ಪತಿಗೆ ರೊಮ್ಯಾಂಟಿಕ್ ಬರ್ತ್‌ಡೇ ವಿಶ್ ಮಾಡಿದ ಶೋಭಿತಾ ಧೂಳಿಪಾಲ! 'ಹ್ಯಾಪಿ ಬರ್ತ್‌ಡೇ ಲವರ್' ಎಂದ ನಟಿ | Sobhita Dhulipala

ಟಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಜೋಡಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಳ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರುವ ಪತಿ ನಾಗ ಚೈತನ್ಯ ಅವರಿಗೆ ಶೋಭಿತಾ ಅತ್ಯಂತ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. Sobhita Dhulipala
ಹ್ಯಾಪಿ ಬರ್ತ್‌ಡೇ ಲವರ್' ಎಂದ ನಟಿ
ಹ್ಯಾಪಿ ಬರ್ತ್‌ಡೇ ಲವರ್' ಎಂದ ನಟಿWEB
Published on: 

Sobhita Dhulipala: ಟಾಲಿವುಡ್‌ನ ಮೋಸ್ಟ್ ರೊಮ್ಯಾಂಟಿಕ್ ಜೋಡಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಳ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರುವ ಪತಿ ನಾಗ ಚೈತನ್ಯ ಅವರಿಗೆ ಶೋಭಿತಾ ಅತ್ಯಂತ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಉದ್ದುದ್ದ ಸಾಲುಗಳ ಬದಲು ಕೇವಲ ಮೂರೇ ಪದಗಳಲ್ಲಿ ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿರುವ ನಟಿ, "ಹ್ಯಾಪಿ ಬರ್ತ್‌ಡೇ ಲವರ್" ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಪತಿಯ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡ ನಟಿ

ನಾಗ ಚೈತನ್ಯ ಅವರ ಬರ್ತ್‌ಡೇ ಪ್ರಯುಕ್ತ ಶೋಭಿತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ಅಪರೂಪದ ಹಾಗೂ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಈ ಜೋಡಿ ಅತ್ಯಂತ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಬಾಂಧವ್ಯ ಎದ್ದು ಕಾಣುತ್ತಿದೆ. ಮತ್ತೊಂದು ಫೋಟೋದಲ್ಲಿ ನಾಗ ಚೈತನ್ಯ ಮ್ಯಾಜಿಕ್ ಮಿರರ್ (ಕನ್ನಡಿ) ಮುಂದೆ ನಿಂತು, ಅದರಲ್ಲಿ ಕಾಣಿಸುವ ತಮ್ಮದೇ ವಿಭಿನ್ನ ಪ್ರತಿಬಿಂಬಗಳನ್ನು ನೋಡಿ ಮಗುವಿನಂತೆ ಖುಷಿಪಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ಸುಂದರ ಚಿತ್ರಗಳಿಗೆ "ಹ್ಯಾಪಿ ಬರ್ತ್‌ಡೇ ಲವರ್" ಎಂಬ ಕ್ಯಾಪ್ಶನ್ ಜೊತೆಗೆ ಹೃದಯದ ಇಮೋಜಿಯನ್ನು ಶೋಭಿತಾ ಸೇರಿಸಿದ್ದಾರೆ. ನಟಿಯ ಈ ರೊಮ್ಯಾಂಟಿಕ್ ವಿಶ್ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

ಅನ್ನಪೂರ್ಣ ಸ್ಟುಡಿಯೋದಲ್ಲಿ ಸಪ್ತಪದಿ ತುಳಿದಿದ್ದ ಜೋಡಿ

ಪ್ರೀತಿಯಲ್ಲಿದ್ದ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಳ 2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದ್‌ನ ಪ್ರತಿಷ್ಠಿತ ಅನ್ನಪೂರ್ಣ ಸ್ಟುಡಿಯೋದಲ್ಲಿ ಅಪ್ಪಟ ತೆಲುಗು ಸಂಪ್ರದಾಯದಂತೆ, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು.

ಇದನ್ನೂ ಓದಿ : ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್ ಬೆಸ್ಟ್ ಚಾಯ್ಸ್ ಎಂದ ರಾಮಾಯಣ ನಿರ್ಮಾಪಕ ! ಕಾರಣ ಏನು ಗೊತ್ತಾ? Ramayana

ಮದುವೆಯಾದ ಬೆನ್ನಲ್ಲೇ 150 ದಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಶೋಭಿತಾ!

ವೈವಾಹಿಕ ಜೀವನ ಮತ್ತು ಸಿನಿಮಾ ಕೆರಿಯರ್ ಅನ್ನು ಸಮತೋಲನದಿಂದ ನಿಭಾಯಿಸುವ ಬಗ್ಗೆ ಶೋಭಿತಾ ಈ ಹಿಂದೆ 'ವೋಗ್ ಇಂಡಿಯಾ' ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಮದುವೆಯಾದ ಕೆಲವೇ ವಾರಗಳಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ತಮಿಳುನಾಡಿಗೆ ತೆರಳಿದ್ದ ಶೋಭಿತಾ, ಬರೋಬ್ಬರಿ 150 ದಿನಗಳಿಗೂ ಹೆಚ್ಚು ಕಾಲ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಂತೆ.

ವೃತ್ತಿಜೀವನದ ಒತ್ತಡಗಳ ನಡುವೆಯೂ ಪರಸ್ಪರ ಸಮಯ ನೀಡುತ್ತಾ, ಪ್ರೀತಿಯಿಂದ ಬದುಕು ಸಾಗಿಸುತ್ತಿರುವ ಈ ತಾರಾ ಜೋಡಿ ಈಗ ನಾಗ ಚೈತನ್ಯ ಅವರ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ಶೋಭಿತಾ ಹಂಚಿಕೊಂಡಿರುವ ಈ ಪ್ರೀತಿಯ ಫೋಟೋಗಳಿಗೆ ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.