಹುವಿನಲ್ಲಿರುವ ಫುಟ್​​ಬಾಲ್​ ಕ್ಲಬ್​ನಲ್ಲಿ ಆಟ ಮುಗಿಸಿಕೊಂಡು ಬರುತ್ತಿದ್ದ ನಟ ಟೈಗರ್​ ಶ್ರಾಫ್​ ಕಾರಿನ ಮೇಲೆ ಇಬ್ಬರು ಯುವಕರು ಸುಮಾರು 5-7 ಸುತ್ತು ಗುಂಡನ್ನು ಹಾರಿಸಿ ಪರಾರಾಯಾಗಿದ್ದರು. ಈ ದಾಳಿಯಲ್ಲಿ ನಟನಿಗೆ ಹೆಚ್ಚೇನು ತೊಂದರೆಯಾಗದಿದ್ದರೂ, ಡ್ರೈವರ್​ ಮತ್ತು ಇನ್ನೊಬ್ಬ ವ್ಯಕ್ತಿಗೆ ಗಾಯವಾಗಿತ್ತು. ನಂತರ ನಟ ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಮೂವರನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಿ ಮುಂಬೈಗೆ ಕರೆತರಲಾಗಿತ್ತು.

ಕೋಟಾದಲ್ಲಿ ಸೆರೆಸಿಕ್ಕ ಮೂವರು ಆರೋಪಿಗಳನ್ನು ಮುಂಬೈ ಅಪರಾಧ ವಿಭಾಗದ ವಿಶೇಷ ತಂಡ ವಿಚಾರಣೆ ನಡೆಸುತ್ತಿದ್ದು, ಇವರಿಗೆ ಟೈಗರ್​ ಶ್ರಾಫ್​ ಮೇಲೆ ಗುಂಡನ್ನು ಹಾರಿಸಲು, ಅನಿಲ್​ ಪಂಡಿತ್​ ಎಂಬಾತ ಸುಪಾರಿ ನೀಡಿದ್ದನೆಂದು ತಿಳಿದು ಬಂದಿದೆ. ಈ ಅನಿಲ್​ ಪಂಡಿತ್​ ಬಿಷ್ಣೋಯ್​ ಗ್ಯಾಂಗ್​ನ ಸದಸ್ಯನಾಗಿದ್ದು, ಇವನು ಕ್ಯಾಲಿಫೋರ್ನಿಯಾದಿಂದ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾನೆಂಬ ಗುಮಾನಿಯಿದೆ.

ಮಾಹಿತಿ ಪ್ರಕಾರ, ಆರೋಪಿಗಳಿಗೆ 34 ಸಾವಿರ ರೂಪಾಯಿ ನೀಡಿ ಸುಪಾರಿ ನೀಡಲಾಗಿದ್ದು, ಕೆಲಸ ಸರಿಯಾಗಿ ಮುಗಿಸಿದರೆ, ವಿದೇಶದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದರೆಂದು ತಿಳಿದುಬಂದಿದೆ. ವಿದೇಶದಲ್ಲಿರುವ ಅನಿಲ್​ ಪಂಡಿತ್​ನೇ ಇವರಿಗೆ ಹಣ ಮತ್ತು ಪಿಸ್ತೂಲ್​ಅನ್ನು ತಲುಪಿಸಿದ್ದಾಗಿ, ಆರೋಪಿಗಳು ಹೇಳಿದ್ದು, ಜಂಗಿ ಎಂಬ ಆನ್​ಲೈನ್​ ಅಪ್ಲಿಕೇಶನ್​ ಮೂಲಕ ಅನಿಲ್​ ಪಂಡಿತ್​ ಜತೆ ವ್ಯವಹಾರ ನಡೆಸಿದ್ದು, ತಾವೆಂದು ಆತನನ್ನು ನೇರವಾಗಿ ಬೇಟಿಮಾಡಿಲ್ಲವೆಂದು ಹೇಳಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ, (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net