More

    ಸೋಂಕು ಮುಕ್ತ ಚಿತ್ರದುರ್ಗಕ್ಕೆ ಮತ್ತೆ ಆತಂಕ

    ಚಿತ್ರದುರ್ಗ: ಕರೊನಾ ಸೋಂಕಿಂದ ಮುಕ್ತ ಜಿಲ್ಲೆ ಎನ್ನುವಂಥ ಸನ್ನಿವೇಶದಲ್ಲೇ ಗುರುವಾರ ಬಂದಿರುವ ಸೋಂಕಿನ ಸುದ್ದಿ ಚಿತ್ರದುರ್ಗವನ್ನು ಆತಂಕಕ್ಕೆ ನೂಕಿದೆ.

    ಅತ್ಯಾಚಾರಕ್ಕೆ ಒಳಗಾಗಿದ್ದ ಚಿತ್ರದುರ್ಗ ಜಿಲ್ಲೆ ಮಹಿಳೆಗೆ ಬೆಂಗಳೂರಲ್ಲಿ ಕರೊನಾ ಸೋಂಕು ಕಾಣಿಸಿರುವುದು ದೃಢವಾಗಿದೆ. ಇದರಿಂದಾಗಿ ಭರಮಸಾಗರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಹಾಗೂ ವಂಚನೆ ಆರೋಪ ಪ್ರಕರಣದ ವಿಚಾರಣೆಗೆ ನಿಯೋಜಿತರಾಗಿದ್ದ ಪಿಎಸ್‌ಐ ಸಹಿತ 10 ಮಂದಿ ಪೊಲೀಸರು, ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ನ್ಯಾಯಾಧೀಶರೊಬ್ಬರಿಗೆ ಈಗ ಹೋಂ ಕ್ವಾರಂಟೈನ್ ಅನಿವಾರ್ಯವಾಗಿದೆ.

    ಮಹಿಳೆ ಮೇಲೆ ಅತ್ಯಾಚಾರ ಹಾಗೂ ಹಣ ಪಡೆದು ಆಕೆಯನ್ನು ವಂಚಿಸಿದ್ದಾನೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ಚಾಲಕನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಆಕೆ, ಗರ್ಭ ಪಾತದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದಳು.

    ಆದ್ದರಿಂದ ಆಕೆಯನ್ನು ಜೂ.7ರಂದು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಜೂ.10ರಂದು ಆಕೆಯಲ್ಲಿ ಕರೊನಾ ಸೋಂಕು ದೃಢಪಟ್ಟಿರುವುದಾಗಿ ಎಸ್ಪಿ.ಜಿ.ರಾಧಿಕಾ ತಿಳಿಸಿದ್ದಾರೆ.

    10 ಪೊಲೀಸರು, ಇಬ್ಬರು ವೈದ್ಯರು ಹಾಗೂ ನ್ಯಾಯಾಧೀಶರೊಬ್ಬರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಅವರೆಲ್ಲರೂ ಈಗ ಹೋಂ ಕ್ವಾರಂಟೈನ್‌ನಲ್ಲಿದ್ದಾರೆಂದು ಎಸ್ಪಿ ತಿಳಿಸಿದ್ದಾರೆ.

    ಪಿಟಿಎಸ್ ಶಾಲೆ: ಹಿರಿಯೂರು ತಾಲೂಕು ಐಮಂಗಲ ತರಬೇತಿ ಶಾಲೆಗೆ ಕೋಲಾರದಿಂದ ಬಂದಿರುವ ತರಬೇತಾರ್ಥಿಯೊಬ್ಬರಲ್ಲಿ ಕರೊನಾ ಸೋಂಕು ದೃಢ ಪಟ್ಟಿದೆ. ಈಗ ಅವರನ್ನು ಧರ್ಮಪುರ ಆಸ್ಪತ್ರೆಗೆ ಸೇರಿಸಲಾಗಿದೆ. ಅವರೊಂದಿಗೆ ಬಂದಿದ್ದ 13 ಜನರನ್ನು ಜವಗೊಂಡನಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಶಂಕೆ ಹಿನ್ನೆಲೆಯಲ್ಲಿ ಚಳ್ಳಕೆರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಗಂಟಲು ದ್ರವ ತೆಗೆದಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

    ಕೋಲಾರದ ಪೊಲೀಸ್ ತರಬೇತಾರ್ಥಿ ಹಾಗೂ ಇಬ್ಬರು ಆರೋಗ್ಯ ಕಾರ್ಯಕರ್ತರ ಗಂಟಲು ದ್ರವದ ಪರೀಕ್ಷೆ ಮತ್ತೆ ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts