2 ಕೋಟಿ ಬಂಡವಾಳ, 300+ ಕೋಟಿ ಕಲೆಕ್ಷನ್; ‘ಟಾಕ್ಸಿಕ್’ಗೆ ಠಕ್ಕರ್ ಕೊಡಲು ಸಾಧ್ಯವಿರಲಿಲ್ಲ ಎಂದ ‘ಹನುಮಾನ್ ಅಂಶ್’ ನಿರ್ಮಾಪಕಿ! Hanuman Ansh

ಟಾಕ್ಸಿಕ್​ ಮತ್ತು ಹನುಮಾನ್​ ಅಂಶ್​ ಸಿನಿಮಾ
ಟಾಕ್ಸಿಕ್​ ಮತ್ತು ಹನುಮಾನ್​ ಅಂಶ್​ ಸಿನಿಮಾ
Published on
ಮುಂಬೈ: ಕೇವಲ 2 ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿ 300 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದ ಸಿನಿಮಾ ಎಂದರೆ ಅದು ಇತ್ತೀಚೆಗೆ ತೆರೆಕಂಡ ಹನುಮಾನ್ ಅಂಶ್​ (Hanuman Ansh) ಸಿನಿಮಾವಾಗಿದೆ. ಆಧ್ಯಾತ್ಮಿಕ ಗುರು, ನೀಮ್​ ಕರೋಲಿ ಬಾಬಾ ಅವರ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ ಈ ಸಿನಿಮಾ 2026 ರಲ್ಲಿ ಅತ್ಯಂತ ಕಡಿಮೆ ಹೂಡಿಕೆ ಮಾಡಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾ ಈಗ ಭರ್ಜರಿ ಯಶಸ್ಸನ್ನು ಕಂಡ ಹಿನ್ನಲೆ ಹನುಮಾನ್​ ಅಂಶ್​ ಭಾಗ 2 ನ್ನು ಸಿನಿಮಾ ತಂಡ ಘೋಷಿಸಿದ್ದು, ನಿರ್ಮಾಪಕಲ್ಲಿ ಒಬ್ಬರಾದ ರಾಗಿನಿ ಸೋನಾ ಸಿನಿಮಾದ ಕುರಿತಾದ ಕೆಲ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಟಾಕ್ಸಿಕ್​ ಅನ್ನು ಎದುರಿಸಲು ನಮ್ಮಿಂದ ಸಾಧ್ಯವಿರಲಿಲ್ಲ!

ಹನುಮಾನ್​ ಅಂಶ್​ ಸಿನಿಮಾ ಬಿಡುಗಡೆಯಾದ ಸಮಯಕ್ಕೆ ರಾಕಿಂಗ್ ಸ್ಟಾರ್​ ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಾಗೂ ಗೀತು ಮೋಹನ್​ದಾಸ್​ ನಿರ್ದೇಶದ ಬಹುನೀರಿಕ್ಷಿತ ಸಿನಿಮಾ ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನಪ್ಸ್​ ಸಿನಿಮಾ ಬಿಡುಗಡೆಯಾಗಿತ್ತು.
500-600 ಕೋಟಿ ಹೂಡಿಕೆಯ ಸಿನಿಮಾ ಅದು. ನಮ್ಮದು ಕೇವಲ 2 ಕೋಟಿಯಲ್ಲಿ ತೆರೆಕಂಡ ಸಿನಿಮಾ. ಹಾಗೆಯೇ ಅವರ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್​ ಸೇರಿದಂತೆ ದೈತ್ಯ ಕಲಾವಿದರ ಹಿಂಡೇ ಇತ್ತು. ಆದರೆ ನಮ್ಮ ಸಿನಿಮಾದಲ್ಲಿ ಯಾವುದೇ ಖ್ಯಾತನಾಮ ನಟರಿರಲಿಲ್ಲ.
ಅಂತಯೇ ಟಾಕ್ಸಿಕ್​ಗೆ ಠಕ್ಕರ್ ಕೊಡಲು ನಾವು ಸಿನಿಮಾವನ್ನು ನಿರ್ಮಿಸಲೇ ಇರಲಿಲ್ಲ. ಅವರ ವಿರುದ್ಧ ಕಲೆಕ್ಷನ್ ಅಲ್ಲಿ ನಾವು ಗೆಲ್ಲುವ ಮಾತೇ ಇರಲಿಲ್ಲ. ಆದರೆ ದೈವದ ಕೃಪೆ, ನೀಮ್​ ಕರೋಲಿ ಬಾಬಾ ಅವರ ಆರ್ಶೀವಾದದ ಫಲವಾಗಿ ನಮ್ಮ ಹೂಡಿಕೆಯ ನೂರಾರು ಪಟ್ಟು ನಾವು ಲಾಭ ಗಳಿಸುವಂತಾಯಿತೆಂದು ರಾಗಿಣಿ ಹೇಳಿದ್ದಾರೆ.

ನಮಗೆ ಥಿಯೇಟರ್​​ ಕೂಡ ಸಿಕ್ಕಿರಲಿಲ್ಲ!

ನಾನು ಮೊದಲೇ ಹೇಳಿದಂತೆ ಟಾಕ್ಸಿಕ್​ ಒಂದು ರಾಷ್ಟ್ರಮಟ್ಟದ ಸಿನಿಮಾ. ಆದರೆ ನಾವು ಅವರಿಗಿಂತ ಮೊದಲೇ ಸಿನಿಮಾವನ್ನು ಬಿಡುಗಡೆ ಮಾಡಿದ್ದೇವು. ಮೊದಲು ನಮಗೆ 350 ಥಿಯೇಟರ್​ಗಳನ್ನು ನೀಡಿದ್ದರು. ಆದರೆ ಟಾಕ್ಸಿಕ್​ ಬಿಡುಗಡೆಯಾದ ನಂತರ ನಮಗೆ ದೇಶದಲ್ಲಿ 40 ಥಿಯೇಟರ್ ಕೂಡ ಸಿಕ್ಕಿಲ್ಲ. ಆದರೆ ನಮ್ಮ ಸಿನಿಮಾದ ಕತೆ ಜನರನ್ನು ತಲುಪಿತು.
ನಿಧಾನವಾಗಿ ಜನರು ಸಿನಿಮಾ ನೋಡಲು ಬರಲಾರಂಭಿಸಿದರು. ಥಿಯೇಟರ್​ಗಳು ತುಂಬಲಾರಂಭಿಸಿದವು. ಹೆಚ್ಚಿನ ಥಿಯೇಟರ್​ಗಳಲ್ಲಿ ನಮ್ಮ ಸಿನಿಮಾ ಹೌಸ್​ಫುಲ್​ ಆಯಿತು. ಇದರೆಲ್ಲದರ ಫಲವಾಗಿ ನಮ್ಮ ಸಿನಿಮಾ ಈಗ ಅತ್ಯಂತ ಹೆಚ್ಚಿಗೆ ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ ಎಂದು ನಿರ್ಮಾಪಕಿ ಸಂತಸ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net