‘ರಸ್ತೆ ನಿರ್ಮಿಸದಿದ್ದರೆ ವೋಟ್ ಹಾಕುವುದಿಲ್ಲ’ ಎಂದ ಮತದಾರ; ಸಿಟ್ಟಿಗೆದ್ದ ಜ್ಯೋತಿರಾದಿತ್ಯ ಸಿಂಧಿಯಾ; ವಿಡಿಯೋ ವೈರಲ್! Jyotiraditya Scindia

ರಸ್ತೆ ನಿರ್ಮಾಣದ ಕುರಿತು ಮತದಾರರೊಬ್ಬರೊಂದಿಗಿನ ತೀವ್ರ ಚರ್ಚೆಯ ವೇಳೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿರುವುದು.
ರಸ್ತೆ ನಿರ್ಮಾಣದ ಕುರಿತು ಮತದಾರರೊಬ್ಬರೊಂದಿಗಿನ ತೀವ್ರ ಚರ್ಚೆಯ ವೇಳೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿರುವುದು.
Published on
ಗುಣಾ (ಮಧ್ಯಪ್ರದೇಶ): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಆಯ್ಕೆ ಮಾಡಿದ ಜನ ಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಮತದಾರನಿಗಿದೆ. ಅದೇ ರೀತಿ ಸಂಸದನೊಬ್ಬರನ್ನು ಮತದಾರರನೊಬ್ಬ ನೀವು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡದಿದ್ದರೆ ಮತವನ್ನು ನೀಡುವುದಿಲ್ಲ ಎಂದು ಹೇಳಿರುವ ಘಟನೆ ಮಧ್ಯಪ್ರದೇಶದ ಗುಣಾದಲ್ಲಿ ವರದಿಯಾಗಿದೆ.
ಗುಣಾ ಲೋಕಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ತಮ್ಮ ಕ್ಷೇತ್ರಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ, ಮತದಾರರು ಅವರ ಕಾರನ್ನು ಸುತ್ತುವರಿದು, ತಮ್ಮ ಅಹವಾಲನ್ನು ಸಂಸದರಲ್ಲಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಿಂಧಿಯಾ ಹಾಗೂ ಮತದಾರನೊಬ್ಬನಲ್ಲಿ ನಡೆದ ಚಿಕ್ಕ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಕಾರಿನಲ್ಲಿ ಕುಣಿತುಕೊಂಡಿದ್ದು, ಕ್ಷೇತ್ರದ ಮತದಾರರು ಅವರ ಕಾರಿನ ಸುತ್ತಲೂ ನಿಂತುಕೊಂಡು, ತಮ್ಮ ಅಹವಾಲನ್ನು ಸಲ್ಲಿಸುತ್ತಿದ್ದರು. ಈ ಸಮಯದಲ್ಲಿ ಜನರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನು, ನೀವು ಅಧಿಕಾರಕ್ಕೆ ಬಂದ ದಿನದಿಂದ ನಮ್ಮೂರಿನ ರಸ್ತೆ ದುರಸ್ಥಿಯನ್ನು ಮಾಡಿಲ್ಲ. ನೀವು ರಸ್ತೆ ಸರಿಪಡಿಸದೇ ಇದ್ದರೆ ನಾನು ನಿಮಗೆ ಮತವನ್ನು ನೀಡಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ.
ಈ ಮಾತನ್ನು ಕೇಳುತ್ತದೆ ಕೋಪಗೊಂಡ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ನೀನು ಹೀಗೆ ಮಾತನಾಡುವುದು ಸರಿಯಲ್ಲ. ನೀನು, ನಿನ್ನ ಸಮಸ್ಯೆ ಏನಿದೆ? ನಿನ್ನ ಅಹವಾಲನ್ನು ನನಗೆ ಸಲ್ಲಿಸಬೇಕು. ನಾನು ಅದನ್ನು ಸ್ವೀಕರಿಸಿ, ಅಭಿವೃದ್ಧಿ ಕಾರ್ಯವನ್ನು ಮಾಡಬೇಕು. ಅದನ್ನು ಬಿಟ್ಟು ಹೀಗೆ ಬ್ಲ್ಯಾಕ್​ಮೇಲ್​ ಎಲ್ಲಾ ಮಾಡಕೂಡದು ಎಂದು ಗದರಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಬಾಕ್ಸ್​​ ತುಂಬಿಸುವ ಕೆಲಸಕ್ಕೆ ಇಳಿದ್ದಿದ್ದಾರೆ. ನೀವು ಕೊಟ್ಟ ಮಾತಂತೆ ರಸ್ತೆಯನ್ನು ಮಾಡಿದ್ದರೆ, ಇಂದು ಆ ವ್ಯಕ್ತ ಏಕೆ ನಡುರಸ್ತೆಯಲ್ಲಿ ನಿನ್ನ ಮರ್ಯಾದೆ ಕಳೆಯುತ್ತಿದ್ದ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.
ಜನ ಪ್ರತಿನಿಧಿಗಳಿಗೆ ನೀವು ಏನೂ ಕೆಲಸ ಮಾಡುತ್ತಿಲ್ಲ, ಮೊದಲು ಅದನ್ನು ಮಾಡಿ ಮುಗಿಸಿ ಎಂದರೆ ಕೋಪ ಬರುತ್ತದೆ. ಅದೇ ಅಣ್ಣಂಗೆ ಜೈ ಎಂದರೆ ಭಾರಿ ಖುಷಿಯಾಗುತ್ತದೆ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಈ ರಾಜಕಾರಣಿಗಳು, ಮತದಾರರ ಕಾಲನ್ನು ತೊಳೆಯುತ್ತಾರೆ. ತೊಳೆದ ನೀರನ್ನು ಕುಡಿಯುತ್ತಾರೆ. ಆದರೆ ಒಮ್ಮೆ ಅಧಿಕಾರ ದೊರೆತ ಮೇಲೆ ಎಲ್ಲವನ್ನು ಮರೆತು ದೆಹಲಿಯಲ್ಲಿ ಸೆಟೆಲ್​ ಆಗುತ್ತಾರೆಂದು ಮತ್ತೊಬ್ಬರು ಮಾರ್ಮಿಕವಾಗಿ ನುಡಿದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net