More

    ಹೊರ ದೇಶ, ರಾಜ್ಯದಿಂದ ಬರುವವರ ಬಗ್ಗೆ ನಿಗಾ ಇರಲಿ

    ಚಳ್ಳಕೆರೆ: ಕರೊನಾ ವೈರಸ್ ಸೋಂಕಿತರಿಂದ ಹರಡುವ ಸಾಂಕ್ರಾಮಿಕ ರೋಗ. ಹೊರ ದೇಶ, ರಾಜ್ಯದಿಂದ ಗ್ರಾಮಗಳಿಗೆ ಬರುವ ಪ್ರಯಾಣಿಕರ ಬಗ್ಗೆ ನಿಗಾ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್. ಪ್ರೇಮಸುಧಾ ಸಲಹೆ ನೀಡಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮಂಗಳವಾರ ಮೇಲ್ವಿಚಾರಕರಿಗೆ ಕರೊನಾ ವೈರಸ್ ಜಾಗೃತಿ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಈಗಾಗಲೇ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಗಿದೆ. ಕರೊನಾ ವೈರಸ್ ಕಾಣಿಸಿಕೊಂಡಿರುವ ಗುಲ್ಬರ್ಗ, ಬೆಂಗಳೂರಿನಿಂದ ಗ್ರಾಮಗಳಿಗೆ ಬರುವವರ ಮಾಹಿತಿ ಸಂಗ್ರಹಿಸಬೇಕು. ಕರೊನಾ ಲಕ್ಷಣಗಳಾಗಿರುವ ಗಂಟಲು ನೋವು, ಸೀನು, ಕೆಮ್ಮು ಕಂಡುಬರುವ ವ್ಯಕ್ತಿಗಳನ್ನು ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಬೇಕು. ಸೋಂಕಿನ ಶಂಕೆ ಇದ್ದರೆ ಕೂಡಲೇ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

    ಆರೋಗ್ಯ ನಿರೀಕ್ಷಕ ಎ. ಗಂಗಾಧರ ಮಾತನಾಡಿ, ಆಂಧ್ರದಿಂದ ತಾಲೂಕಿನ ಓಬಳಾಪುರ, ಕಡೇವುಡೆ, ನಾಗಪ್ಪನಹಳ್ಳಿ ಗೇಟ್, ಪಿ. ಮಹಾದೇವಪುರ ಇತರ ಗ್ರಾಮಗಳಿಗೆ ಬರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಆಶಾಕಾರ್ಯಕರ್ತೆ ಜತೆಗೆ ಹಿರಿಯ ಮಹಿಳಾ ಆರೋಗ್ಯ ಸಿಬ್ಬಂದಿ ನಿಯೋಜಿಸಿ ಹೊರ ಪ್ರಯಾಣಿಕರ ಮಾಹಿತಿ ಮತ್ತು ಆರೋಗ್ಯದ ಲಕ್ಷಣ ದಾಖಲೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಸಿಡಿಪಿಒ ಮೋಹನ್‌ಕುಮಾರಿ, ಪ್ರಭಾರ ತಾಲೂಕು ಆರೋಗ್ಯ ನಿರೀಕ್ಷಕ ಎಸ್.ಬಿ. ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಕ ಎಂ. ಪ್ರಸನ್ನಕುಮಾರ್ ಮತ್ತಿತರರಿದ್ದರು.

    ವೈದ್ಯಾಧಿಕಾರಿ ನಿಯೋಜನೆ: ಕರೊನಾ ವೈರಸ್ ಹಿನ್ನೆಲೆ ಚಳ್ಳಕೆರೆ ತಾಲೂಕಿನ ಆಂಧ್ರ ಗಡಿಭಾಗದ 5 ಕಡೆ ಹೊರರಾಜ್ಯದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಗಾಗಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಐದು ತಂಡ ರಚಿಸಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್. ಪ್ರೇಮಸುಧಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts