More

    ನಿಜಲಿಂಗಪ್ಪ ಏಕೀಕರಣದ ರೂವಾರಿ

    ಚಿತ್ರದುರ್ಗ: ರಾಷ್ಟ್ರನಾಯಕ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ತಮ್ಮ ಜೀವಿತಾವಧಿ ಕೊನೆಯವರೆಗೂ ನಿಷ್ಕಳಂಕವಾಗಿ ಬದುಕಿದ್ದರು ಎಂದು ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ತಿಳಿಸಿದರು.

    ಎಸ್‌ಎನ್ ಟ್ರಸ್ಟ್ ವತಿಯಿಂದ ಸೀಬಾರದ ನಿಜಲಿಂಗಪ್ಪ ಸ್ಮಾರಕದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ಏಕೀಕರಣದಲ್ಲಿ ನಿಜಲಿಂಗಪ್ಪರ ಕೊಡುಗೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

    ಕರ್ನಾಟಕ ಏಕೀಕರಣದ ರೂವಾರಿ ಎಸ್‌ಎನ್, ಅನೇಕ ಬಾರಿ ನೆಹರೂ ಜತೆ ಸೇರಿ ಹೋರಾಟ ಮಾಡದಿದ್ದರೆ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುತ್ತಿರಲಿಲ್ಲ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕ ಏಕೀರಕಣಕ್ಕಾಗಿ ಹೋರಾಡಿದ್ದರಿಂದಾಗಿ ಮುಖ್ಯಮಂತ್ರಿಯಾಗಿದ್ದ ಒಂದೂವರೆ ವರ್ಷದಲ್ಲೇ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.

    2 ಬಾರಿ ರಾಷ್ಟ್ರಪತಿಯಾಗುವ ಅವಕಾಶ ಸಿಕ್ಕರೂ ಎಂದಿಗೂ ಅವರು ಅಧಿಕಾರದ ಬೆನ್ನತ್ತಿ ಹೋಗಲಿಲ್ಲ.ಭ್ರಷ್ಟಾಚಾರವನ್ನು ಹತ್ತಿರಕ್ಕೆ ಸುಳಿಯಲೂ ಬಿಡಲಿಲ್ಲ. ಶುದ್ಧ ಜೀವನ ಅವರದಾಗಿತ್ತು,ದೇಶ,ಸಮಾಜ,ಜನಕ್ಕಾಗಿ ಬದುಕಿದ ಹಿರಿಯ ಮುತ್ಸದಿಯನ್ನು ರಾಜ್ಯೋತ್ಸವದ ದಿನದಂದು ಎಲ್ಲರೂ ತಪ್ಪದೆ ಸ್ಮರಿಸಬೇಕಿದೆ ಎಂದರು.

    ಉತ್ತರ-ದಕ್ಷಿಣ ಕರ್ನಾಟಕದವರನ್ನು ನಿಭಾಯಿಸುವ ಛಾತಿ,ಶಕ್ತಿ,ಕೌಶಲ್ಯ,ಸಹೃದಯತೆ ಅವರಲ್ಲಿತ್ತು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಶ್ರೀ ಜಯದೇವ ಸ್ವಾಮೀಜಿ ಕೂಡ ಭಾಗವಹಿಸಿದ್ದರೆಂದರು. ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 26 ವರ್ಷಗಳ ನಂತರ ಕರ್ನಾಟಕ ಎಂದು ನಾಮಕರಣವಾಯಿತು. ಕನ್ನಡಕ್ಕೆ ಹೆಚ್ಚಿನ ಸ್ಥಾನಮಾನ ಸಿಗಬೇಕಿತ್ತು. ಇನ್ನು ಸಿಕ್ಕಿಲ್ಲದಿರುವುದು ನೋವಿನ ಸಂಗತಿ ಎಂದು ಬೇಸರಿಸಿದರು.

    ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಮಾತನಾಡಿ,ಕಳಂಕರಹಿತವಾಗಿ ಬದುಕಿದ್ದ ಎಸ್.ನಿಜಲಿಂಗಪ್ಪನವರು ಅನೇಕ ಬಾರಿ ಹಿನ್ನೆಡೆ ಅನುಭ ವಿಸ ಬೇಕಾಯಿತು. ಚಿತ್ರದುರ್ಗ ಅಥವಾ ದಾವಣಗೆರೆಯನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡಬೇಕೆಂಬ ಚಿಂತನೆ ಅವರಲ್ಲಿತ್ತು ಎಂದರು.

    ವಕೀಲ ಫಾತ್ಯರಾಜನ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ನಿವೃತ್ತ ಡಿವೈಎಸ್ಪಿಗಳಾದ ಸೈಯದ್ ಇಸಾಖ್,ಅಬ್ದುಲ್‌ರೆಹಮಾನ್,ಆರತಿ ಮಹಡಿ ಶಿವಮೂರ್ತಿ,ಕೆಇಬಿ ಷಣ್ಮುಖಪ್ಪ,ಯಶೋಧಮ್ಮ ಬಿ.ರಾಜಶೇಖರಪ್ಪ,ಮಹಡಿ ಶಿವಮೂರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts