ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: 34 ಸಾವಿರಕ್ಕೆ ಸುಪಾರಿ, ವಿದೇಶದಲ್ಲಿ ಕೆಲಸದ ಆಮಿಷ; ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ! Tiger Shroff

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ಮೂವರು ಆರೋಪಿಗಳು ಕೋಟಾದಲ್ಲಿ ಅರೆಸ್ಟ್. ವಿದೇಶದಲ್ಲಿ ಉದ್ಯೋಗದ ಆಮಿಷ ಹಾಗೂ 34 ಸಾವಿರ ರೂ. ಸುಪಾರಿ ರಹಸ್ಯ ಬಯಲು.
Three accused arrested in Kota, Rajasthan, for opening fire at Tiger Shroff
ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಿ ರಾಜಸ್ಥಾನದ ಕೋಟಾದಲ್ಲಿ ಸೆರೆಸಿಕ್ಕ ಮೂವರು ಆರೋಪಿಗಳು
Published on: 

ಮುಂಬೈ: ಬಾಲಿವುಡ್​ ನಟ ಆಕ್ಷನ್​ ಹೀರೋ ಟೈಗರ್​ ಶ್ರಾಫ್​ ಮೇಲೆ ನಡೆದಿರುವ ಗುಂಡಿನ ದಾಳಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರಿಗೆ ಹೊಸ-ಹೊಸ ಮಾಹಿತಿಗಳು ಲಭ್ಯವಾಗುತ್ತಿದೆ.

ಭಾನುವಾರ, ಜುಹುವಿನಲ್ಲಿರುವ ಫುಟ್​​ಬಾಲ್​ ಕ್ಲಬ್​ನಲ್ಲಿ ಆಟ ಮುಗಿಸಿಕೊಂಡು ಬರುತ್ತಿದ್ದ ನಟ ಟೈಗರ್​ ಶ್ರಾಫ್​ ಕಾರಿನ ಮೇಲೆ ಇಬ್ಬರು ಯುವಕರು ಸುಮಾರು 5-7 ಸುತ್ತು ಗುಂಡನ್ನು ಹಾರಿಸಿ ಪರಾರಾಯಾಗಿದ್ದರು. ಈ ದಾಳಿಯಲ್ಲಿ ನಟನಿಗೆ ಹೆಚ್ಚೇನು ತೊಂದರೆಯಾಗದಿದ್ದರೂ, ಡ್ರೈವರ್​ ಮತ್ತು ಇನ್ನೊಬ್ಬ ವ್ಯಕ್ತಿಗೆ ಗಾಯವಾಗಿತ್ತು. ನಂತರ ನಟ ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಮೂವರನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಿ ಮುಂಬೈಗೆ ಕರೆತರಲಾಗಿತ್ತು.

ವಿದೇಶದಲ್ಲಿ ಕೆಲಸ ಕೊಡಿಸುವ ಭರವಸೆ!

ಕೋಟಾದಲ್ಲಿ ಸೆರೆಸಿಕ್ಕ ಮೂವರು ಆರೋಪಿಗಳನ್ನು ಮುಂಬೈ ಅಪರಾಧ ವಿಭಾಗದ ವಿಶೇಷ ತಂಡ ವಿಚಾರಣೆ ನಡೆಸುತ್ತಿದ್ದು, ಇವರಿಗೆ ಟೈಗರ್​ ಶ್ರಾಫ್​ ಮೇಲೆ ಗುಂಡನ್ನು ಹಾರಿಸಲು, ಅನಿಲ್​ ಪಂಡಿತ್​ ಎಂಬಾತ ಸುಪಾರಿ ನೀಡಿದ್ದನೆಂದು ತಿಳಿದು ಬಂದಿದೆ. ಈ ಅನಿಲ್​ ಪಂಡಿತ್​ ಬಿಷ್ಣೋಯ್​ ಗ್ಯಾಂಗ್​ನ ಸದಸ್ಯನಾಗಿದ್ದು, ಇವನು ಕ್ಯಾಲಿಫೋರ್ನಿಯಾದಿಂದ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾನೆಂಬ ಗುಮಾನಿಯಿದೆ.

ಮಾಹಿತಿ ಪ್ರಕಾರ, ಆರೋಪಿಗಳಿಗೆ 34 ಸಾವಿರ ರೂಪಾಯಿ ನೀಡಿ ಸುಪಾರಿ ನೀಡಲಾಗಿದ್ದು, ಕೆಲಸ ಸರಿಯಾಗಿ ಮುಗಿಸಿದರೆ, ವಿದೇಶದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದರೆಂದು ತಿಳಿದುಬಂದಿದೆ. ವಿದೇಶದಲ್ಲಿರುವ ಅನಿಲ್​ ಪಂಡಿತ್​ನೇ ಇವರಿಗೆ ಹಣ ಮತ್ತು ಪಿಸ್ತೂಲ್​ಅನ್ನು ತಲುಪಿಸಿದ್ದಾಗಿ, ಆರೋಪಿಗಳು ಹೇಳಿದ್ದು, ಜಂಗಿ ಎಂಬ ಆನ್​ಲೈನ್​ ಅಪ್ಲಿಕೇಶನ್​ ಮೂಲಕ ಅನಿಲ್​ ಪಂಡಿತ್​ ಜತೆ ವ್ಯವಹಾರ ನಡೆಸಿದ್ದು, ತಾವೆಂದು ಆತನನ್ನು ನೇರವಾಗಿ ಬೇಟಿಮಾಡಿಲ್ಲವೆಂದು ಹೇಳಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಟ್ಟೆ ಬದಲಿಸಿಕೊಂಡಿದ್ದ ಆರೋಪಿಗಳು!

