More

    ನಿತ್ಯ ಅಗ್ನಿಹೋತ್ರ ಆಚರಣೆ ಒಳ್ಳೆಯದು

    ಚಿತ್ರದುರ್ಗ: ವಿಶ್ವ ಅಗ್ನಿಹೋತ್ರ ದಿನದ ಅಂಗವಾಗಿ ಹರಿದ್ವಾರ ಪತಂಜಲಿ ಯೋಗ ಪೀಠ ಹಾಗೂ ಜಿಲ್ಲಾ ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪದದಿಂದ, ಗುರುವಾರ ನಗರದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ ಆವರಣದಲ್ಲಿ ಅಗ್ನಿಹೋತ್ರ ಹೋಮ ಏರ್ಪಡಿಸಲಾಗಿತ್ತು.

    ಈ ವೇಳೆ ಮಾತನಾಡಿದ ಯೋಗ ಗುರು ರವಿ ಕೆ.ಅಂಬೇಕರ್, ನಿತ್ಯ ಅಗ್ನಿಹೋತ್ರ ನೆರವೇರಿಸಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

    ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮೂರು ಮಂತ್ರಗಳನ್ನು ಪಠಿಸಿ ಹವಿಸ್ಸನ್ನು ಅಗ್ನಿಗೆ ಅರ್ಪಿಸಬೇಕು. ಇದರಿಂದ ಪ್ರಾಣವಾಯು ಬಿಡುಗಡೆಯಾಗಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಾತ್ವಿಕ ಆಹಾರ ಸೇವನೆ, ಸ್ವಚ್ಛತೆಯಿಂದ ಭೋಗ ರಹಿತ ಜೀವನ ರೂಢಿಸಿಕೊಳ್ಳಬೇಕು ಎಂದರು.

    ನೀವಷ್ಟೇ ಅಲ್ಲ. ನಿಮ್ಮ ಸುತ್ತಮುತ್ತಲಿನವರೂ ಆರೋಗ್ಯಪೂರ್ಣ ಬದುಕು ನಡೆಸಲು ಸಹಾಯವಾಗುತ್ತದೆ. ಇದರೊಂದಿಗೆ ನಿತ್ಯ ಅರ್ಧ ಗಂಟೆ ಕೆಲವು ಪ್ರಾಣಾಯಾಮಗಳನ್ನು ಮಾಡಿದರೆ ಕರೊನಾ ಸಹಿತ ಯಾವ ವೈರಸ್‌ಗಳಿಂದಲೂ ಆತಂಕ ಎದುರಾಗದು. ಕರೊನಾದಿಂದಾಗಿ ಇಡೀ ವಿಶ್ವವಿಂದು ಭಾರತದ ಸಂಸ್ಕೃತಿಯ ಕಡೆಗೆ ನೋಡುವಂತಾಗಿದೆ ಎಂದು ತಿಳಿಸಿದರು.

    ಉದ್ಯಮಿ ಗೋವಿಂದರೆಡ್ಡಿ, ಯೋಗ ಸಾಧಕರಾದ ನಾಗರಾಜ್, ರೇಣುಕಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts