ಬಾಹುಬಲಿ ದಾಖಲೆ ಉಡೀಸ್: 1,790 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ರಾಮಾಯಣ’! Ramayana Part 1

The film 'Ramayana Part 1' has surpassed the record of 'Baahubali 2' by grossing ₹1,790 crore worldwide within 23 days of its release.
'ರಾಮಾಯಣ ಪಾರ್ಟ್ 1' ಚಿತ್ರವು ಬಿಡುಗಡೆಯಾದ 23 ದಿನಗಳಲ್ಲಿ ವಿಶ್ವದಾದ್ಯಂತ 1,790 ಕೋಟಿ ರೂ. ಗಳಿಸುವ ಮೂಲಕ 'ಬಾಹುಬಲಿ 2' ದಾಖಲೆಯನ್ನು ಹಿಂದಿಕ್ಕಿದೆ.
Published on: 

ಮುಂಬೈ: ನಮಿತ್​ ಮಲ್ಹೋತ್ರ ನಿರ್ಮಾಣದ, ನಿತೇಶ್​ ತಿವಾರಿ ನಿರ್ದೇಶನದ ಬಹುನೀರಿಕ್ಷಿತ ಹಾಗೂ ಅತ್ಯಂತ ದುಬಾರಿ ಹೂಡಿಕೆಯ ಸಿನಿಮಾ ರಾಮಾಯಣ ಪಾರ್ಟ್​ 1 ಬಾಕ್ಸ್​ ಆಫೀಸ್​ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ.

ಸಿನಿಮಾ ಬಿಡುಡೆಯಾಗಿ 23 ದಿನ ಪೂರ್ಣಗೊಳಿಸಿದರೂ, ಈ ಚಿತ್ರವನ್ನು ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ಈ ಸಿನಿಮಾ ಭಾರತೀಯ ಮಾರಿಕಟ್ಟೆಯಲ್ಲಿ ನಿವ್ವಳ 1,000 ಕೋಟಿ ಕಲೆಕ್ಷನ್​ ಮಾಡಿದ್ದು, ವಿಶ್ವದಾದ್ಯಂತ ಸುಮಾರು 1,790 ಕೋಟಿ ಗಳಿಕೆ ಮಾಡುವ ಮೂಲಕ ನೂತನ ದಾಖಲೆಯೊಂದನ್ನು ಬರೆದಿದೆ.

ಬಾಹುಬಾಲಿ ಹಿಂದಿಕ್ಕಿದ ರಾಮಾಯಣ!

ರಾಮಯಾಣದ ಇಷ್ಟು ಗಳಿಕೆ ಮಾಡುವ ಮೊದಲು, ಎಸ್​.ಎಸ್​. ರಾಜಮೌಳಿ ನಿರ್ದೇಶನದ ಹಾಗೂ ಪ್ರಭಾಸ್​ ನಟನೆಯ ಬ್ಲಾಕ್​ಬಾಸ್ಟರ್​​ ಸಿನಿಮಾ ಬಾಹುಬಲಿ 2, ವಿಶ್ವದಾದ್ಯಂತ 1,788 ಕೋಟಿ ಗಳಿಸಿ, ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೀಗ 1,790 ಕೋಟಿ ಕಲೆಕ್ಷನ್​ ಮೂಲಕ ರಾಮಾಯಣ ಸಿನಿಮಾ ಬಾಹುಬಲಿ ದಾಖಲೆಯನ್ನು ಪುಡಿಗಟ್ಟಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಮೊದಲ ಸ್ಥಾನದಲ್ಲಿದೆ ದಂಗಲ್​!

ರಾಮಾಯಣ ಸಿನಿಮಾ ಮೂರನೇ ಸ್ಥಾನದಲ್ಲಿದ್ದರೆ, ಆದಿತ್ಯ ಧರ್​ ನಿರ್ದೇಶನದ ಹಾಗೂ ರಣವೀರ್​ ಸಿಂಗ್​ ನಟನೆಯ ಧುರಂಧರ್​ 2 ಸಿನಿಮಾ 1,850 ಕೋಟಿ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೇ ರಾಮಾಯಣ ಸಿನಿಮಾದ ನಿರ್ದೇಶಕ ನಿತೇಶ್​​ ತಿವಾರಿ ನಿರ್ದೇಶನದ ಹಾಗೂ ಆಮೀರ್​ ಖಾನ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡು ಭರ್ತಿ 2,070 ಕೋಟಿ ಗಳಿಕೆ ಮಾಡಿರುವ ದಂಗಲ್​ ಸಿನಿಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Also Read
ಇದು ದಕ್ಷಿಣದ ರಾಜ್ಯಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ! ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಸ್ಟಾಲಿನ್ ಮೊದಲ ಪ್ರತಿಕ್ರಿಯೆ | MK Stalin
The film 'Ramayana Part 1' has surpassed the record of 'Baahubali 2' by grossing ₹1,790 crore worldwide within 23 days of its release.

ರಾಮಾಯಣ ಸಿನಿಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಇನ್ನೂ 150 ರಿಂದ 200 ಕೋಟಿ ಗಳಿಕೆ ಮಾಡಬೇಕಿದೆ. ಆದರೆ, ಈ ಸಿನಿಮಾ ದಿನಾಲೂ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ಈ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ ಭಾರತದಿಂದ ನಿರ್ಮಾಣವಾಗಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ರಾಮಾಯಣವಾಗಲಿ ಎನ್ನುವುದು ಅಭಿಮಾನಿಗಳ ಅಭಿಲಾಶೆಯಾಗಿದೆ, (ಏಜೆನ್ಸೀಸ್​).