ಜುಹುವಿನಲ್ಲಿ ಟೈಗರ್​ ಶ್ರಾಫ್​ ಮೇಲೆ ಗುಂಡನ್ನು ಹಾರಿಸಿ, ಇವರು ಅಂಧೇರಿಯಲ್ಲಿ ಬೈಕ್​ ಅನ್ನು ಬಿಟ್ಟು, ಗುರುತನ್ನು ಮರೆಮಾಚಲು ಬಟ್ಟೆ ಬದಲಿಸಿಕೊಂಡು, ಪುಣೆ-ಜೈಪುರ್​ ಟ್ರೇನ್​ಅನ್ನು ಏರಿದ್ದಾರೆ. ಈ ಸಮಯದಲ್ಲಿ ಸೂರತ್​ನಲ್ಲಿ ಅವರಿಗೆ ಟಾಕ್ಸಿವೊಂದನ್ನು ಅನಿಲ್​ ಪಂಡಿತ್​ ಮುಂಚಿತವಾಗಿ ಬುಕ್​ ಮಾಡಿದ್ದು ತಿಳಿದುಬಂದಿದೆ.

Also Read
ಶೂಟ್​ ಮಾಡಿದವರು ಅಪ್ರಾಪ್ತರಲ್ಲ! ಟೈಗರ್​ ಶ್ರಾಫ್​ ಕಾರಿನ ಮೇಲೆ ಫೈರಿಂಗ್​; ಆರೋಪಿಗಳನ್ನು ಬಂಧಿಸಿದ ರೋಚಕ ಕತೆ ಬಿಚ್ಚಿಟ್ಟ ಡಿಸಿಪಿ! Tiger Shroff Attack
Three accused arrested in Kota, Rajasthan, for opening fire at Tiger Shroff

ಇವರ ಯೋಜನೆ ಪ್ರಕಾರ, ಸೂರತ್​ನಲ್ಲಿ ಇಳಿದುಕೊಂಡು, ಅಲ್ಲಿಂದ ನೇಪಾಳಕ್ಕೆ ತಲುಪುವುದು ಇವರ ಪ್ಲ್ಯಾನ್​ ಆಗಿತ್ತು, ಆದರೆ, ಮುಂಬೈ ಪೊಲೀಸರು ರಾಜಸ್ಥಾನ ಹಾಗೂ ಗುಜರಾತ್​ ಪೊಲೀಸರ ಜತೆ ಸಮಸ್ವಯ ಸಾಧಿಸಿ, ಕೋಟಾ ನಿಲ್ದಾಣದಲ್ಲಿ ಈ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದರು. ಇವರ ಬಳಿ ಎರಡು ಜೊತೆ ಹೊಸ ಬಟ್ಟೆಗಳು ದೊರೆತಿದೆ. ಆದರೆ ಶೂಟ್​ ಮಾಡಲು ಬಳಸಿದ ಬಂದೂಕು ಇಲ್ಲಿವರೆಗೆ ಸಿಕ್ಕಿಲ್ಲ.

ಅವರು ಬಳಸಿರುವ ಪಿಸ್ತೂಲ್​ ಕೂಡ ನೇರವಾಗಿ ಯಾರೂ ಕೈಯಿಗೆ ನೀಡಿಲ್ಲ, ಬದಲಿಗೆ ಈ ಜಂಗಿ ಅಪ್ಲಿಕೇಶನ್​ ಮೂಲಕ, ಇಂಧೋರ್​ನಿಂದ ಈ ಪಿಸ್ತೂಲ್​ ಮುಂಬೈ ತಲುಪಿದ್ದು, ಕಸದ ಬುಟ್ಟಿಯಲ್ಲಿ ಇದನ್ನು ಇಟ್ಟಿದ್ದಾರೆ. ನಂತರ ಈ ಆರೋಪಿಗಳಿಗೆ, ಪಿಸ್ತೂಲ್​ಅನ್ನು ಎಲ್ಲಿಡಲಾಗಿದೆಂದು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.

ಆರೋಪಿಗಳು ಅಪ್ರಾಪ್ತರಲ್ಲ!

ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಿದಾಗ, ಮೂವರಲ್ಲಿ ಇಬ್ಬರು ಅಪ್ರಾಪ್ತರೆಂಬ ವದಂತಿ ಹರಿದಾಡಿತ್ತು. ಆದರೆ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿಪಿ ರಾಜ್ ತಿಲಕ್ ರೋಷನ್, ನಾವು ವಶಕ್ಕೆ ಪಡೆದಿರುವ ಮೂವರು ಆರೋಪಿಗಳಲ್ಲಿ ಇಬ್ಬರು ಹರಿಯಾಣ ಮೂಲದವರಾದರೆ, ಮತ್ತೊಬ್ಬ ಬಿಹಾರದವನು. ಈ ಪ್ರಕರಣದಲ್ಲಿ ಯಾವುದೇ ಅಪ್ರಾಪ್ತ ಆರೋಪಿಗಳಿಲ್ಲ. ಒಬ್ಬನಿಗೆ 18 ವರ್ಷ ವಯಸ್ಸಾಗಿದ್ದರೆ, ಉಳಿದ ಇಬ್ಬರಿಗೆ 22 ವರ್ಷ ವಯಸ್ಸು ಎಂದು ಸ್ಪಷ್ಟನೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net