ಸಚಿನ್ ಪುತ್ರಿ ಸಾರಾ ಮದುವೆ ಬಗ್ಗೆ ಹಬ್ಬಿದ್ದ ವದಂತಿಗೆ ತೆರೆ! ಅಸಲಿ ಸತ್ಯ ಇಲ್ಲಿದೆ | Sara tendulkar

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜ್‌ವೀರ್ ಡಿಯೋಲ್ ಅವರನ್ನು ಸಾರಾ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸಾರಾ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.Sara tendulkar
ಸಚಿನ್ ಪುತ್ರಿ ಸಾರಾ ಮದುವೆ ಬಗ್ಗೆ ಹಬ್ಬಿದ್ದ ವದಂತಿಗೆ ತೆರೆ
ಸಚಿನ್ ಪುತ್ರಿ ಸಾರಾ ಮದುವೆ ಬಗ್ಗೆ ಹಬ್ಬಿದ್ದ ವದಂತಿಗೆ ತೆರೆWEB
Published on: 

Sara Tendulkar : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜ್‌ವೀರ್ ಡಿಯೋಲ್ ಅವರನ್ನು ಸಾರಾ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸಾರಾ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿರುವ ಸಾರಾ ಅವರ ಆಪ್ತ ಮೂಲವೊಂದು, ಸಾರಾ ಮತ್ತು ರಾಜ್‌ವೀರ್ ಇದುವರೆಗೂ ಭೇಟಿಯೇ ಆಗಿಲ್ಲ ಎಂದು ಹೇಳಿದೆ. ಅಲ್ಲದೆ, ಸಾರಾ ಸದ್ಯ ಒಂಟಿಯಾಗಿದ್ದು, ತಮ್ಮ ವೃತ್ತಿಜೀವನದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇಂತಹ ಆಧಾರರಹಿತ ವದಂತಿಗಳು ಅನಗತ್ಯವಾಗಿ ತೊಂದರೆ ಉಂಟುಮಾಡುತ್ತಿವೆ ಎಂದು ತಿಳಿಸಿದೆ.

ವದಂತಿಗಳಿಗೆ ಪ್ರತಿಕ್ರಿಯೆ ನೀಡದಿರಲು ನಿರ್ಧಾರ?

ಸಾರಾ ತೆಂಡೂಲ್ಕರ್ ಈ ಮದುವೆ ವದಂತಿಗಳ ಬಗ್ಗೆ ಸ್ವತಃ ಯಾವುದೇ ಪ್ರತಿಕ್ರಿಯೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇಂತಹ ವಿಚಾರಗಳಲ್ಲಿ ಗೌರವಯುತವಾಗಿ ಮತ್ತು ಪ್ರಬುದ್ಧವಾಗಿ ನಡೆದುಕೊಳ್ಳುವುದನ್ನೇ ಅವರು ಇಷ್ಟಪಡುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಮದುವೆ ಬಗ್ಗೆ ಸಾರಾ ಹೇಳಿದ್ದೇನು?

ಸಹೋದರ ಅರ್ಜುನ್ ತೆಂಡೂಲ್ಕರ್ ಅವರ ಮದುವೆಯು ತಮಗೆ ಒಂದು ಉತ್ತಮ ಅನುಭವ ನೀಡಿದೆ ಎಂದು ಸಾರಾ ಈ ಹಿಂದೆ ಹೇಳಿಕೊಂಡಿದ್ದರು. ವೋಗ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಅರ್ಜುನ್ ಮದುವೆಯ ಸಿದ್ಧತೆಗಳು ನನ್ನ ಭವಿಷ್ಯದ ಮದುವೆಗೆ ಒಂದು ರೀತಿಯ ಪೂರ್ವಸಿದ್ಧತೆಯಂತಿತ್ತು. ನನ್ನ ಮದುವೆಯಲ್ಲಿ ಏನು ಬೇಕು, ಏನು ಬೇಡ ಎಂಬ ಸ್ಪಷ್ಟತೆ ಈಗ ನನಗೆ ಸಿಕ್ಕಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ : ಪತಿಗೆ ರೊಮ್ಯಾಂಟಿಕ್ ಬರ್ತ್‌ಡೇ ವಿಶ್ ಮಾಡಿದ ಶೋಭಿತಾ ಧೂಳಿಪಾಲ! 'ಹ್ಯಾಪಿ ಬರ್ತ್‌ಡೇ ಲವರ್' ಎಂದ ನಟಿ | Sobhita Dhulipala

ಮದುವೆ ಸಂಬಂಧಗಳ ಬಗ್ಗೆ ಸಾರಾ ಅಭಿಪ್ರಾಯವೇನು?

ಇಂದಿನ ಯುವಜನತೆ ಮದುವೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದಾದರೆ ಅದರಿಂದ ಹೊರಬರಲು ಕೂಡ ಹಿಂಜರಿಯುವುದಿಲ್ಲ ಎಂದು ಸಾರಾ ಅಭಿಪ್ರಾಯಪಟ್ಟಿದ್ದಾರೆ. ಮದುವೆಗೆ ನಿಶ್ಚಿತಾರ್ಥವಾದ ಬಳಿಕ ಸಂಗಾತಿ ಅಥವಾ ಅವರ ಕುಟುಂಬದ ನೈಜ ಸ್ವಭಾವ ತಿಳಿದುಬಂದಾಗ ಕೆಲವರು ಮದುವೆಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮದುವೆಗೂ ಮುನ್ನವೇ ಸರಿಯಿಲ್ಲದ ಸಂಬಂಧದಿಂದ ಹೊರಬರುವುದು ಉತ್ತಮ ನಿರ್ಧಾರ ಎಂದು ಅವರು ಹೇಳಿದ್ದಾರೆ.

ಹಿರಿಯ ತಲೆಮಾರಿನವರು ತಮ್ಮ ನಿರ್ಧಾರಗಳನ್ನು ವ್ಯಕ್ತಪಡಿಸಲು ಹೆಚ್ಚು ಹಿಂಜರಿಯುತ್ತಿದ್ದರು. ಆದರೆ ಇಂದಿನ ಯುವಜನತೆ ತಪ್ಪು ನಡೆಯುತ್ತಿರುವಾಗ ಅದನ್ನು ಪ್ರಶ್ನಿಸುವ ಧೈರ್ಯ ಮತ್ತು ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ಸಾರಾ ಅವರ ಅಭಿಪ್ರಾಯ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಅವರ ಹಿರಿಯ ಪುತ್ರಿಯಾಗಿರುವ ಸಾರಾ, ಮತ್ತೊಂದೆಡೆ ರಾಜ್‌ವೀರ್ ಡಿಯೋಲ್ ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ಪೂಜಾ ಡಿಯೋಲ್ ಅವರ ಪುತ್ರ. ಸದ್ಯ ಇವರಿಬ್ಬರ ಮದುವೆ ಕುರಿತ ವದಂತಿಗಳಿಗೆ ಸಾರಾ ಅವರ ಆಪ್ತ ಮೂಲಗಳು ಸ್ಪಷ್ಟನೆ ನೀಡಿವೆ.