More

    ಲಾಕ್‌ಡೌನ್-3 ಎಫೆಕ್ಟ್ ದುರ್ಗಕ್ಕಿಲ್ಲ

    ಚಿತ್ರದುರ್ಗ: ಕೇಂದ್ರ ಸರ್ಕಾರ ಮೇ 17ರ ವರೆಗೆ ಲಾಕ್‌ಡೌನ್ ವಿಸ್ತರಿಸಿದ್ದರೂ ಹಸಿರು ವಲಯದಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮೇ 4ರಿಂದ ಸಾರಿಗೆ ಸಹಿತ ವಾಣಿಜ್ಯ ಚಟುವಟಿಕೆಗಳೆಲ್ಲವೂ ಗರಿಗೆದರಲಿವೆ.

    ಕೇಂದ್ರ ಗೃಹ ಮಂತ್ರಾಲಯ ಮಾರ್ಗಸೂಚಿಯಂತೆ ರಾತ್ರಿ 7ರ ವರೆಗೆ ಅಂಗಡಿ ಮುಂಗಟ್ಟುಗಳ ವಹಿವಾಟಿಗೆ ಅವಕಾಶವಿದೆ.

    ಅಂಗಡಿ, ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಹಿವಾಟು ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಸೋಪಿನಲ್ಲಿ ಕೈ ತೊಳೆಯುವ ವ್ಯವಸ್ಥೆ ಇರಬೇಕು. ಬಸ್‌ಗಳಲ್ಲಿ, ಆಟೋ, ಟ್ಯಾಕ್ಸಿ ವಾಹನಗಳಿಗೆ ಶೇ.50 ಜನರಿಗೆ ಜಿಲ್ಲೆಯೊಳಗಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರಕು ಸಾಗಾಣಿಕೆ ವಾಹನಕ್ಕೆ ಯಾವುದೇ ಅಡ್ಡಿ ಇಲ್ಲ.

    ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್‌ಗಳು ತೆರೆದಿರುತ್ತವೆ. ವೈದ್ಯಕೀಯ ಉಪಕರಣಗಳ ಮಾರಾಟ, ಪ್ರಯೋಗಾಲಯಗಳು, ಪಶು ಆಸ್ಪತ್ರೆ, ಇಂಜಕ್ಷನ್ ಹಾಗೂ ಔಷಧ ಮಾರಾಟ, ಆಸ್ಪತ್ರೆ ಕಟ್ಟಡ, ತುರ್ತು ವೈದ್ಯಕೀಯ ಸೇವೆ, ಕೃಷಿ ಚಟುವಟಿಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ಅವಕಾಶವಿದೆ.

    ಜಿಲ್ಲಾದ್ಯಂತ ಎಲ್ಲ ಮದ್ಯದಂಗಡಿಗಳು ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ಕಾರ್ಯನಿರ್ವಹಿಸಲಿವೆ. ಕಟ್ಟಡ ಕಾಮಗಾರಿಗೆ ಅಗತ್ಯ ಸರಕು ಸಾಗಣೆಗೆ ಅನುಮತಿ ಇದೆ. ಗ್ಯಾರೇಜ್ ತೆರೆದಿರುತ್ತವೆ.

    ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಸರ್ಕಾರಿ ಚಟುವಟಿಕೆಗಳಿಗೆ ಮಾತ್ರ ಡಾಟಾ ಎಂಟ್ರಿ ಹಾಗೂ ಕಾಲ್‌ಸೆಂಟರ್‌ಗೆ ಅವಕಾಶ. ಗ್ರಾಪಂ ಸಾಮಾನ್ಯ ಸೇವಾ ಕೇಂದ್ರ ತೆರೆಯಲು, ಕೋರಿಯರ್ ಸೇವೆ, ಪುಸ್ತಕ ಮಳಿಗೆಗಳು, ಹೋಟೆಲ್, ಡಾಬಾ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿದೆ. ಗಣಿಗಾರಿಕೆ, ರಸ್ತೆ ನಿರ್ಮಾಣ, ಕಟ್ಟಡ ಕಾಮಗಾರಿ, ಎಲ್ಲ ರೀತಿಯ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ಕೊಡಲಾಗಿದೆ. ಮದುವೆ ಮತ್ತಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

    ಯಾವುದಕ್ಕೆ ನಿಷೇಧ: ಪ್ಯಾಸೆಂಜರ್ ರೈಲು, ಅಂತರ ರಾಜ್ಯ ಬಸ್ ಸರ್ವಿಸ್, ಶಾಲೆ, ಕಾಲೇಜುಗಳು, ಕೋಚಿಂಗ್ ಸೆಂಟರ್, ಸಿನಿಮಾ ಮಂದಿರ, ಜಿಮ್, ಕ್ರೀಡಾ ಸಾಮಗ್ರಿ ಅಂಗಡಿ, ಈಜುಕೊಳ, ಉದ್ಯಾನ, ಮನರಂಜನೆ ಸ್ಥಳಗಳು, ಸಭಾಂಗಣ ನಿಷೇಧವಿದೆ. ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಅನಗತ್ಯವಾಗಿ ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯಗಳಿಗೆ ಪ್ರಯಾಣ ಬೆಳೆಸುವಂತಿಲ್ಲ ಹಾಗೂ ಧಾರ್ಮಿಕ ಸಭೆಗಳನ್ನು ನಡೆಸುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts