More

    ಪ್ರೋತ್ಸಾಹಧನ ಬಿಡುಗಡೆಗೆ ಒತ್ತಾಯಿಸಿ ಆಶಾ ಕಾರ‌್ಯಕರ್ತೆಯರ ಪ್ರತಿಭಟನೆ

    ಚಿತ್ರದುರ್ಗ: ಹದಿನೈದು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಎಂಸಿಟಿಎಸ್ ಪ್ರೋತ್ಸಾಹಧನದ ಬಿಡುಗಡೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಬಳಿ ಮಂಗಳವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

    ರಾಜ್ಯಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯವ್ಯಾಪಿ ಕರೆಯಂತೆ ಮುಷ್ಕರ ನಡೆಸಿದ ನೂರಾರು ಕಾರ್ಯಕರ್ತೆಯರು,ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್, ಶಿಸ್ತಿನ ಹೆಸರಲ್ಲಿ ಕಾರ‌್ಯಕರ್ತೆಯರ ಹೋರಾಟವನ್ನು ಹತ್ತಿಕ್ಕಲು ರಾಜ್ಯಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

    ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಕಾರ‌್ಯಕರ್ತೆಯರಿಗೆ ಮಾಸಿಕ 12000 ರೂ.ವೇತನ ಕೊಡಬೇಕೆಂದು ಆಗ್ರಹಿಸಿದರು.

    ಆಶಾ ಕಾರ‌್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ ಮಾತನಾಡಿ, ದಿನದಲ್ಲಿ ಕೇವಲ 2 ಗಂಟೆ ದುಡಿದರೆ ಸಾಕೆಂದು ಹೇಳಿದ್ದ ಸರ್ಕಾರ, ಈಗ ಹಗಲು-ಇರುಳು ಎಂಬ ಪರಿವೆಯೇ ಇಲ್ಲದೇ ಕಾರ‌್ಯಕರ್ತೆಯರನ್ನು ದುಡಿಮೆಗೆ ಹಚ್ಚಿದೆ. ಆದರೆ ಕೆಲಸಕ್ಕೆ ತಕ್ಕ ವೇತನ ಕೊಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮಂಜುಳಾ ಮತ್ತಿತರರು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts