ಚಿತ್ರದುರ್ಗ: ಹೊಳಲ್ಕೆರೆ ರಸ್ತೆ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೊಲೀಸ್ ಡಿ.ಮಲ್ಲಿಕಾರ್ಜುನ್ ಪೋಲಿಯೋ ಅಭಿಯಾನಕ್ಕೆ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ನಿರ್ಲಕ್ಷೃ ತೋರಬಾರದು. ಮಕ್ಕಳಲ್ಲಿನ ಉತ್ತಮ ಆರೋಗ್ಯ ಸಮಾಜ, ಕುಟುಂಬದ ನಿಜ ಆಸ್ತಿ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಇನಾಯತ್ ಸಹ ಶಿಕ್ಷಕರಾದ ಮನು, ಟಿ.ಜೆ.ಆಶಾ ಇತರರಿದ್ದಾರೆ.