More

  ಭಾರತದ ವಿಭಜನೆಗೆ ನೆಹರು ಹೇಡಿತನ ಕಾರಣ

  ಚಿತ್ರದುರ್ಗ: ಭಾರತದ ವಿಭಜನೆಗೆ ಜವಾಹರಲಾಲ್ ನೆಹರು ಮತ್ತಿತರರ ಹೇಡಿತನ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

  ವಿವೇಕಾನಂದರ ಜಯಂತಿ ನಿಮಿತ್ತ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಎಬಿವಿಪಿ ಮಂಗಳವಾರ ಆಯೋಜಿಸಿದ್ದ ಯುವ ಚಿಂತನದಲ್ಲಿ ಮಾತನಾಡಿ, 1946ರಲ್ಲಿ ಹಿಂದುಗಳ ಮೇಲಾದ ದೌರ್ಜನ್ಯಗಳಿಂದ ಬೆದರಿದ್ದ ನೆಹರು ಒಪ್ಪಿಗೆಯಿಂದ ಭಾರತವನ್ನು ಮೂರು ಭಾಗವಾಗಿ ಕತ್ತರಿಸಲಾ ಯಿ ತು. ಇದರಿಂದಾಗಿ ನಾವು ಪವಿತ್ರ ಭೂಮಿ ಕಳೆದುಕೊಂಡೆವು.

  ವಿಭಜನೆಯಿಂದ ಪಾಕಿಸ್ತಾನದಲ್ಲಿ ಉಳಿದ ಶೇ.24 ಹಿಂದುಗಳ ಸಂಖ್ಯೆ ಇಂದು 1.50ಕ್ಕೆ ಹಾಗೂ ಬಾಂಗ್ಲಾದಲ್ಲಿದ್ದ ಶೇ.33 ಸಂಖ್ಯೆ ಶೇ.3 ಕ್ಕೆ ಕುಸಿದಿದೆ. ಆದರೆ, ಭಾರತದಲ್ಲಿದ್ದ ಅಲ್ಪಸಂಖ್ಯಾತರ ಸಂಖ್ಯೆ ಶೇ.2.50 ರಿಂದ 22 ಕ್ಕೆ ಏರಿದೆ. ದೇಶವಿಂದು ಕವಲು ದಾರಿಯಲ್ಲಿದ್ದು ಮತ್ತೆ ವಿಭಜನೆ ಆತಂಕ ಎದುರಿಸುತ್ತಿದೆ ಎಂದರು.

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನೆಪದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣದ ಷಡ್ಯಂತ್ರ ನಡೆದಿದೆ. ಇದರ ಪ್ರಯೋಗದಿಂದಲೇ ಮಂಗಳೂರಲ್ಲಿ ಗಲಭೆ ಆಗಿದ್ದು, ಕಾಶ್ಮೀರ ಮಾದರಿಯಲ್ಲಿ ಹಿಂಸಾಚಾರ ನಡೆಯಿತಾದರೂ ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಅವರ ದಿಟ್ಟತನದಿಂದಾಗಿ ನಿಯಂತ್ರಣಕ್ಕೆ ಬಂದಿತೆಂದರು.

  ತೊಂದರೆ ಆಗಲ್ಲ: ಸಿಎಎಯಿಂದ ಮುಸ್ಲಿಂರೂ ಸೇರಿದಂತೆ ಮೂಲ ನಿವಾಸಿಗಳಿಗೆ ತೊಂದರೆಯಾಗದು. ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದಿಂದ ಆಶ್ರಯ ಕೋರಿ ಭಾರತಕ್ಕೆ ಬರುವ ಅಲ್ಪಸಂಖ್ಯಾತರ ಪೌರತ್ವಕ್ಕಾಗಿ ಕಾಯ್ದೆ ಜಾರಿಯಾಗಿದೆ. ಹಿಂದೆ ಕಾಯ್ದೆ ಕುರಿತು ಚರ್ಚೆಯಾದರೂ ಜಾರಿಯಾಗಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ ಧೈರ್ಯದಿಂದ ಜಾರಿಗೊಳಿಸಿದ್ದಾರೆ. ಈ ದೇಶ ದಲ್ಲಿರುವ ವರ ನೋಂದಣಿಗೆ ಎನ್‌ಆರ್‌ಸಿ ಅಗತ್ಯವಿದೆ ಎಂದರು.

  ಶಿವನ ವರ: ಷಿಕಾಗೊ ವೇದಿಕೆಯಿಂದ ಜಗತ್ತನ್ನೇ ಬೆರಗು ಮಾಡಿದ್ದ ಸ್ವಾಮಿ ವಿವೇಕಾನಂದರು ಶಿವನ ವರದಿಂದ ಜನಿಸಿದ್ದವರು. ದೇಶಕ್ಕೆ ಸ್ವಾತಂತ್ರೃ ದೊರಕುವವರೆಗೆ ಭಾರತಮಾತೆಯೇ ದೇವರೆಂದು ಹೇಳಿದ್ದರು. ಷಿಕಾಗೊ ವಿಶ್ವ ಧರ್ಮ ಸಮ್ಮೇಳನವನ್ನು ವಿಶ್ವ ಮತ ಸಮ್ಮೇಳನವೆಂದು ಕರೆಯಬೇಕೆಂದು ಪ್ರತಿಪಾದಿಸಿದರು. ಚಿತ್ರದುರ್ಗದ ಹೆಣ್ಣು ಮಕ್ಕಳು ಸಮಯ ಬಂದರೆ ಒನಕೆ ಓಬವ್ವ, ಗಂಡು ಮಕ್ಕಳು ಮದಕರಿನಾಯಕರಾಗಬೇಕೆಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts